ಗುಜರಾತ್ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಆಡಲು ಕಣಕ್ಕಿಳಿಯದಿದ್ದರೂ ಕ್ರೀಡಾಕೂಟ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಸಿಂಧು, ಬ್ಯಾಡ್ಮಿಂಟನ್ ಆಟಗಾರರು ಮಾತ್ರವಲ್ಲದೇ ಅನೇಕ ಬೇರೆ ಬೇರೆ ಕ್ರೀಡೆಗಳ ಆಟಗಾರರ ಜೊತೆ ತಮ್ಮ ಮಾತನಾಡಿ ತಮ್ಮ ಅನುಭವ ಹಂಚಿಕೊಂಡರು
ಹವಾಲ್ದಾರ್ ಅಚಿಂತ ಅವರು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಗೌರವ ತಂದಿದ್ದಾರೆ. ಅಚಿಂತಾ ಇಂದು ಜಬಲ್ಪುರ ತಲುಪಿದಾಗ ಅವರನ್ನು ಭವ್ಯ ಸ್ವಾಗತ ಮಾಡಲಾಯಿತು. ದುಮ್ನಾ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತವನ್ನು ಆಯೋಜಿಸಲಾಗಿತ್ತು.
Commonwealth Games 2022: ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ 17 ಚಿನ್ನ ಸೇರಿದಂತೆ ಒಟ್ಟು 49 ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದೆ. ಕಾಮನ್ವೆಲ್ತ್ ಗೇಮ್ಸ್ನ 10 ನೇ ದಿನದಂದು, ನೀತು ಘಂಘಾಸ್, ಅಮಿತ್ ಪಂಗಲ್, ನಿಖತ್ ಜರೀನ್ ಮತ್ತು ಅಲ್ಧೌಸ್ ಪಾಲ್ ಎದುರಾಳಿ ಆಟಗಾರರನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದರು. ಅಬ್ದುಲ್ಲಾ ಅಬು ಬಕರ್ ಬೆಳ್ಳಿ ಪದಕ ಪಡೆದರು.
CWG 2022: ಟೂರ್ನಿಯ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಭಾರತೀಯ ಆಟಗಾರರಾಗಿರುವ ಶರತ್ ಕಮಲ್ ಹಾಗೂ ಸಥಿಯನ್ ಗಣಶೇಖರನ್ ಜೋಡಿ ಡಬಲ್ಸ್ ನಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ತಂದುಕೊಟ್ಟಿದ್ದಾರೆ. ಇದು ಭಾರತದ ಪಾಲಿಗೆ ಈ ಟೂರ್ನಿಯಲ್ಲಿನ 49 ನೇ ಪದಕವಾಗಿದೆ.
CWG 2022: ಭಾರತೀಯ ಬಾಕ್ಸಿಂಗ್ ಪಟು ನಿಖಹತ್ ಜರೀನ್ ಬಾಕ್ಸಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ನಿಖಹತ್ ಜರೀನ್ ಬಾಕ್ಸಿಂಗ್ನಲ್ಲಿ ಮಹಿಳೆಯರ 48-50 ಕೆಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ವಿಭಾಗದ ಫೈನಲ್ ಪಂದ್ಯದಲ್ಲಿ ನಿಖಹತ್ ಜರೀನ್ ನಾರ್ತ್ ಐರ್ಲೆಂಡ್ನ ಕಾರ್ಲಿಯನ್ನು 5-0 ಅಂತರದಿಂದ ಸೋಲಿಸಿದ್ದಾರೆ. ಇದು ಕಾಮನ್ವೆಲ್ತ್ ಕ್ರೀಡಾಕೂಟ2022 ರಲ್ಲಿ ಭಾರತಕ್ಕೆ 48 ನೇ ಪದಕ ಮತ್ತು ಬಾಕ್ಸಿಂಗ್ನಲ್ಲಿ ಮೂರನೇ ಚಿನ್ನದ ಪದಕವಾಗಿದೆ. ನಿಖಹತ್ ಮೊದಲ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಪದಕ ಗೆದ್ದಿದ್ದಾರೆ.
Commonwealth Games 2022: ಕಾಮನ್ವೆಲ್ತ್ ಕ್ರೀಡಾಕೂಟದ 10ನೇ ದಿನವಾದ ಇಂದೂ ಕೂಡ ಭಾರತೀಯ ಅಥ್ಲೀಟ್ ಗಳ ಪದಕ ಬೇಟೆ ಮುಂದುವರೆದಿದೆ. ಭಾರತೀಯ ಬಾಕ್ಸರ್ ಆಗಿರುವ ಅಮಿತ್ ಪಂಘಾಲ್ ಬಾಕ್ಸಿಂಗ್ ಕ್ರೀಡಾಕೂಟದ 48-51 ಕೆಜಿ ವಿಭಾಗದಲ್ಲಿ ಭಾರತಕ್ಕ ಮತ್ತೊಂದು ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.
ಪ್ರಸ್ತುತ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ 22ನೇ ಆವೃತ್ತಿಯ ಕಾಮನ್ವೆಲ್ತ್ ಕ್ರೀಡಾಕೂಟ ನಡೆಯುತ್ತಿದೆ. ಒಂಬತ್ತು ದಿನಗಳ ಲೈವ್ ಆಕ್ಷನ್ ಪೂರ್ಣಗೊಂಡಿದೆ. ಶನಿವಾರ ಅಂದರೆ ಆಗಸ್ಟ್ 6ರಂದು ಟೀಮ್ ಇಂಡಿಯಾಕ್ಕೆ ಅತ್ಯುತ್ತಮ ದಿನವಾಗಿತ್ತು.
ಕಾಮನ್ವೆಲ್ತ್ ಗೇಮ್ಸ್ 2022ರ ಪದಕ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. 13 ಚಿನ್ನ, 11 ಬೆಳ್ಳಿ ಮತ್ತು 16 ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ಒಟ್ಟು 40 ಪದಕಗಳನ್ನು ತನ್ನದಾಗಿಸಿಕೊಂಡಿದೆ.
Commonwealth Games 2022: ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿನೇಶ್ ಫೋಗಟ್ ಭಾರತಕ್ಕೆ 11ನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಅಂತಿಮ ಪಂದ್ಯದಲ್ಲಿ ವಿನೇಶ್ ಫೋಗಟ್ ಶ್ರೀಲಂಕಾದ ಕುಸ್ತಿಪಟುವನ್ನು ಸೋಲಿಸಿದ್ದಾರೆ.
Commonwealth Games 2022: ಕಾಮನ್ವೆಲ್ತ್ ಕ್ರೀಡಾಕೂಟದ ಲಾನ್ ಬೌಲ್ಸ್ ಪಂದ್ಯಾವಳಿಯಲ್ಲಿ ಶನಿವಾರ ಚಿನ್ನದ ಪದಕದ ಪಂದ್ಯದಲ್ಲಿ ಭಾರತೀಯ ಪುರುಷರ ತಂಡ ಉತ್ತರ ಐರ್ಲೆಂಡ್ ತಂಡದ ವಿರುದ್ಧ ಸೋಲನ್ನು ಅನುಭವಿಸಿದೆ. ಈ ಪಂದ್ಯದಲ್ಲಿ ಉತ್ತರ ಐರ್ಲೆಂಡ್ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡರೆ, ಭಾರತೀಯ ತಂಡ ಬೆಳ್ಳಿಯ ಪದಕಕ್ಕೆ ತೃಪ್ತಿ ಪಡೆದುಕೊಂಡಿದೆ. ವಿಕ್ಟೋರಿಯಾ ಪಾರ್ಕ್, ರಾಯಲ್ ಲಿಮಿಂಗ್ಟನ್ ಸ್ಪಾನಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಸುನಿಲ್ ಬಹದ್ದೂರ್, ನವನೀತ್ ಸಿಂಗ್, ಚಂದನ್ ಕುಮಾರ್ ಸಿಂಗ್ ಮತ್ತು ದಿನೇಶ್ ಕುಮಾರ್ ಅವರನ್ನೊಳಗೊಂಡ ತಂಡ ಐರ್ಲೆಂಡ್ ತಂಡದ ವಿರುದ್ಧ ಸೋಲನ್ನು ಅನುಭವಿಸಿದೆ.
ಹೈಜಂಪ್ನಲ್ಲಿ ತೇಜಸ್ವಿನ್ ಶಂಕರ್ ಕಂಚು, ಲಾಂಗ್ ಜಂಪ್ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಮತ್ತು 10,000 ಮೀಟರ್ ಓಟದ ನಡಿಗೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ನಂತರ ಅಥ್ಲೆಟಿಕ್ಸ್ನಲ್ಲಿ ಇದು ಭಾರತಕ್ಕೆ ನಾಲ್ಕನೇ ಪದಕವಾಗಿದೆ.
ಹಿಮಾ ದಾಸ್ ಆರಂಭದಿಂದಲೂ ಐವರು ಮಹಿಳಾ ಓಟಗಾರರಲ್ಲಿ ಅಗ್ರಸ್ಥಾನದಲ್ಲಿದ್ದರು, ಜಾಂಬಿಯಾದ ರೋಡಾ ನ್ಜೊಬ್ವು 23.85 ಸೆಕೆಂಡ್ಗಳಲ್ಲಿ ಎರಡನೇ ಸ್ಥಾನ ಗಳಿಸಿದರೆ, ಉಗಾಂಡಾದ ಜಾಸೆಂಟ್ ನ್ಯಾಮಹುಂಗೆ 24.07 ಸೆಕೆಂಡ್ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು.
Cricket In Olympics: ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ನ ಬಹುನಿರೀಕ್ಷಿತ ಮರುಪ್ರವೇಶದ ಸಾಧ್ಯತೆ ಹೆಚ್ಚಾಗತೊಡಗಿದೆ. ಏಕೆಂದರೆ ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿ (IOC) ಯುಎಸ್ಎಯ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028 ರ ಒಲಂಪಿಕ್ಸ್ನಲ್ಲಿ ಸೇರ್ಪಡೆಗೊಳ್ಳಲು ಬಯಸುವ 9 ಇತರ ಆಟಗಳ ವಿಮರ್ಶೆಯ ಪಟ್ಟಿಯಲ್ಲಿ ಕ್ರಿಕೆಟ್ ಅನ್ನು ಇರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.