1999 ರಿಂದ ಹೆಚ್ಚಿನ ಎಕ್ಸಿಟ್ ಪೋಲ್ ಸಮೀಕ್ಷೆಗಳು ತಪ್ಪಾಗಿವೆ. ಚುನಾವಣೋತ್ತರ ಸಮೀಕ್ಷೆಗಳು ಚುನಾವಣೆಯ ನಿಜವಾದ ಫಲಿತಾಂಶಗಳಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
84 ದಿನಗಳಲ್ಲಿ 7 ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆ 2019ರ ಚುನಾವಣಾ ಫಲಿತಾಂಶ ಮೇ 23 ರಂದು ಹೊರಬೀಳಲಿದೆ. ಚುನಾವಣೆ ಮುಗಿದ ಬೆನ್ನಲ್ಲೇ ನಿನ್ನೆ ಸಂಜೆ ಹಲವು ಮಾಧ್ಯಮಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಕೂಡ ಪ್ರಕಟವಾಗಿವೆ.
ಲೋಕಸಭಾ ಚುನಾವಣೆಗೆ ಮತದಾನ ಪೂರ್ಣಗೊಳ್ಳುತ್ತಿದ್ದಂತೆ(ಲೋಕಸಭಾ ಚುನಾವಣೆಗಳು 2019), ಎಲ್ಲರ ಚಿತ್ತ 2019 ರ ಎಕ್ಸಿಟ್ ಪೋಲ್(Exit Poll 2019) ನತ್ತ ನೆಟ್ಟಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳ ಮೂಲಕ ಹೊರಹೊಮ್ಮುವ ಸಂಭವನೀಯ ಚುನಾವಣಾ ಪ್ರವೃತ್ತಿಗಳು / ಫಲಿತಾಂಶಗಳಿಗಾಗಿ ಇಡೀ ದೇಶ ನಿರೀಕ್ಷಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.