ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ಆಗಸ್ಟ್ 8, 23:59 ಗಂಟೆಗಳವರೆಗೆ ಮೊಬೈಲ್ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಹರಿಯಾಣ ಸರ್ಕಾರ ಬುಧವಾರ ಪ್ರಕಟಿಸಿದೆ.
Crime News: ಹರ್ಯಾಣಾದ ಐಎನ್ಎಲ್ಡಿ ರಾಜ್ಯಾಧ್ಯಕ್ಷ ಹಾಗೂ ಬಹದ್ದೂರ್ಗಢದ ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಜಜ್ಜರ್ನ ಬರಾಹಿ ಗೇಟ್ ಬಳಿ ಅವರ ಮೇಲೆ ಈ ದಾಳಿ ನಡೆದಿದೆ. (Crime News In Kannada)
ಹರ್ಯಾಣದ ನೂಡ್ನಲ್ಲಿ ಆರು ಜನರನ್ನು ಬಲಿ ಪಡೆದಿರುವ ಮತೀಯ ಸಂಘರ್ಷವನ್ನು ತಡೆಯಲು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸುವಂತೆ ಹಾಗೂ ದ್ವೇಷಭಾಷಣಗಳಿಗೆ ಕಡಿವಾಣ ಹಾಕುವಂತೆ ಸುಪ್ರೀಂಕೋರ್ಟ್ ಹರ್ಯಾಣ ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೆ, ಘಟನೆಯ ಸಂಬಂಧ ಎಎಚ್ಪಿ ಹಾಗೂ ಬಜರಂಗದಳದಿಂದ ದೆಹಲಿಯಲ್ಲಿ ಆಯೋಜನೆಯಾಗಿರುವ ರ್ಯಾಲಿಗಳಿಗೆ ತಡೆ ನೀಡಲು ನ್ಯಾಯಪೀಠ ನಿರಾಕರಿಸಿದೆ.
Manohar Lal Khattar: ಹರಿಯಾಣದ ಪ್ರತಿಯೊಂದು ಗ್ರಾಮ ಪಂಚಾಯ್ತಿಗಳಲ್ಲಿ ಸಂಸ್ಕೃತಿ ಮಾದರಿ ಶಾಲೆ, ಪ್ರತಿ ಗ್ರಾಮಕ್ಕೂ ಅತಿವೇಗದ ಇಂಟರ್ನೆಟ್ ಸೇವೆ ಒದಗಿಸುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ಮೇರಾ ಪಾನಿ ಮೇರಿ ವಿರಾಸತ್ ಯೋಜನೆ: ಹರಿಯಾಣ ಸರ್ಕಾರವು ತನ್ನ ರಾಜ್ಯದ ರೈತರಿಗೆ 7000 ರೂ.ಗಳ ಆರ್ಥಿಕ ನೆರವು ನೀಡುತ್ತದೆ. ‘ಮೇರಾ ಪಾನಿ ಮೇರಿ ವಿರಾಸತ್ ಯೋಜನೆ’ ಅಡಿ ಈ ಸಹಾಯಧನ ನೀಡಲಾಗುತ್ತಿದೆ.
ಕೊರೊನಾ ಮೂರನೇ ಅಲೆಯ ಭೀತಿಯ ನಡುವೆ ದೇಶದಲ್ಲಿನ ಪ್ರಕರಣಗಳ ಏರಿಕೆಯಿಂದಾಗಿ ರಾಜ್ಯವು ಸೆಪ್ಟೆಂಬರ್ 20 ರವರೆಗೆ ಲಾಕ್ಡೌನ್ ನ್ನು ವಿಸ್ತರಿಸಲಿದೆ ಎಂದು ಖಟ್ಟರ್ ನೇತೃತ್ವದ ಸರ್ಕಾರ ಭಾನುವಾರ ಘೋಷಿಸಿತು.ಆದಾಗ್ಯೂ, ರಾಜ್ಯವು ಕೆಲವು ಸಡಿಲಿಕೆಗಳನ್ನು ಅನುಮತಿಸುತ್ತದೆ.
ರೈತರಿಗೆ ಒಳ್ಳೆಯ ಸುದ್ದಿ ಇದೆ. ರೈತರ ಅನುಕೂಲಕ್ಕಾಗಿ ಮತ್ತು ಆದಾಯವನ್ನು ಹೆಚ್ಚಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರದ (ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ) ಜೊತೆಗೆ ರಾಜ್ಯ ಸರ್ಕಾರವು ರೈತರಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಈಗ ರಾಜ್ಯ ಸರ್ಕಾರ ರೈತರಿಗೆ 7000 ರೂ.ಗಳ ಆರ್ಥಿಕ ನೆರವು ನೀಡುತ್ತಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ.
ಹರಿಯಾಣ ಸರ್ಕಾರವು ಭಾನುವಾರ (ಜೂನ್ 27) ರಾಜ್ಯದಲ್ಲಿ COVID-19 ಸಂಬಂಧಿತ ನಿರ್ಬಂಧಗಳನ್ನು ವಿಸ್ತರಿಸುವುದಾಗಿ ಘೋಷಿಸಿತು.ಹೊಸ ನಿರ್ಬಂಧಗಳ ಆದೇಶಗಳು ಜೂನ್ 28 ರಂದು ಬೆಳಿಗ್ಗೆ 5 ರಿಂದ ಜಾರಿಗೆ ಬರಲಿದ್ದು, ಜುಲೈ 5 ರವರೆಗೆ ಇರುತ್ತದೆ.
ಹರಿಯಾಣ ಸರ್ಕಾರವು ಪಟಾಕಿಗಳ ಮೇಲಿನ ನಿಷೇಧವನ್ನು ಮಾರ್ಪಡಿಸಬಹುದು ಎಂದು ಸುಳಿವು ನೀಡಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ದೀಪಾವಳಿಯಂದು 2 ಗಂಟೆಗಳ ಕಾಲ ಪಟಾಕಿ ಸಿಡಿಸಲು ಜನರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು. ಆದಾಗ್ಯೂ, ಬಿಜೆಪಿ ನಾಯಕ ವರದಿಗಾರರೊಂದಿಗಿನ ಸಂವಾದದಲ್ಲಿ ಈ ಚಟುವಟಿಕೆಗೆ ಮೀಸಲಾದ ಸಮಯವನ್ನು ಉಲ್ಲೇಖಿಸಿಲ್ಲ.
ಅರಾವಳಿ ಕಾಡಿನಲ್ಲಿ ಸಾವಿರಾರು ಎಕರೆ ಅರಣ್ಯ ಭೂಪ್ರದೇಶದಲ್ಲಿ ರಿಯಲ್ ಎಸ್ಟೇಟ್ ನಿರ್ಮಾಣಕ್ಕೆ ಅವಕಾಶ ನೀಡಕೂಡದು ಎಂದು ಸುಪ್ರೀಂಕೋರ್ಟ್ ಶುಕ್ರವಾರದಂದು ಆದೇಶ ನೀಡಿದೆ.ಅರಾವಳಿ ಅರಣ್ಯದಲ್ಲಿ ರಿಯಲ್ ಎಸ್ಟೇಟ್ ನಿಂದಾಗಿ ನಾಶವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ "ಇದು ನಿಜವಾಗಿಯೂ ಆಘಾತಕಾರಿ. ನೀವು ಅರಣ್ಯವನ್ನು ನಾಶ ಮಾಡುತ್ತಿದ್ದೀರಿ. ಇದಕ್ಕೆ ಅನುಮತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.