ಬಿಡುಗಡೆಯಾದ ದಿನದಿಂದಲೂ ಈ ಸಿನಿಮಾ ಅಪಾರ ಜನಮೆಚ್ಚುಗೆಗೆ ಒಳಗಾಗಿದ್ದು, ಅನೇಕ ವಿಮರ್ಶಕರು ಮತ್ತು ಗಣ್ಯ ವ್ಯಕ್ತಿಗಳು ಇದಕ್ಕೆ ಶ್ಲಾಘನೆ ಸಲ್ಲಿಸಿದ್ದಾರೆ. ಪಕ್ಕಾ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮೂಡಿಬಂದಿರುವ ಈ ಚಿತ್ರ, ಸಮಾಜಕ್ಕೆ ದೊಡ್ಡ ಸಂದೇಶವನ್ನು ನೀಡಿದೆ.
ಕಿಚ್ಚ ಸುದೀಪ್ಗೆ ಸಂಬಂಧಿಸಿದ ‘ಹೆಬ್ಬುಲಿ ಕಟ್’ ಚಿತ್ರದ ಟ್ರೈಲರ್ ಜೂನ್ 16ರಂದು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.ರಾಯಚೂರು ಮೂಲದ ಭೀಮರಾವ್ ಪೈದೊಡ್ಡಿ ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ಗೆ ಸುದೀಪ್, “ಆಕರ್ಷಕವಾಗಿದೆ, ಚಿತ್ರತಂಡಕ್ಕೆ ಶುಭಾಶಯ,” ಎಂದು ಎಕ್ಸ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಹೆಬ್ಬುಲಿ ಕಟ್" ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜದ ಕೊರತೆಗಳನ್ನು ಪ್ರಶ್ನಿಸುವ, ಜಾಗೃತಿಯ ಕಿಡಿಯನ್ನು ಹೊತ್ತಿಸುವ ಒಂದು ಕಲಾತ್ಮಕ ಪ್ರಯತ್ನ.
Hebbuli Cut:ʼಹೆಬ್ಬುಲಿ' ಸಿನಿಮಾದಲ್ಲಿ ಕಿಚ್ಚ ಸುದೀಪರ ಕೇಶವಿನ್ಯಾಸವು ದೊಡ್ಡ ಟ್ರೆಂಡ್ ಸೃಷ್ಟಿಸಿತ್ತು. ʼಹೆಬ್ಬುಲಿ ಕಟ್ʼ ಎಂದೇ ಖ್ಯಾತಿಯಾಗಿದ್ದ ಈ ಹೇರ್ ಸ್ಟೈಲ್ ಇದೀಗ ಸಿನಿಮಾದ ಶೀರ್ಷಿಕೆಯಾಗಿರುವುದು ವಿಶೇಷ. ಈಗಾಗಲೇ ಚಿತ್ರತಂಡವು ಬಿಡುಗಡೆಗೊಳಿಸಿರುವ ಈ ಸಿನಿಮಾದ ಪೋಸ್ಟರ್ ಮತ್ತು ತುಣುಕುಗಳು ಗಮನ ಸೆಳೆಯುತ್ತಿವೆ.
ನನ್ನ ಹೃದಯಕ್ಕೆ ಅತ್ಯಂತ ಹತ್ತಿರಾಗಿರುವ ‘ಹೆಬ್ಬುಲಿ ಕಟ್’ ಚಿತ್ರವನ್ನು ನಾಡಿನ ಜನತೆಗೆ ಅರ್ಪಿಸಲು ಅತ್ಯಂತ ಖುಷಿ ಮತ್ತು ಹೆಮ್ಮೆಯಿದೆ. ಭೀಮರಾವ್ ಪಿ ಅವರ ನಿರ್ದೇಶನದ ಈ ಚಿತ್ರ ನನ್ನ ಕಡೆಯಿಂದ ಕನ್ನಡಿಗರಿಗೆ ಹೊಸ ವರ್ಷದ ಕಾಣಿಕೆ ಮತ್ತು ಬದ್ಧತೆ ಎಂದು ಹೇಳಿಕೊಂಡಿದ್ದರು.