India-New Zealand T20I: ಪಂದ್ಯವು ಮಧ್ಯಾಹ್ನ 2.16ಕ್ಕೆ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ 20 ಓವರ್ಗಳ ಬದಲಾಗಿ 5 ಓವರ್ ಗೆ ಪಂದ್ಯವನ್ನು ಸೀಮಿತಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಸರಣಿಯೊಂದ ಹಿರಿಯರಿಗೆ ವಿಶ್ರಾಂತಿ ನೀಡಲಾಗಿದೆ. ಬಹುತೇಕ ಯುವ ತಂಡವೇ ಈ ಬಾರೀ ಕಿವೀಸ್ ವಿರುದ್ಧ ಸೆಣಸಾಡಲಿದೆ.
ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್, ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಅವರು ಯಶಸ್ವಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ. ಎರಡನೇ ಟಿ 20 ಪಂದ್ಯದಲ್ಲಿ, ರಿಷಬ್ ಪಂತ್, ರೋಹಿತ್ ಜೊತೆ ಆರಂಭಿಕ ಪಾಲುದಾರರಾಗಿ ಅಂಗಣಕ್ಕಿಳಿದರು. ಅವರೂ ಸಹ ನಿರೀಕ್ಷೆಗೆ ತಕ್ಕಂತೆ ಆಟವಾಡಿಲ್ಲ. ಈ ಹಿನ್ನೆಲೆಯಲ್ಲಿ ದೀಪಕ್ ಹೂಡಾರನ್ನು ಆರಂಭಿಕ ಪಾರ್ಟ್ನರ್ ಆಗಿ ಮೈದಾನಕ್ಕೆ ಇಳಿಸುವ ಸಾಧ್ಯತೆಯಿದೆ. ಇನ್ನು ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಇಳಿಯುವುದು ಖಚಿತವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.