India-New Zealand T20I: ಇಂಡೋ-ಕೀವಿಸ್ ಪಂದ್ಯಕ್ಕೆ ವರುಣನ ಅಡ್ಡಿ: ರದ್ದಾಗುತ್ತಾ ಅಥವಾ 5 ಓವರ್ ಗೆ ಸೀಮಿತವಾಗುತ್ತಾ ಮ್ಯಾಚ್?

India-New Zealand T20I: ಪಂದ್ಯವು ಮಧ್ಯಾಹ್ನ 2.16ಕ್ಕೆ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ 20 ಓವರ್ಗಳ ಬದಲಾಗಿ 5 ಓವರ್ ಗೆ ಪಂದ್ಯವನ್ನು ಸೀಮಿತಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಸರಣಿಯೊಂದ ಹಿರಿಯರಿಗೆ ವಿಶ್ರಾಂತಿ ನೀಡಲಾಗಿದೆ. ಬಹುತೇಕ ಯುವ ತಂಡವೇ ಈ ಬಾರೀ ಕಿವೀಸ್‌ ವಿರುದ್ಧ ಸೆಣಸಾಡಲಿದೆ.

Written by - Bhavishya Shetty | Last Updated : Nov 18, 2022, 01:15 PM IST
    • ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಲಿದೆ
    • ವೆಲ್ಲಿಂಗ್ಟನ್ ಮೈದಾನದಲ್ಲಿ ಮಳೆರಾಯನಿಂದ ಅಡೆತಡೆ ಉಂಟಾಗಿದೆ
    • ಪಂದ್ಯವು ಮಧ್ಯಾಹ್ನ 2.16ಕ್ಕೆ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ
India-New Zealand T20I: ಇಂಡೋ-ಕೀವಿಸ್ ಪಂದ್ಯಕ್ಕೆ ವರುಣನ ಅಡ್ಡಿ: ರದ್ದಾಗುತ್ತಾ ಅಥವಾ 5 ಓವರ್ ಗೆ ಸೀಮಿತವಾಗುತ್ತಾ ಮ್ಯಾಚ್? title=
Cricket

India-New Zealand T20I: ಮೂರು ಪಂದ್ಯಗಳ ಟಿ20 ಸರಣಿಯ ಭಾಗವಾಗಿ ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಲಿದೆ. ಆದರೆ ವೆಲ್ಲಿಂಗ್ಟನ್ ಮೈದಾನದಲ್ಲಿ ಮಳೆರಾಯನಿಂದ ಅಡೆತಡೆ ಉಂಟಾಗಿದೆ. ಈ ಪಂದ್ಯ ಮಧ್ಯಾಹ್ನ 12 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಮಳೆಯಿಂದ ತಡವಾಗಿದೆ.

ಇದನ್ನೂ ಓದಿ: IND vs NZ: ಭಾರತ-ನ್ಯೂಜಿಲೆಂಡ್ ಮೊದಲ ಟಿ20I: ಲೈವ್, ಪ್ಲೇಯಿಂಗ್ XI, ಪಿಚ್ ವರದಿ ಇಲ್ಲಿದೆ

ಪಂದ್ಯವು ಮಧ್ಯಾಹ್ನ 2.16ಕ್ಕೆ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ 20 ಓವರ್ಗಳ ಬದಲಾಗಿ 5 ಓವರ್ ಗೆ ಪಂದ್ಯವನ್ನು ಸೀಮಿತಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಸರಣಿಯೊಂದ ಹಿರಿಯರಿಗೆ ವಿಶ್ರಾಂತಿ ನೀಡಲಾಗಿದೆ. ಬಹುತೇಕ ಯುವ ತಂಡವೇ ಈ ಬಾರೀ ಕಿವೀಸ್‌ ವಿರುದ್ಧ ಸೆಣಸಾಡಲಿದೆ.

ಇದನ್ನೂ ಓದಿ: IND vs NZ T20I: ಟೀಂ ಇಂಡಿಯಾಗೆ ಸಿಂಹಸ್ವಪ್ನವಾಗಬಹುದು ನ್ಯೂಜಿಲ್ಯಾಂಡ್ ನ ಈ ಮೂವರು ಆಟಗಾರರು!

ಟಿ20 ಪಂದ್ಯವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ, ಏಕದಿನ ಪಂದ್ಯದ ನಾಯಕತ್ವವನ್ನು ಶಿಖರ್ ಧವನ್ ವಹಿಸಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಂತಹ ಪ್ರಮುಖ ಆಟಗಾರರಿಲ್ಲದೆ ಭಾರತ ಈ ಸರಣಿಯನ್ನು ಆಡಲಿದೆ. ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News