ಪ್ರತಿ ವರ್ಷ ಕಾರ್ಮಿಕ ದಿನಾಚರಣೆ ಬಂದಾಗಲೆಲ್ಲಾ ಈ ಒಂದು ಪ್ರತಿಮೆ ಮಾತ್ರ ಕಾರ್ಮಿಕರ ಶ್ರಮದ ಪ್ರತೀಕವಾಗಿ ಕಣ್ಣು ಮುಂದೆ ಬರುತ್ತದೆ. ಚೆನ್ನೈನ ಮರೀನಾ ಬೀಚ್ನಲ್ಲಿ Triumph of Labour ಎಂದು ಕರೆಯಲ್ಪಡುವ ಈ ಪ್ರತಿಮೆ, ಶ್ರಮಿಕರ ಗೆಲುವಿನ ಸಂಕೇತವಾಗಿದೆ. ಮದ್ರಾಸ್ ವಿಶ್ವವಿದ್ಯಾಲಯದ ಎದುರಿನ ಅಣ್ಣಾ ಸ್ಕ್ವೇರ್ನಲ್ಲಿ ಬೀಚ್ನ ಉತ್ತರ ತುದಿಯಲ್ಲಿ ನಿರ್ಮಿಸಲಾಗಿರುವ ಈ ಪ್ರತಿಮೆ ಚೆನ್ನೈನ ಪ್ರಮುಖ ಹೆಗ್ಗುರುತಾಗಿದೆ. ಈ ಪ್ರತಿಮೆಯು ನಾಲ್ಕು ವ್ಯಕ್ತಿಗಳು ಬಂಡೆಯನ್ನು ಸರಿಸಲು ಶ್ರಮಿಸುತ್ತಿರುವುದನ್ನು ತೋರಿಸುತ್ತದೆ, ಇದು ಕಾರ್ಮಿಕ ವರ್ಗದ ಶ್ರಮವನ್ನು ಚಿತ್ರಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.