ಬಾಹ್ಯಾಕಾಶ ಲೋಕ ಎಷ್ಟು ವಿಸ್ತಾರವಾಗಿದೆ ಎಂದರೆ, ಅದನ್ನ 'ಅನಂತ' ಎಂಬ ಪದದ ಮೂಲಕ ಗುರುತಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ನಮ್ಮ ವಿಶ್ವಕ್ಕೆ ಕೊನೆಯೇ ಇಲ್ಲವೆಂದು. ಆದರೆ ವಿಶ್ವದ ಮೂಲೆ ಮೂಲೆಗೂ ಹೋಗಿ ಬರಲು ಮಾನವನಿಗೆ ಸಾಧ್ಯವಿಲ್ಲ. ಇನ್ನೂ ಅಷ್ಟು ಬೆಳೆದಿಲ್ಲ ಮಾನವ. ಆದರೆ ಭೂಮಿಯಿಂದಲೇ ಕೋಟ್ಯಂತರ ಕಿಲೋಮೀಟರ್ ದೂರದ ಗ್ರಹ ಹಾಗೂ ನಕ್ಷತ್ರಗಳನ್ನು ಗುರುತಿಸಬಲ್ಲ ಶಕ್ತಿ ಮಾನವರಿಗಿದೆ. ಅದರಲ್ಲೂ ನಾಸಾ ಸಂಸ್ಥೆ ಹಾರಿಬಿಟ್ಟ 'ಜೇಮ್ಸ್ ವೆಬ್' ಸಂಚಲ ಸೃಷ್ಟಿಸಿದೆ. 'ಜೇಮ್ಸ್ ವೆಬ್' ಬಾಹ್ಯಾಕಾಶ ತಲುಪಿದ ಮರುಕ್ಷಣವೇ ಮಾನವರ ಇತಿಹಾಸ ಬದಲಾಗುತ್ತಿದೆ. ಇದೀಗ ನಮ್ಮ ಗುರುಗ್ರಹದ ರೀತಿ ಇರುವ ಮತ್ತೊಂದು ಗ್ರಹ ಪತ್ತೆ ಮಾಡಿದೆ 'ಜೇಮ್ಸ್ ವೆಬ್'.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.