ಅಕ್ಟೋಬರ್ 1 ರಿಂದ ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನಿನ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ.ಈ ಹೊಸ ಕಾರ್ಮಿಕ ಕಾನೂನಿನಲ್ಲಿ ನೌಕರರ ಕೆಲಸದ ಸಮಯ 9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಳವಾಗಲಿದೆ. ಅದಲ್ಲದೆ, ಹೊಸ ಕಾನೂನು ಜಾರಿಗೆ ಬಂದ ನಂತರ ಸಂಬಳದಲ್ಲಿಯೂ ಬದಲಾವಣೆಯಾಗಲಿದೆ ಎನ್ನಲಾಗಿದೆ.
ಹೊಸ ಕಾರ್ಮಿಕ ಸಂಹಿತೆ (Labour Laws) ಅಡಿಯಲ್ಲಿ, ನಿಗದಿತ ಸಮಯಕ್ಕಿಂತ 15 ನಿಮಿಷ ಹೆಚ್ಚಿನ ಕೆಲಸ ಮಾಡಿದರೆ ಅಧಿಕಾವಧಿ ಎಂದು ಪರಿಗಣಿಸಲಾಗುತ್ತದೆ ಮತ್ತು ಕಂಪನಿಗಳು ಇದಕ್ಕಾಗಿ ತಮ್ಮ ಉದ್ಯೋಗಿಗಳಿಗೆ ಓವರ್ ಟೈಮ್ ಪಾವತಿಸಬೇಕಾಗುತ್ತದೆ.
ಸಾಮಾಜಿಕ ಭದ್ರತಾ ಸಂಹಿತೆ (Social Security Code 2020) ಯಲ್ಲಿ ಅನೇಕ ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ. ಈ ನೂತನ ನಿಬಂಧನೆಗಳ ಪ್ರಕಾರ ಇನ್ಮುಂದೆ ಗ್ರ್ಯಾಚ್ಯುಟಿ ಪಡೆಯಲು ಬೇಕಾಗುವ ಅರ್ಹತೆಯನ್ನು ಐದು ವರ್ಷಗಳಿಂದ ಒಂದು ವರ್ಷಕ್ಕೆ ಇಳಿಕೆ ಮಾಡುವ ಶಿಫಾರಸ್ಸು ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.