ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುತ್ತಿರುವ ಹಾಗೂ ಸ್ಕೂಟರ್ ವಿಭಾಗದ ಲೀಡರ್ ಎನಿಸಿಕೊಂಡಿರುವ ʻಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾʼ(ಎಚ್.ಎಂ.ಎಸ್.ಐ), ಸ್ಮಾರ್ಟ್ ಮತ್ತು ಸುಧಾರಿತ ಆಕ್ಟಿವಾ 2023 ಅನ್ನು ಇಂದು ಅನಾವರಣಗೊಳಿಸಿದೆ. ಇದು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಚೊಚ್ಚಲ ʻಒಬಿಡಿ 2ʼ (ಆನ್-ಬೋರ್ಡ್ ಡೈಯಾಗ್ನಸ್ಟಿಕ್-2) ಮಾನದಂಡ ಪೂರೈಸುವ ದ್ವಿಚಕ್ರ ವಾಹನವಾಗಿದ್ದು, ಏಪ್ರಿಲ್ 2023ರ ಗಡುವಿಗೆ ಮುಂಚಿತವಾಗಿಯೇ ಬಿಡುಗಡೆಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.