Farooq Abdullah: ಈ ಕುರಿತು ಮಾತನಾಡಿರುವ ಫಾರುಕ್ ಅಬ್ದುಲ್ಲಾ (Farooq Abdullah), 'ನಮಾಜ್ ದಾರಿಯಲ್ಲಿಯೇ ಇರಿ, ಅಲ್ಲಾಹ್ ತೋರಿಸಿರುವ ಮಾರ್ಗದಲ್ಲಿಯೇ ಸಾಗಿ, ಎಲ್ಲಿಯೂ ತಲೆಬಾಗುವ ಅವಶ್ಯಕತೆ ಇಲ್ಲ' ಎಂದು ಹೇಳಿದ್ದಾರೆ.
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆ ಸಂಸತ್ತಿನ ಉಭಯ ಸದನಗಳಲ್ಲಿ ಮೊನ್ನೆ ಅಂಗೀಕಾರಗೊಂಡ ನಂತರವೂ ರೈತರ ಚಳವಳಿ ಮುಂದುವರೆದಿದೆ. ಕನಿಷ್ಠ ಬೆಂಬಲ ಬೆಲೆ (MSP) ಕುರಿತು ಕಾನೂನನ್ನು ಜಾರಿಗೊಳಿಸಬೇಕು ಎಂದು ರೈತರು ಕೇಂದ್ರ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ರೈತರು ಮತ್ತು ಸರ್ಕಾರದ ನಡುವಿನ ಹಗ್ಗಜಗ್ಗಾಟವನ್ನು ಕೊನೆಗೊಳಿಸಲು ಪ್ರಯತ್ನಗಳು ಪ್ರಾರಂಭವಾಗಿವೆ. ರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಮನಸ್ಸು ಮಾಡಿದೆ. ಈ ಬಗ್ಗೆ ರೈತರಿಂದ ಇನ್ನೂ ತೀರ್ಮಾನ ಆಗಿಲ್ಲ.
ಕೃಷಿ ಆರ್ಥಿಕತೆಯ ವೆಚ್ಚದಲ್ಲಿ ಮತ್ತು ರೈತರ ಹಿತಾಸಕ್ತಿಗೆ ಧಕ್ಕೆ ತರುವ ಮೂಲಕ ಈ ವಿಷಯದ ಬಗ್ಗೆ ರಾಜಕೀಯ ಮಾಡಿದ್ದಕ್ಕಾಗಿ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರೂ ಸಹ, ಪ್ರತಿಭಟನಾಕಾರರ ರೈತರ ಭಾವನೆಗಳನ್ನು ಗೌರವಿಸಲು ಮೂರು ಹೊಸ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.