ಬೆಳಗಾವಿ ಸುವರ್ಣಸೌಧದ ಬಳಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ನಮ್ಮ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಮಹಾರಾಷ್ಟ್ರದ ನಿರ್ಣಯವನ್ನು ಕಾಂಗ್ರೆಸ್ ಪಕ್ಷ ಹಾಗೂ ಇಡೀ ಕರ್ನಾಟಕ ತೀವ್ರವಾಗಿ ಖಂಡಿಸಿ ವಿರೋಧಿಸುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಈಶ್ವರಪ್ಪ ಮಾತಾನಾಡಿ, ಪಕ್ಷದ ಮೇಲೆ ಸಿಎಂ ಬೊಮ್ಮಾಯಿ ಮೇಲೆ ಸಂಪೂರ್ಣ ವಿಶ್ವಾಸವಿದೆ. ನಿನ್ನೆ ರಾತ್ರಿ ನಾನು ರಮೇಶ್ ಜಾರಕಿಹೊಳಿ ಸಿಎಂ ಬೊಮ್ಮಾಯಿ ಅವರನ್ನ ಭೇಟಿಯಾಗಿ ಮಾತಾಡಿದ್ದೇವೆ. ಅವರು ಹೇಳಿದ್ದಾರೆ ಈ ವಿಚಾರವನ್ನ ವರಿಷ್ಠರಿಗೆ ತಿಳಿಸಿದ್ದೇನೆ ಎಂದು. ಇನ್ನೊಂದು ಬಾರಿ ದೆಹಲಿ ಹೋಗಿ ನಿಮಗೆ ತಿಳಿಸ್ತೀನಿ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಅಂತಾ ಸಿಎಂ ಭೇಟಿ ಬಗ್ಗೆ ವಿವರಿಸಿದರು.
ಸುವರ್ಣಸೌಧದ ಬಸ್ತವಾಡ ಬಳಿ ಸಾರಿಗೆ ನೌಕರರ ಧರಣಿ. ಧರಣಿ ಸ್ಥಳದಲ್ಲಿ ಅಸ್ವಸ್ಥಳಾದ ಸಾರಿಗೆ ಇಲಾಖೆ ನಿರ್ವಾಹಕಿ. ಉಪವಾಸ ಕೈಗೊಂಡಿದ್ದ ಜಯಶ್ರೀ ಎಂಬ ನಿರ್ವಾಹಕಿ. ಬೆಂಗಳೂರು ಸಾರಿಗೆ ಘಟಕ 20ರ ನಿರ್ವಾಹಕಿ ಜಯಶ್ರೀ. ಅಸ್ವಸ್ಥ ನಿರ್ವಾಹಕಿಗೆ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನೆ.
ಕೂಳಿಗೆ ದಂಡವಾಗಿದೆ, ಭೂಮಿಗೆ ಭಾರವಾಗಿದೆ ಈ ಸರ್ಕಾರ ಎಂದು ರಾಮನಗರದ ಚನ್ನಪಟ್ಟಣದಲ್ಲಿ ಸಿ .ಎಂ. ಇಬ್ರಾಹಿಂ ಹೇಳಿದ್ದಾರೆ. ಅಶೋಕ ನೀನು ಕೂತಿದಿಯಲ್ಲಾ ಬೆಳಗಾವಿ ಸುವರ್ಣಸೌಧ, ಆ ಸೌಧವನ್ನ ಕಟ್ಟಿಸಿದ್ದು ಈ ಹೆಚ್ಡಿ ಕುಮಾರಸ್ವಾಮಿ ಎಂದು ಗುಡುಗಿದ್ದಾರೆ.
ಪಂಚಮಸಾಲಿ ಸಮಾಜದಿಂದ 2Aಗಾಗಿ ಹೋರಾಟ. ಸವದತ್ತಿ ಪಟ್ಟಣದಲ್ಲಿ ನಾಳೆ ಸಮುದಾಯ ಸಮಾವೇಶ. ಮೀಸಲಾತಿ ಘೋಷಣೆ ಆಗದೇ ಇದ್ರೆ ಪಾದಯಾತ್ರೆ ಆರಂಭ. ಸವದತ್ತಿ, ಬೆಳವಡಿ, ಕಿತ್ತೂರು ಮಾರ್ಗವಾಗಿ ಪಾದಯಾತ್ರೆ. ಡಿಸೆಂಬರ್ 22ರಂದು ಸುವರ್ಣಸೌಧದ ಮುತ್ತಿಗೆಗೆ ಸಿದ್ಧತೆ.
ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳಿನ ರಾಜ, ಸುವರ್ಣ ಸೌಧದ ಅಸೆಂಬ್ಲಿ ಹಾಲ್ ನಲ್ಲಿ ಸಾವರ್ಕರ್ ಫೋಟೋ ಹಾಕಿದ್ದು ನನಗೆ ಗೊತ್ತೇ ಇಲ್ಲ ಎನ್ನುತ್ತಾರೆ ಎಂದು ಮುಖ್ಯಮಂತ್ರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸ್ವಾತಂತ್ರ ಹೋರಾಟಕ್ಕೆ ಸಾವರ್ಕರ್ ಕೊಡುಗೆ ಇಲ್ಲ ಎಂದರು.
ಮೀಸಲಾತಿಗಾಗಿ ಡಿಸೆಂಬರ್ 12ಕ್ಕೆ ವಿಧಾನಸೌಧ ಮುತ್ತಿಗೆಗೆ ನಿರ್ಧಾರ ಮಾಡಲಾಗಿತ್ತು. ಆದ್ರೆ ಈ ನಿರ್ಧಾರ ಕೈಬಿಡಲಾಗಿದೆ. ಅಧಿವೇಶನದೊಳಗೆ ಮೀಸಲಾತಿ ನೀಡದೇ ಇದ್ರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕೋದಾಗಿ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.