ನಾವು ಕೂಡ ಹಿಂದೂ; ಅವರದ್ದು ನಾಟಕ- ಡಿಕೆಶಿ

ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳಿನ ರಾಜ,‌ ಸುವರ್ಣ ಸೌಧದ ಅಸೆಂಬ್ಲಿ ಹಾಲ್ ನಲ್ಲಿ ಸಾವರ್ಕರ್ ಫೋಟೋ ಹಾಕಿದ್ದು ನನಗೆ ಗೊತ್ತೇ ಇಲ್ಲ ಎನ್ನುತ್ತಾರೆ ಎಂದು ಮುಖ್ಯಮಂತ್ರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ  ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್,  ಸ್ವಾತಂತ್ರ ಹೋರಾಟಕ್ಕೆ ಸಾವರ್ಕರ್ ಕೊಡುಗೆ ಇಲ್ಲ ಎಂದರು.

Written by - Prashobh Devanahalli | Edited by - Yashaswini V | Last Updated : Dec 19, 2022, 12:07 PM IST
  • ಅಸೆಂಬ್ಲಿ ಹಾಲ್ ನಲ್ಲಿ ನೆಹರೂ, ಶಿಶುನಾಳ ಶರೀಫ,‌ ಬಸವಣ್ಣ ನಾರಾಯಣ ಗುರು,‌ಕನಕದಾಸರ ಫೋಟೋ ಹಾಕಬೇಕು ಎಂಬುದು ನಮ್ಮ ಬೇಡಿಕೆ.
  • ಬಿಜೆಪಿ ರಾಜಕಾರಣ ಮಾಡುತ್ತಿದೆ ಹೊರತು ಸಾಮಾಜಿಕ ಕಳಕಳಿ ಇಲ್ಲ.
  • ಜನರ ಬದುಕು ಭಾವನೆ ಅವರಿಗೆ ಮುಖ್ಯ ಅಲ್ಲ - ಡಿ.ಕೆ. ಶಿವಕುಮಾರ್
ನಾವು ಕೂಡ ಹಿಂದೂ; ಅವರದ್ದು ನಾಟಕ- ಡಿಕೆಶಿ title=
DK Shivakumar

ಬೆಳಗಾವಿ: ನಾವೂ ಕೂಡಾ ಹಿಂದೂ, ಅವರದ್ದು ಬರೀ ನಾಟಕ. ಆಚಾರ ವಿಚಾರದಲ್ಲಿ ನಾವು ಹಿಂದೂಗಳೇ. ಅಧಿವೇಶನದಲ್ಲಿ ಭ್ರಷ್ಟಾಚಾರ ಚರ್ಚೆ ಆಗಬಾರದು,  ಓಟ್ ಕಳ್ಳತನ ಚರ್ಚೆ ಆಗಬಾರದು ಎಂದು ಈ‌ ವಿವಾದ ಸೃಷ್ಟಿ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿ ಕಾರಿದರು.

ಸಿಎಂ ಬೊಮ್ಮಾಯಿ ಸುಳ್ಳಿನ ರಾಜ:
ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳಿನ ರಾಜ,‌ ಸುವರ್ಣ ಸೌಧದ ಅಸೆಂಬ್ಲಿ ಹಾಲ್ ನಲ್ಲಿ ಸಾವರ್ಕರ್ ಫೋಟೋ ಹಾಕಿದ್ದು ನನಗೆ ಗೊತ್ತೇ ಇಲ್ಲ ಎನ್ನುತ್ತಾರೆ ಎಂದು ಮುಖ್ಯಮಂತ್ರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ  ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್,  ಸ್ವಾತಂತ್ರ ಹೋರಾಟಕ್ಕೆ ಸಾವರ್ಕರ್ ಕೊಡುಗೆ ಇಲ್ಲ ಎಂದರು.

ಇದನ್ನೂ ಓದಿ- ಬೆಳಗಾವಿ ಚಳಿಗಾಲದ ಅಧಿವೇಶನ: ಏಕರೂಪ ನಾಗರಿಕ ಸಂಹಿತೆ (UCC) ಮಂಡನೆ?

ಸುವರ್ಣಸೌಧದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಸುವರ್ಣಸೌಧದ ಅಸೆಂಬ್ಲಿ ಹಾಲ್ ನಲ್ಲಿ ಮಹಾತ್ಮ ಗಾಂಧಿ,‌ ಅಂಬೇಡ್ಕರ್ ಫೋಟೋ ಅನಾವರಣ ಇದೆ ಎಂದು ಆಹ್ವಾನ ನೀಡಿದರು. ಆದರೆ ಇವಾಗ ಸಾವರ್ಕರ್ ಫೋಟೋ ಕೂಡಾ ಹಾಕಿದ್ದಾರೆ. ಸಾವರ್ಕರ್ ಗೆ ರಾಜ್ಯ‌ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಸಂಬಂಧ ಇಲ್ಲ, ಅವರು ವಿವಾದಾತ್ಮಕ ವ್ಯಕ್ತಿ ಎಂದು‌ ಆರೋಪಿಸಿದರು.

ಬೆಳಗಾವಿ ಅಧಿವೇಶನ ನಡೆಸಬೇಕು ಎಂದು ನಾವೇ ಒತ್ತಾಯ ಮಾಡಿದ್ದು:
ಬೆಳಗಾವಿಯಲ್ಲಿ ಅಧಿವೇಶನ  ಮಾಡಬೇಕು ಎಂದು ಒತ್ತಾಯ ಮಾಡಿ ಮಾಡಿಸಿದ್ದೇವೆ. ಸರ್ಕಾರ ಉತ್ತರ ಕರ್ನಾಟಕವನ್ನು ಮರೆತು ಬಿಟ್ಟಿದೆ.‌ ಇಲ್ಲಿ‌ ನಡೆದ ಪ್ರತಿಭಟನೆ, ಇಲ್ಲಿನ ಸಮಸ್ಯೆಗಳು, ಭ್ರಷ್ಟಾಚಾರದಿಂದ ಆತ್ಮಹತ್ಯೆ ಪ್ರಕರಣ ಚರ್ಚೆ ಆಗುತ್ತೆ ಎಂದು ದಾರಿ ತಪ್ಪಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ- Siddaramaiah : ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಇದ್ದರು : ಸಿದ್ದರಾಮಯ್ಯ

ಅಸೆಂಬ್ಲಿ ಹಾಲ್ ನಲ್ಲಿ ನೆಹರೂ, ಶಿಶುನಾಳ ಶರೀಫ,‌ ಬಸವಣ್ಣ ನಾರಾಯಣ ಗುರು,‌ಕನಕದಾಸರ  ಫೋಟೋ ಹಾಕಬೇಕು ಎಂಬುದು ನಮ್ಮ ಬೇಡಿಕೆ. ಬಿಜೆಪಿ ರಾಜಕಾರಣ ಮಾಡುತ್ತಿದೆ ಹೊರತು ಸಾಮಾಜಿಕ ಕಳಕಳಿ ಇಲ್ಲ. ಜನರ ಬದುಕು ಭಾವನೆ ಮುಖ್ಯ ಅಲ್ಲ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News