ಇತ್ತೀಚಿನ ವರದಿಯ ಪ್ರಕಾರ, ಭಾರತದ ಪಿಂಚಣಿ ಆಸ್ತಿಗಳು 2030 ರ ವೇಳೆಗೆ 118 ಲಕ್ಷ ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ, ಇದರಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಸುಮಾರು 25% ರಷ್ಟಿದೆ.
ಕೇಂದ್ರದ ಬಜೆಟ್ ಪೂರ್ವ ಸಭೆಯಲ್ಲಿ ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ.ರಾಜ್ಯದ ಜನರಿಗೆ ಚೊಂಬು ಕೊಡುವ ಅಭಿಯಾನವನ್ನು ಕೇಂದ್ರ ಮುಂದುವರೆಸಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಬಜೆಟ್' ಎಂಬ ಪದವು ಫ್ರೆಂಚ್ ಪದ 'ಬೌಗೆಟ್' ನಿಂದ ಹುಟ್ಟಿಕೊಂಡಿದೆ, ಇದರರ್ಥ ಚರ್ಮದ ಚೀಲ.ಅದಕ್ಕಾಗಿಯೇ ಪ್ರತಿಯೊಬ್ಬ ಹಣಕಾಸು ಸಚಿವರು ಸಂಸತ್ತಿನಲ್ಲಿ ತಮ್ಮ ಭಾಷಣದ ಮೊದಲು ಚರ್ಮದ ಚೀಲದೊಂದಿಗೆ ಪೋಸ್ ನೀಡುತ್ತಾರೆ.ಈ ಸಂಪ್ರದಾಯವು 18 ನೇ ಶತಮಾನದಷ್ಟು ಹಳೆಯದು.
ಬಿಹಾರದ ಪ್ರಸಿದ್ಧ ಮಖಾನಾ (Foxnut) ಕೃಷಿಯನ್ನು ಉತ್ತೇಜಿಸಲು ಹೊಸ ಮಖಾನಾ ಮಂಡಳಿ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮಂಡಳಿ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಬೆಳವಣಿಗೆಗೆ ನೆರವಾಗಲಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Budget 2025 News: ಈ ಬದಲಾವಣೆಗಳು ಕೆಲವು ಸರಕುಗಳಿಗೆ ಸುಂಕದ ದರಗಳನ್ನು ಕಡಿಮೆ ಮಾಡುತ್ತವೆ, ಆದರೆ ಕೆಲವು ಸರಕುಗಳಿಗೆ ಸುಂಕದ ದರಗಳನ್ನು ಹೆಚ್ಚಿಸುತ್ತವೆ. ಇದು ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ.
Budget 2025: ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಇಂದು, ಎಂಟನೇ ಭಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. 36 ಜೀವರಕ್ಷಕ ಔಷಧಗಳನ್ನು ಮೂಲ ಕಸ್ಟಮ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗುವುದು ಎಂದು ನಿರ್ಮಾಲಾ ಸೀತಾರಾಮನ್ ಘೋಷಿಸಿದ್ದಾರೆ.
New Income Tax Slabs 2025 -26: ಸತತ ಎಂಟನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಸ್ಲ್ಯಾಬ್‌ಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದು ತೆರಿಗೆದಾರರು ಮತ್ತು ಮಧ್ಯಮವರ್ಗಕ್ಕೆ ಬಂಪರ್ ಗುಡ್ ನ್ಯೂಸ್ ನೀಡಿದ್ದಾರೆ.
PM SVANidhi scheme: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಬಜೆಟ್‌ನ ರೂಪುರೇಷೆಯಲ್ಲಿ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಗೆ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದಾರೆ. ಇದು ಹಲವು ಬೀದಿ ವ್ಯಾಪಾರಿಗಳಿಗೆ ಕೈಗೆಟುಕುವ ಸಾಲಗಳನ್ನು ಒದಗಿಸುವ ವಿಶೇಷ ಮೈಕ್ರೋ-ಕ್ರೆಡಿಟ್ ಸೌಲಭ್ಯವಾಗಿದ್ದು, ವಿಶೇಷವಾಗಿ COVID-19 ಸಾಂಕ್ರಾಮಿಕ ರೋಗದಿಂದ ಪ್ರಭಾವಿತರಾದವರಿಗೆ ಈ ಯೋಜನೆ ಸಹಾಯ ಮಾಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ .
Health sector budget: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ದೇಶದ ಸಾಮಾನ್ಯ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ದೇಶದ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಆರಂಭಿಸುವ ಘೋಷಣೆ ಮಾಡಲಾಗಿದೆ.
Union Budget 2025: ಸಾಮಾನ್ಯ ಜನರಿಂದ ಹಿಡಿದು ವ್ಯಾಪಾರಿಗಳ ವರೆಗೆ ಕುತೂಹಲದಿಂದ ಕಾಯುತ್ತಿರುವ ಕೇಂದ್ರ ಬಜೆಟ್ 2025 ಬಹುತೇಕ ಬಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 8ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ..
Budget impact on market: ಕಳೆದ 10 ವರ್ಷಗಳಲ್ಲಿ ಬಜೆಟ್ ದಿನದಂದು ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸಿತು ಗೊತ್ತಾ? ಕಳೆದ ಹತ್ತು ವರ್ಷಗಳಲ್ಲಿ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬಜೆಟ್ ದಿನದಂದು ಆರು ಬಾರಿ ಏರಿಕೆ ಕಂಡಿದ್ದರೆ, ನಾಲ್ಕು ಬಾರಿ ನಕಾರಾತ್ಮಕ ವಹಿವಾಟು ನಡೆಸಿತು. ನಾಳೆ ಅಂದರೆ ಫೆಬ್ರವರಿ 1ರ ಶನಿವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
Union Budget 2025: ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್ 740.76 ಪಾಯಿಂಟ್‌ಗಳ (0.97%) ಗಳಿಕೆಯೊಂದಿಗೆ 77,500.57 ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು. ಅದೇ ರೀತಿ NSEಯ ನಿಫ್ಟಿ 50 ಕೂಡ 258.90 ಪಾಯಿಂಟ್‌ಗಳ (1.11%) ಏರಿಕೆಯೊಂದಿಗೆ 23,508.40 ಪಾಯಿಂಟ್‌ಗಳಿಗೆ ಕೊನೆಗೊಂಡಿತು. ಗುರುವಾರವೂ ಸ್ಟಾಕ್ ಮಾರುಕಟ್ಟೆಯು ಹಸಿರು ಬಣ್ಣದಲ್ಲಿ ವಹಿವಾಟು ಕೊನೆಗೊಳಿಸಿತು.
Budget Expectations: ಹಿಂದಿನ ಕೇಂದ್ರ ಬಜೆಟ್‌ನಲ್ಲಿ ಬಿಹಾರಕ್ಕೆ ವಿವಿಧ ರಸ್ತೆ ಯೋಜನೆಗಳಿಗೆ 26,000 ಕೋಟಿ ರೂ. ಅನುದಾನ ಮತ್ತು ಆಂಧ್ರಕ್ಕೆ ಸುಮಾರು 15,000 ಕೋಟಿ ರೂ. ಅನುದಾನ ನೀಡಿ ಬೇರೆ ರಾಜ್ಯಗಳನ್ನು ಕಡೆಗಣಿಸಲಾಗಿತ್ತು. 2025-26ರ ಬಜೆಟ್‌ನಲ್ಲಿ ಅದನ್ನು ಸರಿಪಡಿಸಬಹುದೆಂಬುದು ರಾಜ್ಯದ ಜನರ ನಿರೀಕ್ಷೆಯಿದೆ.
Stock Market after Budget 2025: ಈ ಬಾರಿ ತೆರಿಗೆ ವಿನಾಯಿತಿ ಮೇಲೆ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆದಾಯ ತೆರಿಗೆ ವಿನಾಯಿತಿ, ಜಿಎಸ್‌ಟಿ ಕಡಿತದಂತಹ ಪ್ರಮುಖ ನಿರ್ಧಾರಗಳನ್ನು ಘೋಷಿಸುವ ಬಗ್ಗೆ ವಿಶ್ವಾಸವಿದೆ. ಆದರೆ ಇದೀಗ ಷೇರು ಹೂಡಿಕೆದಾರರಲ್ಲಿ ಕಾಡುತ್ತಿರುವ ಪ್ರಶ್ನೆಯೆಂದರೆ, ಬಜೆಟ್ ಬಳಿಕ ಷೇರು ಮಾರುಕಟ್ಟೆ ಸುಧಾರಣೆ ಕಾಣುತ್ತದೆಯೋ? ಅಥವಾ ಇಲ್ಲವೋ? ಎಂಬುದು. ಇದಕ್ಕೆ ತಜ್ಞರ ಅಭಿಪ್ರಾಯ ಹೀಗಿದೆ.
Best Stock Company on Budget 2025: ಮಧ್ಯಮ ವರ್ಗದವರು ತೆರಿಗೆಯಲ್ಲಿ ಸ್ವಲ್ಪ ವಿನಾಯಿತಿ ನಿರೀಕ್ಷಿಸುತ್ತಿದ್ದಾರೆ. ಬಜೆಟ್ ಅಧಿವೇಶನ ಆರಂಭವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಇಂದು ಈ ಬಗ್ಗೆ ಸುಳಿವು ನೀಡಿದ್ದಾರೆ. ಇದಲ್ಲದೆ, ಮೂಲಸೌಕರ್ಯ, ರೈಲ್ವೆ, ರಕ್ಷಣೆ, ರಿಯಲ್ ಎಸ್ಟೇಟ್ ಉತ್ಪಾದನೆ ಮತ್ತು ಇತರ ಹಲವು ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಪ್ರಮುಖ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.