ಬೆಂಗಳೂರು ಕರಗ ನಡೆದು ಒಂದು ತಿಂಗಳಿಗೆ ದೇವನಹಳ್ಳಿ ಕರಗ ನಡೆಯೋದು ವಾಡಿಕೆ. ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದಿಪಾಲಂಕಾರ ಮಾಡಿದ್ದು ನೋಡುಗರ ಮನಸೆಳೆಯಿತು.
ಗ್ರಾಮದಲ್ಲಿ ನಡೆಯುತ್ತಿದ್ದ ಬಸವೇಶ್ಚರ ದೇವರ ಕೊಂಡೋತ್ಸವ ನೋಡಲು ದೇವಸ್ಥಾನ ಮುಂದೆ ಇದ್ದ ಮಾದೇಗೌಡರ ಮನೆಯ ತಾರಸಿ ಮೇಲೆ 100 ಕ್ಕೂ ಜನರು ಜಮಾಯಿಸಿದ್ದರು.
ಈ ವೇಳೆ ತಾರಸಿ ಕುಸಿದಿದ್ದು, ಅದೇ ಗ್ರಾಮದ ಸರಸ್ವತಿ ಹಾಗೂ ಪುಟ್ಟಲಿಂಗಮ್ಮ ಎನ್ನುವ ಇಬ್ಬರು ಮಹಿಳೆಯರು ತಾರಸಿ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆಯಲ್ಲಿರುವ ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಶ್ರೀ ಸಿದ್ದರಾಮೇಶ್ವರ ಚಿಕ್ಕಮ್ಮ ತಾಯಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶ್ರೀ ಸಿದ್ದರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.