ಬೆಂಗಳೂರು: ಬೆಂಗಳೂರಿನ ಕರಗದಷ್ಟೆ ಪ್ರಸಿದ್ದಿ ಹೊಂದಿರುವ ಇತಿಹಾಸ ಪ್ರಸಿದ್ದ ದೇವನಹಳ್ಳಿ ಕರಗ ಮಹೋತ್ಸವ ಇಂದು ಅದ್ದೂರಿಯಾಗಿ ನೇರವೇರಿತು. ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನೂರಾರು ವರ್ಷಗಳಿಂದ ನೆಲೆಸಿರೂ ಮೌಕ್ತಿಕಾಂಭ ದೇವಿಯ ಸನ್ನಿದಿಯಲ್ಲಿ ಕರಗ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನಲೆ ಸರಳವಾಗಿಯೇ ಆಚರಣೆ ಮಾಡಿಕೊಂಡು ಬರಲಾಗಿತ್ತು. ಇದೀಗ ಕೊರೊನಾ ಈ ವರ್ಷ ಕಡಿಮೆಯಾದ ಹಿನ್ನಲೆ ಈ ಭಾರಿ ಅದ್ದೂರಿಯಾಗಿ ಕರಗ ಮಹೋತ್ಸವ ನಡೆಯಿತು.
ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದಿಪಾಲಂಕಾರ ಮಾಡಿದ್ದು ನೋಡುಗರ ಮನಸೆಳೆಯಿತು. ಈ ಭಾರಿ ಮಳೆ ಬಂದ ಹಿನ್ನಲೆ ಮಧ್ಯರಾತ್ರಿ 1 ಗಂಟೆಗೆ ಹೊರಡಬೇಕಿದ್ದ ಕರಗ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪಟ್ಟಣದ ಮೌಕ್ತಿಕಾಂಭ ದೇವಿಯ ದೇವಾಲಯದಿಂದ ಹೋರಬಂದ ಹೂವಿನ ಕರಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬೆಳಗ್ಗೆ 5 ಗಂಟೆಗೆ ಪಟ್ಟಣದ ಪ್ರಮುಖ ಮಸೀದಿಗೂ ಕರಗ ತೆರಳಿ ಸೌಹರ್ಧಯುತವಾಗಿ ನಡೆದಿದ್ದು, ವಿಶೇಶವಾಗಿತ್ತು.
ಇದನ್ನೂ ಓದಿ- Vastu Tips: ಮನೆಗೆ ಲಕ್ಷ್ಮಿ ಬರುವ ಮುನ್ನವೇ ಸಿಗುತ್ತೆ ಹಲವು ಸಂಕೇತ
ಇಂದು ಬೆಳಗ್ಗೆ 8 ಗಂಟೆಗೆ ಪಟ್ಟಣದ ಮರಳು ಬಾಗಿಲು ಬಳಿ ಬಂದ ಕರಗವನ್ನ ಹೂವಿನ ಹಾಸಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ಸುಮಾರು 800 ಕೆಜಿ ಹೂ ನಲ್ಲಿ ಬೃಹತ್ ಹೂವಿನ ಅಲಂಕಾರ ಹಾಸಿಗೆಯನ್ನ ಮಾಡಲಾಗಿತ್ತು. ಈ ವೇಳೆ ಹೂವಿನಲ್ಲೆ ಕರಗ ನಡೆದು ಬೆಳಗ್ಗೆ 10 ಗಂಟೆಗೆ ದೇವಸ್ಥಾನ ಸೇರಿಕೊಂಡಿತು.
ಇದನ್ನೂ ಓದಿ- ಮನಿ ಪ್ಲಾಂಟ್ ಹಾಕುವಾಗ ಆಗುವ ಈ 5 ತಪ್ಪುಗಳ ಬಗ್ಗೆ ಇರಲಿ ಎಚ್ಚರ ..! ಮನೆಯಿಂದ ಆಗಬಹುದು ಲಕ್ಷ್ಮೀಯ ನಿರ್ಗಮನ
ಹಿಂದಿನ ಕಾಲದಿಂದಲೂ ವನಿಕುಲ ವಂಶಸ್ಥರು ಈ ಕರಗ ಮಹೋತ್ಸವವನ್ನ ನೇರವೇರಿಸಿಕೊಂಡು ಬರುತ್ತಿದ್ದು, ಬೆಂಗಳೂರು ಕರಗ ನಡೆದು ಒಂದು ತಿಂಗಳಿಗೆ ದೇವನಹಳ್ಳಿ ಕರಗ ನಡೆಯೋದು ವಿಶೇಷ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.