ಮಾರುಕಟ್ಟೆಗೆ ಬಂದಿದೆ ಕೇವಲ 10 ಸಾವಿರ ರೂಪಾಯಿ ಮೌಲ್ಯದ 32 ಇಂಚಿನ ಸ್ಮಾರ್ಟ್ ಟಿವಿ

ಥಾಮ್ಸನ್ ಸೊಗಸಾದ ವಿನ್ಯಾಸದೊಂದಿಗೆ ಕಡಿಮೆ ಬೆಲೆಯ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. 32 ಇಂಚಿನ ಸ್ಮಾರ್ಟ್ ಟಿವಿಯನ್ನು 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

Written by - Ranjitha R K | Last Updated : Jun 22, 2022, 03:13 PM IST
  • 32 ಇಂಚಿನ ಆಲ್ಫಾ ಸರಣಿ ಸ್ಮಾರ್ಟ್ ಟಿವಿ ಬಿಡುಗಡೆ
  • 10 ಸಾವಿರ ರೂಪಾಯಿಗಿಂತ ಕಡಿಮೆ ಬಜೆಟ್ ಗೆ ಒಳ್ಳೆಯ ಟಿವಿ
  • ಏನಿರಲಿದೆ ಈ ಟಿವಿಯ ವಿಶೇಷತೆ
ಮಾರುಕಟ್ಟೆಗೆ ಬಂದಿದೆ ಕೇವಲ 10 ಸಾವಿರ ರೂಪಾಯಿ ಮೌಲ್ಯದ 32 ಇಂಚಿನ ಸ್ಮಾರ್ಟ್ ಟಿವಿ  title=
Thomson 32 Inch TV (file photo)

ಬೆಂಗಳೂರು : ಫ್ರೆಂಚ್ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಥಾಮ್ಸನ್ 32 ಇಂಚಿನ ಆಲ್ಫಾ ಸರಣಿ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಅತ್ಯಂತ ಕಡಿಮೆ ಬೆಲೆಗೆ ಈ ಟಿವಿಯನ್ನು ಬಿಡುಗಡೆ ಮಾಡಿದ್ದು, ಇದರ ವಿನ್ಯಾಸ ಕೂಡಾ ಸೊಗಸಾಗಿದೆ. ಈ ಸ್ಮಾರ್ಟ್ ಟಿವಿಯ ಬೆಲೆ ಕೇವಲ 9,999 ರೂಪಾಯಿ.  10 ಸಾವಿರ ರೂಪಾಯಿಗಿಂತ ಕಡಿಮೆ ಬಜೆಟ್ ಗೆ ಒಳ್ಳೆಯ ಟಿವಿ ಖರೀದಿಸಬೇಕು ಎಂದು ಕೊಂಡಿದ್ದರೆ, ಈ ಟಿವಿ ಒಳ್ಳೆಯ ಆಯ್ಕೆಯಾಗಿದೆ.  

ಥಾಮ್ಸನ್ 32-ಇಂಚಿನ ಆಲ್ಫಾ ಸರಣಿ ಸ್ಮಾರ್ಟ್ ಟಿವಿ ವಿಶೇಷಣಗಳು :
ಹೊಸ ಆಲ್ಫಾ ಸರಣಿ ಟಿವಿಗಳು HD ರೆಡಿ, ಬೆಜೆಲ್-ಲೆಸ್, ಶಕ್ತಿಯುತ ಸರೌಂಡ್ ಸೌಂಡ್ ಮತ್ತು YouTube, ಪ್ರೈಮ್ ವಿಡಿಯೋ, Sony Liv, G5, Eros Now ಇತ್ಯಾದಿಗಳನ್ನು ಸಪೋರ್ಟ್ ಮಾಡುತ್ತದೆ. ಇತರ ವಿಶೇಷಣಗಳಲ್ಲಿ 30W ಸ್ಪೀಕರ್, 512MB RAM, 4GB ROM, Wi-Fi, HDMI, USB ಸಂಪರ್ಕ  ಬರುತ್ತದೆ. 

ಇದನ್ನೂ ಓದಿ : Vodafone Idea ಭರ್ಜರಿ ಪ್ಲಾನ್: ಕಡಿಮೆ ಬೆಲೆಗೆ 90GB ಡೇಟಾ ಲಭ್ಯ

2018 ರಲ್ಲಿ ಭಾರತಕ್ಕೆ ಎಂಟ್ರಿ : 
ಈ ಬ್ರ್ಯಾಂಡ್ 2018 ರಲ್ಲಿ ತನ್ನ ಸ್ಮಾರ್ಟ್ ಟಿವಿಗಳ ಶ್ರೇಣಿಯೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಅಂದಿನಿಂದ ಈ ಟಿವಿಗೆ ಉತ್ತಮ ಪ್ರತಿಕ್ರಿಯೆ ಕೂಡಾ ಸಿಕ್ಕಿದೆ.  ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ತಂತ್ರಜ್ಞಾನವನ್ನು ನೀಡುವ ಮೂಲಕ ಭಾರತೀಯ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಥಾಮ್ಸನ್ 32-ಇಂಚಿನ ಆಲ್ಫಾ ಸರಣಿ ಸ್ಮಾರ್ಟ್ ಟಿವಿ ಜೂನ್ 26 ರಿಂದ  ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರಲಿದೆ  . ಫ

ಸಿಗಲಿದೆ ರಿಯಾಯಿತಿ :
ಗ್ರಾಹಕರು SBI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ 10% ರಿಯಾಯಿತಿ, ನಿಯಮಗಳು ಮತ್ತು ಷರತ್ತುಗಳೊಂದಿಗೆ ಉಚಿತ Gaana Plus ಚಂದಾದಾರಿಕೆ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಕಂಪನಿಯ ಮೂರನೇ ಉತ್ಪನ್ನವಾಗಿ  ಬಿಡುಗಡೆಯಾಗಿದೆ ಮತ್ತು ಭವಿಷ್ಯದಲ್ಲಿಯೂ ನಾವು ಹೊಸ ಉತ್ಪನ್ನಗಳನ್ನು ಪರಿಚಯಿಸುವುದನ್ನು ಮುಂದುವರಿಸುವುದಾಗಿ ಕಂಪನಿ ಹೇಳಿದೆ. 

ಇದನ್ನೂ ಓದಿ : AC ಬಳಸುವಾಗ ಈ ಟ್ರಿಕ್ ಅನುಸರಿಸಿದರೆ ನಿಮ್ಮ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಆಗುತ್ತೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News