UAN ನಂಬರ್‌ ಇಲ್ಲದೆಯೇ PF ಬ್ಯಾಲೆನ್ಸ್‌ ಚೆಕ್‌ ಮಾಡುವುದು ಹೇಗೆ ಗೊತ್ತಾ? ಈ ನಂಬರ್‌ಗೆ ಮಿಸ್‌ಕಾಲ್‌ ಕೊಟ್ಟರೆ ಸಾಕು.. ಫುಲ್‌ ಡೀಟೇಲ್ಸ್‌ ಸಿಗುತ್ತೆ

PF balance check without UAN number: PF ಖಾತೆಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಹೇಗೆ ಪರಿಶೀಲಿಸಬಹುದು ಎಂಬುದನ್ನು ಮುಂದೆ ತಿಳಿಯೋಣ. ಇಲ್ಲಿ ಎರಡು ವಿಧಾನಗಳನ್ನು ನೀಡಲಾಗಿದ್ದು, ನಿಮ್ಮ ಇಚ್ಛೆ ಅನುಸಾರ ಯಾವುದನ್ನಾದರೂ ಅನುಸರಿಸಿಕೊಳ್ಳಬಹುದು.  

Written by - Bhavishya Shetty | Last Updated : Nov 7, 2024, 08:31 PM IST
    • ಇಪಿಎಫ್ ಭಾರತ ಸರ್ಕಾರದಿಂದ ನಡೆಸಲ್ಪಡುವ ಸಾಮಾಜಿಕ ಭದ್ರತಾ ಯೋಜನೆ
    • ಸಂಘಟಿತ ಕಂಪನಿಗಳ ಉದ್ಯೋಗಿಗಳಿಗೆ ನಿವೃತ್ತಿ ಪ್ರಯೋಜನಗಳನ್ನು ಒದಗಿಸುತ್ತದೆ
    • ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಬಡ್ಡಿಯೂ ಸಿಗುತ್ತದೆ.
UAN ನಂಬರ್‌ ಇಲ್ಲದೆಯೇ PF ಬ್ಯಾಲೆನ್ಸ್‌ ಚೆಕ್‌ ಮಾಡುವುದು ಹೇಗೆ ಗೊತ್ತಾ? ಈ ನಂಬರ್‌ಗೆ ಮಿಸ್‌ಕಾಲ್‌ ಕೊಟ್ಟರೆ ಸಾಕು.. ಫುಲ್‌ ಡೀಟೇಲ್ಸ್‌ ಸಿಗುತ್ತೆ title=
How to check PF balance without UAN number

How to check PF balance without UAN number: ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿಯು ಭಾರತ ಸರ್ಕಾರದಿಂದ ನಡೆಸಲ್ಪಡುವ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಸಂಘಟಿತ ಕಂಪನಿಗಳ ಉದ್ಯೋಗಿಗಳಿಗೆ ನಿವೃತ್ತಿ ಪ್ರಯೋಜನಗಳನ್ನು ಒದಗಿಸುತ್ತದೆ. ಇನ್ನು ಇದರಲ್ಲಿ ಒಳ್ಳೆಯ ವಿಷಯವೆಂದರೆ ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಬಡ್ಡಿಯೂ ಸಿಗುತ್ತದೆ.

ಇದನ್ನೂ ಓದಿ: ಬಾಳೆ ಎಲೆಯನ್ನು ಹೀಗೆ ಬಳಸಿದರೆ ಬಿಳಿ ಕೂದಲನ್ನು ಬೇರುಗಳಿಂದಲೇ ಪರ್ಮನೆಂಟ್‌ ಆಗಿ ಕಪ್ಪಾಗಿಸಬಹುದು

ಇನ್ನು PF ಖಾತೆಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಹೇಗೆ ಪರಿಶೀಲಿಸಬಹುದು ಎಂಬುದನ್ನು ಮುಂದೆ ತಿಳಿಯೋಣ. ಇಲ್ಲಿ ಎರಡು ವಿಧಾನಗಳನ್ನು ನೀಡಲಾಗಿದ್ದು, ನಿಮ್ಮ ಇಚ್ಛೆ ಅನುಸಾರ ಯಾವುದನ್ನಾದರೂ ಅನುಸರಿಸಿಕೊಳ್ಳಬಹುದು.

UAN ಬಳಸಿ:

ಹಂತ 1: EPFO ​​ವೆಬ್‌ಸೈಟ್ https://www.epfindia.gov.in/ ಗೆ ಭೇಟಿ ನೀಡಿ.

ಹಂತ 2: "For Employees" > "Services" > "Know your EPF Account Balance" ಕ್ಲಿಕ್ ಮಾಡಿ.

ಹಂತ 3: ನಿಮ್ಮ UAN ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾವನ್ನು ನಮೂದಿಸಿ

ಹಂತ 4: "ಸೈನ್ ಇನ್" ಮೇಲೆ ಕ್ಲಿಕ್ ಮಾಡಿ.

ಹಂತ 5: ಈಗ "ಪಾಸ್‌ಬುಕ್" ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ಹಂತ 6: ನಿಮ್ಮ PF ಖಾತೆಯನ್ನು ಆಯ್ಕೆಮಾಡಿ.

ಹಂತ 7: ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪರದೆಯ ಮೇಲೆ ಕಾಣಿಸುತ್ತದೆ.

UAN ಇಲ್ಲದೆ:

ಹಂತ 1: ನೀವು UAN ನಂಬರ್‌ ಹೊಂದಿಲ್ಲದಿದ್ದರೆ UMANG ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ಹಂತ 2: ಅಪ್ಲಿಕೇಶನ್‌ನಲ್ಲಿ "EPFO" ಸೇವೆಯನ್ನು ಆಯ್ಕೆಮಾಡಿ.

ಹಂತ 3: "EPF ಬ್ಯಾಲೆನ್ಸ್" ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 4: ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಹಂತ 6: ನಿಮ್ಮ ಇಪಿಎಫ್ ಬ್ಯಾಲೆನ್ಸ್  ಪರದೆಯ ಮೇಲೆ ಬರುತ್ತದೆ

ಇದಲ್ಲದೆ, ಇತರ ಕೆಲವು ವಿಧಾನಗಳ ಮೂಲಕವೂ EPF ಖಾತೆಯ ಬ್ಯಾಲೆನ್ಸ್ ಅನ್ನು ಸಹ ಪರಿಶೀಲಿಸಬಹುದು. ಅದಕ್ಕೆ 9966044425 ಗೆ ಮಿಸ್ಡ್ ಕಾಲ್ ನೀಡಿ ಅಥವಾ  EPFOHO UAN <LAN> ಅನ್ನು 7738299899 ಗೆ SMS ಮಾಡಿ.

ಇದನ್ನೂ ಓದಿ: ಊಟಕ್ಕೆ ಮೊದಲು ಈ ಗಿಡದ ಚಿಗುರನ್ನು ಜಗಿದು ರಸ ನುಂಗಿದರೆ ಬ್ಲಡ್‌ ಶುಗರ್‌ ದಿಢೀರ್‌ ಅಂತ ನಾರ್ಮಲ್‌ ಆಗುವುದು! ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿ

ಯುಎಎನ್ (ಯುನಿವರ್ಸಲ್ ಅಕೌಂಟ್ ನಂಬರ್) ಎಂಬುದು 12 ಅಂಕೆಗಳ ಸಂಖ್ಯೆಯಾಗಿದ್ದು, ಇದನ್ನು ಪ್ರತಿ ಇಪಿಎಫ್ ಖಾತೆದಾರರಿಗೆ ನೀಡಲಾಗುತ್ತದೆ. ನಿಮ್ಮ UAN ಅನ್ನು ನೀವು ಮರೆತಿದ್ದರೆ, ನೀವು ಅದನ್ನು EPFO ​​ವೆಬ್‌ಸೈಟ್‌ನಲ್ಲಿ ಮತ್ತೆ ಪಡೆಯಬಹುದು. ಜೊತೆಗೆ EPFO ​​ವೆಬ್‌ಸೈಟ್ ಅಥವಾ UMANG ಅಪ್ಲಿಕೇಶನ್‌ನಿಂದ ನಿಮ್ಮ EPF ಪಾಸ್‌ಬುಕ್ ಅನ್ನು ಡೌನ್‌ಲೋಡ್ ಮಾಡಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News