ಕೇವಲ Missed Call ಮೂಲಕ ಸಿಲಿಂಡರ್ ಬುಕ್ ಮಾಡಿ, ಈ ಕಂಪನಿಯಿಂದ ಸೇವೆ ಆರಂಭ

Missed Call LPG Cylinder Booking: ಇನ್ಮುಂದೆ ನೀವು ಚಿಟಿಕೆ ಹೊಡೆಯೋದ್ರಲ್ಲಿ ನಿಮ್ಮ ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಬಹುದು. ಹೌದು, ಇಂಡಿಯನ್ ಆಯಿಲ್ ಕಾರ್ಪೋರೇಶನ್  ಹೊಸ ವರ್ಷದಲ್ಲಿ ಕೇವಲ ಮಿಸ್ಸಡ್ ಕಾಲ್ ಮಾಡುವ ಮೂಲಕ ಸಿಲಿಂಡರ್ ಬುಕ್ ಮಾಡುವ ಸೌಲಭ್ಯ ಆರಂಭಿಸಿದೆ.

Written by - Nitin Tabib | Last Updated : Jan 2, 2021, 01:28 PM IST
  • ಇನ್ಮುಂದೆ ಕೇವಲ ಮಿಸ್ಸಡ್ ಕಾಲ್ ಮಾಡಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ.
  • ಆದರೆ, ಇದಕ್ಕಾಗಿ ನೀವು ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆ ಬಳಸುವುದು ಆವಶ್ಯಕ.
  • ಮಿಸ್ಸಡ್ ಕಾಲ್ ಬಂದ ಬಳಿಕ ಸಿಲಿಂಡರ್ ಬುಕ್ ಆಗಿರುವ ಮಾಹಿತಿಯ ಸಂದೇಶ ನಮ್ಮ ಮೊಬೈಲ್ ಗೆ ಬರಲಿದೆ.
ಕೇವಲ Missed Call ಮೂಲಕ ಸಿಲಿಂಡರ್ ಬುಕ್ ಮಾಡಿ, ಈ ಕಂಪನಿಯಿಂದ ಸೇವೆ ಆರಂಭ title=
Missed Call LPG Cylinder Booking (File Image)

Missed Call LPG Cylinder Booking:  ನವದೆಹಲಿ: ಹೊಸ ವರ್ಷದ ಆರಂಭದಲ್ಲಿಯೇ ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡುವ ಸುಲಭ ಆಯ್ಕೆಯೊಂದು ಇದೀಗ ಗ್ರಾಹಕರಿಗೆ ಲಭಿಸಿದ. ಹೌದು, ಇನ್ಮುಂದೆ ನೀವು ಅಡುಗೆ ಅನಿಲದ ಸಿಲಿಂಡರ್ ಬುಕ್ ಮಾಡಲು ಸರದಿಯಲ್ಲಿ ನಿಲ್ಲಬೇಕಾಗಿಲ್ಲ ಹಾಗೂ ಕಾಲ್ ಮಾಡುವ ಅವಶ್ಯಕತೆ ಕೂಡ ಇಲ್ಲ. ದೇಶದ ಅತಿ ದೊಡ್ಡ ತಿಳು ಉತ್ಪಾದಕ ಕಂಪನಿ ಇಂಡಿಯನ್ ಆಯಿಲ್ ತನ್ನ ಗ್ರಾಹಕರಿಗೆ ಮಿಸ್ಸಡ್ ಕಾಲ್ ಸೇವೆ ಆರಂಭ್ಸಿದೆ. ಈ ಸೇವೆಯನ್ನು ಬಳಸಲು ಗ್ರಾಹಕರು ತಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ ಕೇವಲ ಒಂದು ಮಿಸ್ಸಡ್ ಕಾಲ್ ನೀಡಿದರೆ ಸಾಕು.

ಇಡೀ ದೇಶಾದ್ಯಂತ ಈ ಸೇವೆ ಆರಂಭ
ಇಂಡಿಯನ್ ಆಯಿಲ್ ಕಾರ್ಪೋರೇಶನ್ ಇಡೀ ದೇಶಾದ್ಯಂತ ಈ ಸೇವೆಯನ್ನು ಆರಂಭಿಸಿದೆ. 8454955555 ಈ ಮೊಬೈಲ್ ಸಂಖ್ಯೆಗೆ ಗ್ರಾಹಕರು ತಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಬೇಕು. ಇದಕ್ಕಾಗಿ ಗ್ರಾಹಕರಿಂದ ಯಾವುದೇ ರೀತಿಯ ಶುಲ್ಕ ಪಡೆದುಕೊಳ್ಳಲಾಗುವುದಿಲ್ಲ. ಪ್ರಸ್ತುತ ಲಭ್ಯವಿರುವ IVR ಆಧಾರಿತ ಕಾಲ್ ವ್ಯವಸ್ಥೆಯಲ್ಲಿ ಸಾಮಾನ್ಯ ಕರೆಯ ದರಗಳು ಅನ್ವಯಿಸುತ್ತದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್, IVR ಸೇವೆಯನ್ನು ಬಳಸಲು ಅಸಮರ್ಥರಾಗಿರುವ ಜನರಿಗೆ ಹಾಗೂ ಅದರಲ್ಲೂ ವಿಶೇಷವಾಗಿ ವೃದ್ಧರಿಗೆ ಈ ಸೇವೆ ಅನುಕೂಲಕರವಾಗಿದೆ ಎಂದು ಹೇಳಿದೆ.

ಇದನ್ನು ಓದಿ- LPG Price Update: ಹೊಸ ವರ್ಷದಂದೇ ಗ್ರಾಹಕರಿಗೆ ಎಲ್ಪಿಜಿ ಬೆಲೆ ಏರಿಕೆ ಬಿಸಿ

ಭುವನೇಶ್ವರದಿಂದ ಈ ಸೇವೆ ಆರಂಭ
ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ, ಭುವನೇಶ್ವರದಲ್ಲಿ ಆಯೋಜಿಸಲಾಗಿದ್ದ ಒಂದು ಕ್ರಾರ್ಯಕ್ರಮದ ವೇಳೆ ಈ ಸೇವೆಯನ್ನು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಎರಡನೇ ಹಂತದ ಜಾಗತಿಕ ಮಟ್ಟದ ಪ್ರಿಮಿಯಂ ಗ್ರೇಡ್ ಪೆಟ್ರೋಲ್ (ಆಕ್ಟೇನ್) ಅನ್ನು ಸಹ ಪ್ರಸ್ತುತಪಡಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, LPG ವಿಷಯದಲ್ಲಿ ದೇಶ ದೊಡ್ಡ ಯಾತ್ರೆಯನ್ನು ಕೈಗೊಂಡಿದ್ದು, 2014ರ ಮೊದಲು ದೇಶದ ಒಟ್ಟು 13 ಕೋಟಿ ಜನರಿಗೆ ಕನೆಕ್ಷನ್ ಒದಗಿಸಲಾಗಿತ್ತು ಆದರೆ ಕಳೆದ 6 ವರ್ಷಗಳಲ್ಲಿ ಇದು 30 ಕೋಟಿಗೆ ತಲುಪಿದೆ ಎಂದಿದ್ದಾರೆ.

ಇದನ್ನು ಓದಿ- ಪ್ರತಿ ವಾರ ಬದಲಾಗಲಿದೆಯೇ LPG ಬೆಲೆ! ಇದರ ಸತ್ಯಾಸತ್ಯತೆ ಏನು?

ಈ ಸೌಕರ್ಯದ ಲಾಭ ಹೇಗೆ ಪಡೆಯಬೇಕು?
ಈ ಮಿಸ್ಸಡ್ ಕಾಲ್ ಸಲುಕರ್ಯ ಬಳಸಲು ಗ್ರಾಹಕರು ತಮ್ಮ ಅಧಿಕೃತ ಮೊಬೈಲ್ ನಂಬರ್ ನಿಂದ 8454955555 ಮೊಬೈಲ್ ಸಂಖ್ಯೆಗೆ ಮಿಸ್ಸಡ್ ಕಾಲ್ ಮಾಡಬೇಕು. ಮಿಸ್ಸಡ್ ಕಾಲ್ ನೀಡಿದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಸಿಲಿಂಡರ್ ಬುಕ್ ಆಗಿರುವ ಕುರಿತು ಮಾಹಿತಿ ಒಳಗೊಂಡ ಸಂದೇಶ ಬರಲಿದೆ.

ಇದನ್ನು ಓದಿ-LPG Cylinder ಮೇಲೆ ಪಡೆಯಿರಿ 500 ರೂ. ಕ್ಯಾಶ್‌ಬ್ಯಾಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News