ನಿಮ್ಮ ಬಳಿ ಈ ಕಂಪನಿಯ ಸಿಮ್ ಇದ್ದರೆ ನವೆಂಬರ್ 30ರ ಬಳಿಕ ಯಾವ OTPಯೂ ಬರುವುದಿಲ್ಲ !

.ಬಳಕೆದಾರರ ಗುರುತನ್ನು ಪರಿಶೀಲಿಸಲು OTPಯನ್ನು ಬಳಸಲಾಗುತ್ತದೆ. ಮೊಬೈಲ್ ಫೋನ್ ಬಳಸುತ್ತಿದ್ದರೆ ಒಟಿಪಿ ಬಗ್ಗೆ ನಿಮಗೆ ತಿಳಿದಿರಲೇಬೇಕು. 

Written by - Ranjitha R K | Last Updated : Nov 26, 2024, 05:11 PM IST
  • TRAIನ ಹೊಸ ನಿಯಮ ಜಾರಿ
  • ಒನ್ ಟೈಮ್ ಪಾಸ್‌ವರ್ಡ್ ಪಡೆಯುವಲ್ಲಿ ತೊಂದರೆ
  • ಬಳಕೆದಾರರ ಗುರುತನ್ನು ಪರಿಶೀಲಿಸಲು OTPಯನ್ನು ಬಳಸಲಾಗುತ್ತದೆ.
ನಿಮ್ಮ ಬಳಿ ಈ ಕಂಪನಿಯ ಸಿಮ್ ಇದ್ದರೆ ನವೆಂಬರ್ 30ರ ಬಳಿಕ ಯಾವ OTPಯೂ ಬರುವುದಿಲ್ಲ ! title=

TRAIನ ಹೊಸ ನಿಯಮಗಳಿಂದಾಗಿ, ಲಕ್ಷಾಂತರ ಭಾರತೀಯ ಮೊಬೈಲ್ ಬಳಕೆದಾರರು OTP ಅಂದರೆ ಒನ್ ಟೈಮ್ ಪಾಸ್‌ವರ್ಡ್ ಪಡೆಯುವಲ್ಲಿ ತೊಂದರೆ ಎದುರಿಸಬಹುದು.ಏರ್‌ಟೆಲ್, ವೊಡಾಫೋನ್-ಐಡಿಯಾ ಮತ್ತು ರಿಲಯನ್ಸ್ ಜಿಯೊದಂತಹ ದೊಡ್ಡ ಟೆಲಿಕಾಂ ಆಪರೇಟರ್‌ಗಳು TRAI ನ ಹೊಸ ನಿಯಮಗಳನ್ನು ಜಾರಿಗೆ ತರಲು ಡಿಸೆಂಬರ್ 1, 2024 ರವರೆಗೆ ಸಮಯಾವಕಾಶ ಇದೆ. ನೀವು ಮೊಬೈಲ್ ಫೋನ್ ಬಳಸುತ್ತಿದ್ದರೆ ಒಟಿಪಿ ಬಗ್ಗೆ ನಿಮಗೆ ತಿಳಿದಿರಲೇಬೇಕು. ಬಳಕೆದಾರರ ಗುರುತನ್ನು ಪರಿಶೀಲಿಸಲು OTPಯನ್ನು ಬಳಸಲಾಗುತ್ತದೆ.

ಯಾತಕ್ಕಾಗಿ ಈ ನಿಯಮ : 
ನಕಲಿ OTP ಮತ್ತು ಇತರ ಮೋಸದ ಸಂದೇಶಗಳನ್ನು ನಿಲ್ಲಿಸುವುದು ಈ ಹೊಸ ನಿಯಮಗಳ ಉದ್ದೇಶವಾಗಿದೆ. ಟೆಲಿಕಾಂ ಆಪರೇಟರ್‌ಗಳು ಸಂದೇಶದ ಮೂಲವನ್ನು ಪತ್ತೆ ಹಚ್ಚಬೇಕಾಗುತ್ತದೆ. ಇದರಿಂದ ಅವರು ನಕಲಿ ಸಂದೇಶಗಳನ್ನು ನಿರ್ಬಂಧಿಸಬಹುದು ಮತ್ತು ಬಳಕೆದಾರರನ್ನು ರಕ್ಷಿಸಬಹುದು.ಟೆಲಿಕಾಂ ಆಪರೇಟರ್‌ಗಳು ಈ ನಿಯಮಗಳನ್ನು ಸಮಯಕ್ಕೆ ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗದಿದ್ದರೆ, OTP ಪಡೆಯುವಲ್ಲಿ ತೊಂದರೆ ಉಂಟಾಗಬಹುದು. ಬ್ಯಾಂಕಿಂಗ್, ಇ-ಕಾಮರ್ಸ್ ಮತ್ತು ಸಾಮಾಜಿಕ ಮಾಧ್ಯಮದಂತಹ ಸೇವೆಗಳಿಂದ OTP ಸ್ವೀಕರಿಸುವುದು ವಿಳಂಬವಾಗಬಹುದು ಅಥವಾ ಸಂಪೂರ್ಣವಾಗಿ ನಿಂತು ಹೋಗಬಹುದು. 

ಇದನ್ನೂ ಓದಿ : ಬಿಎಸ್‌ಎನ್‌ಎಲ್‌ನ ಬೊಂಬಾಟ್ ಪ್ಲಾನ್: ಅಗ್ಗದ ರೀಚಾರ್ಜ್ ಯೋಜನೆಯಲ್ಲಿ 200 ದಿನಗಳವರೆಗೆ ಫ್ರೀ ಕಾಲ್

TRAI ನ ಯೋಜನೆ :
ನವೆಂಬರ್ 30 ರೊಳಗೆ, TRAI ನಿಯಮಗಳನ್ನು ಅನುಸರಿಸದ ಕಂಪನಿಗಳಿಗೆ  ಎಚ್ಚರಿಕೆ ನೀಡಲಾಗುತ್ತದೆ. ನಂತರ, ಡಿಸೆಂಬರ್ 1 ರಿಂದ ಅಂತಹ ಸಂದೇಶಗಳನ್ನು ನಿರ್ಬಂಧಿಸಲಾಗುತ್ತದೆ.

ಬಳಕೆದಾರರು ಏನು ಮಾಡಬಹುದು : 
1.  ಟೂ ಫ್ಯಾಕ್ಟರ್ ಅಥೇನ್ಟಿಕೆಶನ್  ಸಕ್ರಿಯಗೊಳಿಸಿ (2FA). ಬಳಕೆದಾರರು ಟೂ ಫ್ಯಾಕ್ಟರ್ ಅಥೇನ್ಟಿಕೆಶನ್ ಸಕ್ರಿಯಗೊಳಿಸುವ ಮೂಲಕ ಆನ್‌ಲೈನ್ ಖಾತೆಗಳ ಸುರಕ್ಷತೆಯನ್ನು ಹೆಚ್ಚಿಸಬಹುದು. 
2. ಫಿಶಿಂಗ್ ಅಟ್ಯಾಕ್ ಬಗ್ಗೆ ಎಚ್ಚರದಿಂದಿರಿ. ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಗೊತ್ತಿಲ್ಲದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.
3. ನಿಮ್ಮ ಸಾಧನವನ್ನು ಸುರಕ್ಷಿತವಾಗಿರಿಸಿ. ಬಲವಾದ ಪಾಸ್‌ವರ್ಡ್ ಬಳಸಿ. ನಿಮ್ಮ ಸಾಧನದ ಸಾಫ್ಟ್‌ವೇರ್ ಅನ್ನು ನಿಯಮಿತವಾಗಿ ಅಪ್ಡೇಟ್ ಮಾಡಿ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News