ನವದೆಹಲಿ : Xiaomi ಕಂಪನಿಯು ತನ್ನ ಪ್ರತಿಯೊಂದು ಉತ್ಪನ್ನದೊಂದಿಗೆ ಯಾವುದಾದರೊಂದು ವಿಭಿನ್ನವಾದ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಉತ್ಪನ್ನಗಳಲ್ಲಿ ಕಂಪನಿಯ ಈ ಪ್ರಯತ್ನ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಉತ್ಪನ್ನಗಳಲ್ಲಿ Xiaomi ಯ Mi TV Master 77 ಕೂಡಾ ಸೇರಿದೆ. ಈ ಟಿವಿ ಇತರ ಟಿವಿ ಸೆಟ್‌ಗಳಿಗಿಂತ ಹೇಗೆ ಭಿನ್ನವಾಗಿದೆ ಮತ್ತು ಅದರಲ್ಲಿ ವಿಶೇಷತೆ ಏನು ನೋಡೋಣ..
ಮೊಬೈಲ್ ಫೋನ್ ಗಿಂತಲೂ ಸ್ಲಿಮ್ ಆಗಿದೆ ಮಿ ಟಿವಿ ಮಾಸ್ಟರ್ 77 :
ಮಿ ಟಿವಿ ಮಾಸ್ಟರ್ 77 ರ (Mi TV Master 77) ಅತಿ ತೆಳುವಾದ ಸ್ಕ್ರೀನ್ ಹೊಂದಿದೆ. ಅತಿ ತೆಳುವಾದ ಅಂದರೆ ಕೇವಲ 8.2 ಮಿಮೀ ದಪ್ಪವಾಗಿದೆ ಈ ಟಿವಿ . ಇದರರ್ಥ ಈ ಟಿವಿ ಮೊಬೈಲ್ (Mobile) ಫೋನ್ ಗಿಂತ ತೆಳ್ಳಗಾಗಿದೆ.
ಇದನ್ನೂ ಓದಿ : ISRO: ಭೂಮಿಯ ಮೇಲ್ವಿಚಾರಣೆ ಉಪಗ್ರಹ EOS-03ರ ಮಿಷನ್ ವಿಫಲ, ಉಡಾವಣೆಯ ನಂತರ ಏನಾಯ್ತು ಗೊತ್ತಾ?
ಒಂಬತ್ತು ಸ್ಪೀಕರ್ ಗಳ ಟಿವಿ :
ಈ ಟಿವಿಯು ಒಂಬತ್ತು ಸ್ಪೀಕರ್ ಗಳನ್ನೂ ಒಳಗೊಂಡಿದೆ. ಪ್ರತಿ ಸ್ಪೀಕರ್ 70W ಆಡಿಯೋ ಗುಣಮಟ್ಟವನ್ನು ಹೊಂದಿದೆ. ಫೋನಿನಲ್ಲಿ ಪ್ಲೇ ಆಗುತ್ತಿರುವ ವಿಡಿಯೋವನ್ನು (Video) ಟಿವಿಯ ಎನ್ಎಫ್ ಸಿ ರಿಮೋಟ್ ಕಂಟ್ರೋಲ್ ಮೂಲಕ ಟಿವಿಯಲ್ಲೂ ಪ್ಲೇ ಮಾಡಬಹುದು.
ಟಿವಿಯ ಇತರ ವೈಶಿಷ್ಟ್ಯಗಳು :
ಕ್ವಾಡ್-ಕೋರ್ ಕಾರ್ಟೆಕ್ಸ್ A73 ಮೀಡಿಯಾ ಟೆಕ್ ಚಿಪ್‌ಸೆಟ್‌ನೊಂದಿಗೆ ಮಾಲಿ- G52 MC2 GPU ನಿಂದ ನಡೆಸಲ್ಪಡುತ್ತಿದೆ. Mi TV Master 77ನಲ್ಲಿ 8.5GB RAMಮತ್ತು 64GB ಸ್ಟೋರೇಜ್ ನ ಸೌಲಭ್ಯ ಇದೆ. ಅದರ ಅಲ್ಟ್ರಾ ವೈಡ್ ಬ್ಯಾಂಡ್ (UWB) ಚಿಪ್‌ನೊಂದಿಗೆ, ಬಳಕೆದಾರರು ಒಂದೇ ಸಮಯದಲ್ಲಿ UWB- ಚಾಲಿತ ಸಾಧನಗಳಿಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಈ OLED ಟಿವಿ ನಾಲ್ಕು ಚಾನೆಲ್ ಕಲರ್ , 10-ಬಿಟ್ ಮತ್ತು ಡೆಲ್ಟಾ-ಇ 1.5 ಹೊಂದಿದೆ. ಮಿ ಟಿವಿ ಮಾಸ್ಟರ್ 77 ವೈಫೈ 6 ಮತ್ತು ಬ್ಲೂಟೂತ್ 5.0 ಅನ್ನು ಸಪೋರ್ಟ್ ಮಾಡುತ್ತದೆ. ಮತ್ತು 3 HDMI 2.1 ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್‌ಗಳು ಮತ್ತು ಇನ್ನೂ ಹಲವು ಇನ್ಪುಟ್ ಮೂಲಗಳನ್ನು ಹೊಂದಿದೆ.
ಇದನ್ನೂ ಓದಿ : ಇದ್ದಕ್ಕಿದ್ದಂತೆ WhatsApp ಅಕೌಂಟ್ ಲಾಗ್ಔಟ್ ಆಗಿದೆಯಾ ? ಕಾರಣ ತಿಳಿದುಕೊಳ್ಳಿ
ಈ ಟಿವಿ ಎಲ್ಲಿ ಸಿಗುತ್ತದೆ :
ಈ ಟಿವಿ ಆಗಸ್ಟ್ 18 ರಿಂದ ಚೀನಾದಲ್ಲಿ (China) ಖರೀದಿಗೆ ಲಭ್ಯವಿರುತ್ತದೆ. ಮಿ ಟಿವಿ ಮಾಸ್ಟರ್ 77 ಬೆಲೆ 19,999 ಯುವಾನ್. ಇನ್ನು ಈ ಟಿವಿ ಮೇಲೆ 3000 ಯುವಾನ್ ರಿಯಾಯಿತಿ ನೀಡಲು ಕಂಪನಿಯು ನಿರ್ಧರಿಸಿದೆ, ಅಂದರೆ ರಿಯಾಯಿತಿ ನಂತರ ಇದು 16,999 ಯುವಾನ್ ಗ ಸಿಗಲಿದೆ. ಸದ್ಯಕ್ಕೆ ಈ ಟಿವಿ ಜಾಗತಿಕವಾಗಿ ಲಭ್ಯವಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ