ಕಳೆದ ಎರಡು ದಿನಗಳಿಂದ ಭಟ್ಕಳ ಪಟ್ಟಣದಲ್ಲಿ ವಿಜೃಂಭಣೆಯಿದ ನಡೆಯುತ್ತಿದ್ದ ಸುಪ್ರಸಿದ್ದ ಮಾರಿ ಹಬ್ಬ ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ಮಾರಿ ಮೂರ್ತಿ ವಿಸರ್ಜಿಸುವ ಮೂಲಕ ಸಂಪನ್ನ ಗೊಂಡಿತು. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರು ಮಳೆಯನ್ನು ಲೆಕ್ಕಿಸದೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ದೇವಿಯ ಮೂರ್ತಿಯನ್ನು ನಗರದ ಮಾರಿಗುಡಿಯಿಂದ ಸಾವಿರಾರು ಭಕ್ತರು, ಸ್ವಯಂ ಸೇವಕರು, ಆಡಳಿತ ಮಂಡಳಿ ಸದಸ್ಯರುಗಳು ಸೇರಿ ಜಾಲಿಕೋಡಿಯ ಸಮುದ್ರ ತೀರಕ್ಕೆ ಒಯ್ದು ಅಲ್ಲಿ ಮೂರ್ತಿಯ ಭಾಗಗಳನ್ನು ಬೇರ್ಪಡಿಸಿ ಸಮುದ್ರದಲ್ಲಿ ವಿಸರ್ಜಿಸಲಾಯಿತು.