ಮಳೆಗಾಲ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಇನ್ನೂ ಮಳೆಯ ಅಬ್ಬರ ನಿಂತಿಲ್ಲ. ದೇಶದ ಕೆಲವೆಡೆ ಈಗಲೂ ಮಳೆಯಾಗುತ್ತಿದೆ. ಮತ್ತೊಂದೆಡೆ ನಿಧಾನವಾಗಿ ಚಳಿಯೂ ದೇಶದ ಅನೇಕ ಭಾಗಗಳನ್ನು ಆವರಿಸುತ್ತಿದೆ. ಹೀಗಿರುವಾಗ್ಲೆ ತಮಿಳುನಾಡು, ಶ್ರೀಲಂಕಾಗೂ ಫೆಂಗಲ್ ಚಂಡಮಾರುತ ಎಂಟ್ರಿ ಕೊಟ್ಟಿದೆ. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಚಂಡಮಾರುತದ ರೂಪ ತಾಳಿದ್ದು, ಫೆಂಗಲ್ ಸೈಕ್ಲೋನ್ ಪರಿಣಾಮ ತಮಿಳನಾಡಿನಲ್ಲಿ ಡಿಸೆಂಬರ್ 1ರವರೆಗೂ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.