ಕೂಡ್ಲಿಗಿ ತಾಲೂಕಿನ ಕಡಕೋಳ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕರಡಿ ಬಿದ್ದಿದೆ. ಚಿಕ್ಕಜೋಗಿಹಳ್ಳಿ, ಕಡಕೋಳ, ಮಡ್ಲಾನಾಯಕನಹಳ್ಳಿ, ಭೀಮಸಮುದ್ರ, ಕುರಿಹಟ್ಟಿ ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಕರಡಿ .. ಚಿಕ್ಕಜೋಗಿಹಳ್ಳಿಯ ಪೆಟ್ರೋಲ್ ಬಂಕ್, ಲಕ್ಷ್ಮಣ್ ನಾಯಕ್ ಎಂಬುವರ ತೋಟದ ಬಳಿ ರಾತ್ರಿ ವೇಳೆ ಕರಡಿ ಓಡಾಡಿರುವ ವಿಡಿಯೋ ವೈರಲ್ ಆಗಿತ್ತು. ಕೆಲವೆಡೆ ಹಗಲಲ್ಲಿಯೇ ಕರಡಿ ಕಾಣಿಸಿಕೊಂಡು ರೈತರ ನಿದ್ದೆಗೆಡಿಸಿದ್ದವು