ಕರ್ನಾಟಕದಲ್ಲಿ ಆಗಿದ್ದು ಮಹಾರಾಷ್ಟ್ರದಲ್ಲಿ ಆಗುತ್ತಿದೆ

  • Zee Media Bureau
  • Jun 28, 2022, 03:46 PM IST

ಮಹಾರಾಷ್ಟ್ರದಲ್ಲಿ ಸರ್ಕಾರ ಅಸ್ಥಿರತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಕರ್ನಾಟಕದಲ್ಲಿ ಆಗಿದ್ದು ಮಹಾರಾಷ್ಟ್ರದಲ್ಲಿ ಆಗುತ್ತಿದೆ. ಸಿಎಂ ಉದ್ಧವ್ ಠಾಕ್ರೆ ನಡವಳಿಕೆಯೆ ಇದಕ್ಕೆ ಕಾರಣ. ಸಿಎಂ ಆದ ಮೇಲೆ ಸರ್ವಾಧಿಕಾರಿಗಳಾದರೆ ಹೀಗೆ ಆಗುತ್ತದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ದರ್ಪ, ದೌರ್ಜನ್ಯದಿಂದ ಇಲ್ಲಿನ ಶಾಸಕರು ದಂಗೆ ಎದ್ದರು. ಇದೇ ಕೆಲಸ ಮಹಾರಾಷ್ಟ್ರದಲ್ಲೂ ಆಗುತ್ತಿದೆ. ಶಾಸಕರ ಸ್ವಾಭಿಮಾನ ಕೆಣಕಿದ್ದಾಗ ಈ ರೀತಿಯ ಕ್ಷೀಪ್ರ ರಾಜಕೀಯ ಕ್ರಾಂತಿ ಆಗುತ್ತೆ ಎಂದು ವಿಶ್ವನಾಥ್ ಹೇಳಿದರು.

Trending News