Digital Scam: ಈ ಸಂಖ್ಯೆಗಳಿಂದ ಕರೆ ಸ್ವೀಕರಿಸದಂತೆ BSNL, Jio, Airtel, Vi ಗ್ರಾಹಕರಿಗೆ ಸರ್ಕಾರದ ಎಚ್ಚರಿಕೆ!

Government Wans: ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಸ್ಕ್ಯಾಮರ್‌ಗಳ ಹಾವಳಿ ಹೆಚ್ಚಾಗಿದೆ. ಭಾರತೀಯ ನಾಗರೀಕರು ಈ ರೀತಿಯ ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಸರ್ಕಾರ ಬಿ‌ಎಸ್‌ಎನ್‌ಎಲ್, ಜಿಯೋ, ಏರ್ಟೆಲ್, ವೋಡಾಫೋನ್ ಐಡಿಯಾ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. 

Written by - Yashaswini V | Last Updated : Dec 3, 2024, 08:43 AM IST
  • ಡಿಜಿಟಲ್ ಸ್ಕ್ಯಾಮರ್‌ಗಳಿಂದ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ನಿರಂತರವಾಗಿ ಜಾಗೃತಿಯನ್ನು ಮೂಡಿಸುತ್ತಲೇ ಇರುತ್ತದೆ.

    ಇತ್ತೀಚೆಗೆ ದೂರಸಂಪರ್ಕ ಇಲಾಖೆ (DoT) ಭಾರತದಲ್ಲಿ ಹೆಚ್ಚಾಗುತ್ತಿರುವ ಅಂತಾರಾಷ್ಟ್ರೀಯ ವಂಚನೆ ಕರೆಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದೆ.
  • ಕೆಲವು ಸಂಖ್ಯೆಗಳಿಂದ ಆರಂಭವಾಗುವ ಕರೆಗಳನ್ನು ಸ್ವೀಕರಿಸದಂತೆ ತಿಳಿಸಿದೆ.
Digital Scam: ಈ ಸಂಖ್ಯೆಗಳಿಂದ ಕರೆ ಸ್ವೀಕರಿಸದಂತೆ BSNL, Jio, Airtel, Vi ಗ್ರಾಹಕರಿಗೆ ಸರ್ಕಾರದ ಎಚ್ಚರಿಕೆ!  title=

Digital Scam: ಭಾರತದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಡಿಜಿಟಲ್ ಸ್ಕ್ಯಾಮರ್‌ಗಳು ವಿದೇಶದಲ್ಲೇ ಕುಳಿತು ದೊಡ್ಡ ಮೊತ್ತದ ಹಣವನ್ನು ಲೂಟಿ ಮಾಡುತ್ತಿದ್ದಾರೆ.  ಈ ಸ್ಕ್ಯಾಮರ್‌ಗಳು ಸಾಮಾನ್ಯವಾಗಿ "ಡಿಜಿಟಲ್ ಅರೆಸ್ಟ್" ಬೆದರಿಕೆಯಂತಹ ತಂತ್ರಗಳನ್ನು ಬಳಸುತ್ತಿದ್ದು, ಜನರಲ್ಲಿ ಭಯ ಹುಟ್ಟಿಸಿ ಹಣ ವರ್ಗಾವಣೆಗೆ ಒತ್ತಡ ಹೇರುತ್ತಾರೆ. ಇಂತಹ ವಂಚನೆಯಿಂದ ಸಾರ್ವಜನಿಕರನ್ನು ರಕ್ಷಿಸುವ ದೃಷ್ಟಿಯಿಂದ ಭಾರತ ಸರ್ಕಾರ ಬಿ‌ಎಸ್‌ಎನ್‌ಎಲ್, ಜಿಯೋ, ಏರ್ಟೆಲ್, ವೋಡಾಫೋನ್ ಐಡಿಯಾ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. 

ಹೌದು, ಡಿಜಿಟಲ್ ಸ್ಕ್ಯಾಮರ್‌ಗಳಿಂದ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ನಿರಂತರವಾಗಿ ಜಾಗೃತಿಯನ್ನು ಮೂಡಿಸುತ್ತಲೇ ಇರುತ್ತದೆ. ಇತ್ತೀಚೆಗೆ ದೂರಸಂಪರ್ಕ ಇಲಾಖೆ (DoT) ಭಾರತದಲ್ಲಿ  ಹೆಚ್ಚಾಗುತ್ತಿರುವ ಅಂತಾರಾಷ್ಟ್ರೀಯ ವಂಚನೆ ಕರೆಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದು, ಕೆಲವು ಸಂಖ್ಯೆಗಳಿಂದ ಆರಂಭವಾಗುವ ಕರೆಗಳನ್ನು ಸ್ವೀಕರಿಸದಂತೆ ತಿಳಿಸಿದೆ. 

ಇದನ್ನೂ ಓದಿ- iPhone ಬಳಕೆದಾರರಿಗೆ ಸರ್ಕಾರದಿಂದ ರೆಡ್ ಅಲರ್ಟ್..! ನಿರ್ಲಕ್ಷಿಸಿದ್ರೆ ಅಪಾಯ ಖಂಡಿತ...!

ಈ ಸಂಖ್ಯೆಗಳಿಂದ ಕರೆ ಸ್ವೀಕರಿಸದಂತೆ ಮೊಬೈಲ್ ಬಳಕೆದಾರರಿಗೆ ಸರ್ಕಾರದ ಎಚ್ಚರಿಕೆ! 
ಎಚ್ಚರಿಕೆ ಸಂದೇಶದಲ್ಲಿ ದೂರಸಂಪರ್ಕ ಇಲಾಖೆ (DoT) +77, +89, +85, +86 ಮತ್ತು +84 ನಂತಹ ಕೆಲವು ಪರಿಚಯವಿಲ್ಲದ ದೇಶದ ಕೋಡ್‌ಗಳಿಂದ ಬರುವ ಯಾವುದೇ ಕರೆಗಳನ್ನು ಸ್ವೀಕರಿಸದಂತೆ ಸಲಹೆ ನೀಡಿದೆ. 

DoT ಮತ್ತು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಈ ರೀತಿಯ ಕರೆಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ಇಂತಹ ಅನುಮಾನಾಸ್ಪದ ಕರೆಗಳು ಬಂದಿದ್ದೆ ಆದರೆ, ಸಂಚಾರ ಸಾಧಿ ಎಂಬ ಪೋರ್ಟಲ್ ಮೂಲಕ ಇವುಗಳ ಮೂಲಕ ವರದಿ ಮಾಡುವಂತೆ ನಾಗರೀಕರನ್ನು ಉತ್ತೇಜಿಸಿದೆ. 

ಇದನ್ನೂ ಓದಿ- IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್'ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್'ನಲ್ಲಿ ಮಾಡಿ!

ಗೃಹ ಸಚಿವಾಲಯದಿಂದ ಲಭ್ಯವಿರುವ ಮಾಹಿತಿಗಳ ಪ್ರಕಾರ, ಭಾರತದಲ್ಲಿ 2024ರ ಅಕ್ಟೋಬರ್ ವರೆಗೆ ಸುಮಾರು 2,140 ಕೋಟಿ ರೂ.ಗಳನ್ನು ಸ್ಕ್ಯಾಮರ್‌ಗಳು ವಂಚಿಸಿದ್ದಾರೆ. ಈ ವಂಚನೆ ಕರೆಗಳಲ್ಲಿ ಸಾಮಾನ್ಯವಾಗಿ ಜಾರಿ ನಿರ್ದೇಶನಾಲಯ (ED), ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI), ಪೊಲೀಸ್, ಭಾರತೀಯ ರಿಸರ್ವ್ ಬ್ಯಾಂಕ್ (RBI) ನಂತಹ ಭಾರತೀಯ ಏಜೆನ್ಸಿಗಳ ಅಧಿಕಾರಿಗಳಂತೆ ನಟಿಸಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News