ಮದುವೆ ಅನ್ನುವುದು ಒಂದು ದಿನದ ಆಟವಲ್ಲ. ಮದುವೆಯ ದಿನಕ್ಕೂ ಮುನ್ನ ಅನೇಕ ಶಾಸ್ತ್ರ ಸಂಪ್ರದಾಯಗಳನ್ನು ನೆರವೇರಿಸಲಾಗುತ್ತದೆ. ಅಲ್ಲಿ ಒಂದು ಸಂಸ್ಕೃತಿಯೇ ಮೇಳೈಸುತ್ತದೆ. ಆಯಾ ಸಮಾಜಕ್ಕೆ ಅನುಗುಣವಾಗಿ ಮದುವೆಯ ಸಂಪ್ರದಾಯಗಳು ಭಿನ್ನವಾಗಿರುತ್ತವೆ. ಆ ಸಂಪ್ರದಾಯಕ್ಕೆ ಅನುಗುಣವಾಗಿ ವಿವಾಹ ನಡೆಯುತ್ತದೆ. ಹಿಂದೂ ಧರ್ಮದಲ್ಲೂ ಮದುವೆಗೆ ಮುನ್ನ ಅನೇಕ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಮದುವೆಗೂ ಮುನ್ನ ಅರಿಶಿನ ಶಾಸ್ತ್ರವನ್ನು ನಡೆಸಲಾಗುತ್ತದೆ. ಈ ಶಾಸ್ತ್ರವನ್ನು ಪಾಲಿಸುವುದು ಅಗತ್ಯವಾಗಿರುತ್ತ ದೆ. ಏಕೆಂದರೆ ಇದರ ಹಿಂದೆ ಧಾರ್ಮಿಕ ಮಾತ್ರವಲ್ಲದೆ ವೈಜ್ಞಾನಿಕ ಕಾರಣಗಳೂ ಅಡಗಿವೆ.