Funny Prank Video: ರಸ್ತೆಯಲ್ಲಿ ಪ್ರ್ಯಾಂಕ್‌ ಮಾಡಲು ಹೋಗಿ ಒದೆ ತಿಂದ ಯೂಟ್ಯೂಬರ್

Funny Video: ವಿಡಿಯೋವೊಂದು ವೈರಲ್ ಆಗಿದ್ದು, ರಸ್ತೆಯಲ್ಲಿ ಪ್ರ್ಯಾಂಕ್‌ ಮಾಡಲು ಹೋದವನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ನಡು ರಸ್ತೆಯಲ್ಲಿ ಹೋಗುತ್ತಿದ್ದವನಿಗೆ ಪ್ರ್ಯಾಂಕ್‌ ಮಾಡಿದ ವ್ಯಕ್ತಿಯ ಕಪಾಳಕ್ಕೆ ದಾರಿಹೋಕ ಏಟು ಕೊಟ್ಟ ವಿಡಿಯೋ ವೈರಲ್‌ ಆಗಿದೆ.   

Written by - Chetana Devarmani | Last Updated : Dec 18, 2022, 02:48 PM IST
  • ರಸ್ತೆಯಲ್ಲಿ ಪ್ರ್ಯಾಂಕ್‌ ಮಾಡಲು ಹೋಗಿ ಯಡವಟ್ಟು
  • ದಾರಿಹೋಕನಿಂದ ಒದೆ ತಿಂದ ಯೂಟ್ಯೂಬರ್
  • ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
Funny Prank Video: ರಸ್ತೆಯಲ್ಲಿ ಪ್ರ್ಯಾಂಕ್‌ ಮಾಡಲು ಹೋಗಿ ಒದೆ ತಿಂದ ಯೂಟ್ಯೂಬರ್  title=
ಪ್ರ್ಯಾಂಕ್‌

Prank Video: ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಏನನ್ನಾದರೂ ಮಾಡುತ್ತಿರುತ್ತಾರೆ. ಅನೇಕ ಬಾರಿ  ಅದು ಅವರಿಗೆ ಉಲ್ಟಾ ಹೊಡೆಯುತ್ತದೆ. ಇಲ್ಲೊಬ್ಬ ಯೂಟ್ಯೂಬರ್ ಒಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಪ್ರ್ಯಾಂಕ್‌ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ದಾರಿಹೋಕನಿಗೆ ಈತ ಮಾಡಿದ ಪ್ರ್ಯಾಂಕ್‌ ಕೋಪ ಬರಿಸಿದಂತಿದೆ. ಆತ ಈತನಿಗೆ ಹೊಡೆದಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. 

ವಾಸ್ತವವಾಗಿ, ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನೇಕ ಬಳಕೆದಾರರು ಅದನ್ನು ಹಂಚಿಕೊಳ್ಳುವ ಮೂಲಕ ನಗೆಗಡಲಲ್ಲಿ ತೇಲುತ್ತಿದ್ದಾರೆ. ಪ್ರ್ಯಾಂಕ್‌ ಎಡವಟ್ಟಾದಾಗ ಹೀಗಾಗುತ್ತದೆ ಎಂದು ಇದಕ್ಕೆ ಶೀರ್ಷಿಕೆ ಬರೆದಿದ್ದಾರೆ. ಒಬ್ಬ ವ್ಯಕ್ತಿಯು ರಸ್ತೆಯಲ್ಲಿ ಹೋಗುತ್ತಿರುವುದು ಗೋಚರಿಸುತ್ತದೆ. ಆಗ ಇದ್ದಕ್ಕಿದ್ದಂತೆ ಕಿಡಿಗೇಡಿ ಯೂಟ್ಯೂಬರ್ ಹಿಂದಿನಿಂದ ಬಂದು ಆ ವ್ಯಕ್ತಿಯ ಕಿವಿಯ ಬಳಿ ಜೋರಾಗಿ ಹಾರ್ನ್ ಮಾಡುತ್ತಾನೆ.

ಇದನ್ನೂ ಓದಿ : Viral Video : ಹಾವನ್ನು ಬೇಟೆಯಾಡಿದ ಜೇಡ! ರೋಮಾಂಚಕ ವಿಡಿಯೋ ವೈರಲ್‌

ಮೊದಲು ಆ ರಸ್ತೆಯಲ್ಲಿ ಹೋಗುತ್ತಿದ್ದ ಪ್ರಯಾಣಿಕ ತಲೆ ಕೆಡಿಸಿಕೊಳ್ಳದಿದ್ದರೂ ಹಿಂದೆ ತಿರುಗಿ ನೋಡಿದಾಗ ಸಿಟ್ಟು ಬರುತ್ತದೆ. ಅಪರಿಚಿತ ವ್ಯಕ್ತಿ ತುಂಬಾ ಕೋಪಗೊಂಡು ಯೂಟ್ಯೂಬ್ರ್‌ಗೆ ಕಪಾಳಮೋಕ್ಷ ಮಾಡಿದನು. ಇದರ ನಂತರ ಯೂಟ್ಯೂಬರ್‌ನ ಸ್ನೇಹಿತ ಅಲ್ಲಿಗೆ ಬಂದು ಇದು ಕೇವಲ ತಮಾಷೆ ಎಂದು ಹೇಳುತ್ತಾನೆ. 

 

 

ಈ ಸಮಯದಲ್ಲಿ, ಆ ಅಪರಿಚಿತ ವ್ಯಕ್ತಿ ಸ್ವಲ್ಪ ಸಮಯದ ನಂತರ ಅಲ್ಲಿಂದ ಹೊರಟು ಹೋಗುತ್ತಾನೆ ಆದರೆ ಯೂಟ್ಯೂಬರ್‌ಗೆ ಕಪಾಳಮೋಕ್ಷ ಮಾಡುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಅನೇಕ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. 

ಇದನ್ನೂ ಓದಿ : Nuclear war : ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಕೊಟ್ಟ ಪಾಕ್ ಸಚಿವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News