Stone Nandi Idol Drinking Water: ಕಲ್ಲಿನ ನಂದಿ ಮೂರ್ತಿ ನೀರು ಕುಡಿಯುತ್ತಿರುವ ಪವಾಡವೊಂದು ಬೀದರ್ ಜಿಲ್ಲೆಯಲ್ಲಿ ನಡೆದಿದ್ದು, ಇದನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ. ಇಂಥ ಘಟನೆ ನಡೆದಿದ್ದು ನಗರದ ಹೊರವಲಯದ ಧುಮಸಾಪುರ ಗ್ರಾಮದಲ್ಲಿ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಂಡೋಪತಂಡವಾಗಿ ದೇವಾಲಯಕ್ಕೆ ಲಗ್ಗೆ ಇಡುತ್ತಿರುವ ಹೆಣ್ಮಕ್ಕಳು ಚಮಚದಿಂದ ಕಲ್ಲಿನ ಮೂರ್ತಿಗೆ ನೀರು ಕುಡಿಸುತ್ತಿದ್ದಾರೆ. ಒಂದು ಹನಿಯೂ ಚೆಲ್ಲದಂತೆ ವಿಗ್ರಹ ನೀರು ಕುಡಿದಿದೆ. ಇದು ವಿಸ್ಮಯವೋ, ಪವಾಡವೋ ಗೊತ್ತಿಲ್ಲ. ಆದರೆ ಕಲ್ಲಿನ ನಂದಿಯ ಮೂರ್ತಿ ನೀರು ಕುಡಿದಿದ್ದು ನಿಜ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು...
ಬೀದರ್ ನಗರದ ಹೋರವಲು ಧುಮಸಾಪುರ (ಎಸ ಎಂ ಕೃಷ್ಣಾ ನಗರ) ಗ್ರಾಮದಲ್ಲಿ ಭವಾನಿ ಮಾತೆಯ ದೇವಾಲಯವಿದೆ. ಭವಾನಿ ದೇವಿಯ ಮೂರ್ತಿ ಎದುರು ಸುಮಾರು 11 ವರ್ಷದ ಹಿಂದೆ ನಂದಿ ವಿಗ್ರಹ ಪ್ರತಿಸ್ಥಾಪನೆ ಮಾಡಲಾಗಿತ್ತು. ದೇವಸ್ಥಾನದ ಪೂಜೆ ಕೈಂಕರ್ಯಗಳನ್ನು ನೋಡಿಕೊಳ್ಳುತ್ತಿರುವ ಶಶಿಕಲಾ ಮಠಪತಿ ಅವರು ನಿತ್ಯದಂತೆ ಅಭಿಷೇಕ ಮುಗಿಸಿ ನಂದಿ ಮೂರ್ತಿ ಎದುರು ತೀರ್ಥವನ್ನು ಇಟ್ಟಿದ್ದಾರೆ. ಈ ಸಂದರ್ಭದಲ್ಲಿ ನೋಡುನೋಡುತ್ತಿದ್ದಂತೆ ಕಲ್ಲಿನ ನಂದಿ ವಿಗ್ರಹವು ಆ ತೀರ್ಥವನ್ನು ಕುಡಿದಿದೆ.
ಇದನ್ನೂ ಓದಿ- Viral Video: 73 ವರ್ಷದ ವೃದ್ಧನ ಮಧುರ ಕಂಠಕ್ಕೆ ಖ್ಯಾತ ಬಾಲಿವುಡ್ ಗಾಯಕ ಶಾನ್ ಪಾಪಾ ಫಿದಾ; ವಿಡಿಯೋ ವೈರಲ್!
ಈ ಸುದ್ದಿ ದುಮಸಾಪುರದ ಸುತ್ತ ಮುತ್ತಲ ಹಳ್ಳಿಗಳಿಗೆ ಕಾಡ್ಗಿಚ್ಚಿನಂತೆ ಹಬ್ಬಿದ್ದು ಬೆಳ್ಳೂರು, ಎಸ್.ಎಂ. ಕೃಷ್ಣ ನಗರ, ಗುಂಪಾ, ಕುಂಬಾರವಾಡಾ ಸೇರಿದಂತೆ ಸಮೀಪದ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಈ ದೇವಾಲಯದತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ, ತಾವೂ ಕೂಡ ನಂದಿ ವಿಗ್ರಹಕ್ಕೆ ನೀರುಣಿಸಿ ತೆರಳುತ್ತಿದ್ದಾರೆ.
ಇಲ್ಲಿನ ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ, ಭಕ್ತರಿಗೆ ಬೇಡಿದ ವರವನ್ನು ಕರುಣಿಸುವ ಈ ಪ್ರತಿಷ್ಠಿತ ಭವಾನಿ ಮಂದಿರಕ್ಕೆ ಪ್ರತಿ ವರ್ಷ ನವರಾತ್ರಿಯಲ್ಲಿ ಜನ ಸಾಗರವೇ ಹರಿದು ಬರುತ್ತದೆ. ದಸರಾ ವೇಳೆ ಒಂಬತ್ತು ದಿನಗಳ ಕಾಲ ಭವಾನಿ ಮಂದಿರದಲ್ಲಿ ಶಶಿಕಲಾ ಮಠಪತಿ ಅವರು ಕೈಯಲ್ಲಿ ಭವಾನಿ ಘಟ ಹಿಡಿದು ಪೂಜೆ ನಡೆಸುತ್ತಾರೆ.
ಸಾರ್ವಜನಿಕರ ನಂಬಿಕೆಗಳ ಪ್ರಕಾರ, ಭವಾನಿ ಮಂದಿರಕ್ಕೆ ಬಂದು ಭಕ್ತಿಯಿಂದ ಬೇಡಿದರೆ ಇಷ್ಟಾರ್ಥಗಳು ನೆರವೇರುತ್ತವೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ, ಹಣಕಾಸಿನ ತೊಂದರೆ ಇರುವವರಿಗೆ ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಹೀಗೆ ಬೇಡಿದ ವರ ಸಿಗುತ್ತೆ ಎನ್ನುತ್ತಾರೆ ಇಲ್ಲಿನ ಜನ.
ಇದನ್ನೂ ಓದಿ- Snake Video: ಶೂ ಒಳಗೆ ಕುಳಿತ ಮಿಡಿ ನಾಗರ, ಉರಗ ತಜ್ಞರು ಹೇಳೋದೇನು ಗೊತ್ತಾ!
ಕಲ್ಲಿನ ನಂದಿ ವಿಗ್ರಹ ನೀರು ಕುಡಿಯುವ ಬಗ್ಗೆಯೂ ಪ್ರತಿಕ್ರಿಯಿಸಿರುವ ಕೆಲವರು, ಇಲ್ಲಿ ಕಲ್ಲಿನ ನಂದಿ ಮೂರ್ತಿ ನೀರು ಕುದಿಯುತ್ತಿದೆ. ಇದೊಂದು ಪವಾಡ... ವಿಸ್ಮಯ... ಎಂದು ಜನ ಮಾತನಾಡುತ್ತಿದ್ದರು. ಆ ಪವಾಡವನ್ನು ನಾವೂ ಕೂಡ ಒಮ್ಮೆ ನೋಡೋಣ ಎಂದು ಇಲ್ಲಿಗೆ ಬಂದೆವು. ದೇವಸ್ಥಾನಕ್ಕೆ ಬಂದು ನಂದಿಮೂರ್ತಿ ನೀರು ಕುಡಿಯುವ ದೃಶ್ಯ ಕಣ್ಣ ತುಂಬಿಕೊಂಡಿದ್ದೇವೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನೀರು ಕುಡಿಯುವ ಕಲ್ಲಿನ ನಂದಿ ವಿಗ್ರಹವನ್ನು ಈ ವೀಡಿಯೋದಲ್ಲಿ ವೀಕ್ಷಿಸಿ:
ಒಟ್ಟಾರೆ ಕಲ್ಲಿನ ನಂದಿ ಬಸವಣ್ಣನೀಗೆ ಬಂದ ಭಕ್ತರು ನೀರು ಕುಡಿಸಿ ಹೋಗುತ್ತಿದ್ದಾರೆ.. ಪ್ರಪಂಚ ವಿಸ್ಮಯಗಳ ಆಗರ. ಇಲ್ಲಿ ಆಶ್ಚರ್ಯ, ವಿಸ್ಮಯ, ಪವಾಡದಂಥ ಚಕಿತಗಳು ನಡೆಯುತ್ತಲೇ ಇರುತ್ತವೆ. ಇಂಥ ವಿಸ್ಮಯಗಳೇ ಜನರಲ್ಲಿ ದೇವರ ಮೇಲಿನ ನಂಬಿಕೆ ಹೆಚ್ಚಿಸುವುದು. ಸದ್ಯ ಕಲ್ಲಿನ ನಂದಿ ಮೂರ್ತಿ ನೀರು ಕುಡಿಯುತ್ತಿರುವ ಪವಾಡ ಅಥವಾ ವಿಸ್ಮಯ ಜನರಂತು ಬಂದು ನೀರುಕುಡಿಸಿ ಹೋಗುತ್ತಿದ್ದರೆ, ಎಷ್ಟು ದಿವಸ ಈ ವಿಸ್ಮಯ ನಡೆಯುತ್ತದೆ ಎಂದು ಕಾದು ನೋಡಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.