Viral Video: ಟೊಮೆಟೊದಲ್ಲಿ ಮಗಳ ತುಲಾಭಾರ ಮಾಡಿದ ತಂದೆ

Tomato Thulabhara Viral Video : ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದು, ಟೊಮೆಟೊ ಕುರಿತು ಲೆಕ್ಕವಿಲ್ಲದಷ್ಟು ವಿಡಿಯೋಗಳು, ಮೀಮ್‌ಗಳು ಮತ್ತು ಜೋಕ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ಟೊಮೇಟೊದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಅದು ಏನೆಂದು ನೋಡೋಣ.  

Written by - Chetana Devarmani | Last Updated : Jul 19, 2023, 06:04 PM IST
  • ಟೊಮೆಟೊ ಬೆಲೆ ಗಗನಕ್ಕೇರುತ್ತಿದೆ
  • ಟೊಮೆಟೊದಲ್ಲಿ ಮಗಳ ತುಲಾಭಾರ ಮಾಡಿದ ತಂದೆ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video: ಟೊಮೆಟೊದಲ್ಲಿ ಮಗಳ ತುಲಾಭಾರ ಮಾಡಿದ ತಂದೆ   title=

Tomato Thulabhara Video : ದೇಶದಲ್ಲಿ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಟೊಮೆಟೊ ಬಗ್ಗೆ ಹಿಂದೆಂದೂ ಕಾಣದ ವಿಚಿತ್ರ ಘಟನೆಗಳು ನಡೆಯುತ್ತಿವೆ. ಟೊಮೆಟೊ ಬಗ್ಗೆ ದೇಶದಾದ್ಯಂತ ಎಲ್ಲೋ ಒಂದು ವಿಚಿತ್ರ ಘಟನೆ ನಡೆಯುತ್ತಲೇ ಇರುತ್ತದೆ. ಒಂದು ದಿನ ಟೊಮೆಟೊ ಬೆಳೆ ಕಳವು, ಇನ್ನೊಂದು ದಿನ ಟೊಮೆಟೊ ಅಂಗಡಿ ಕಳ್ಳತನ. ಮೊನ್ನೆ ಮೊನ್ನೆ ಟೊಮೆಟೊ ಮಾರುವವನು ತನ್ನ ಅಂಗಡಿಯ ಮುಂದೆ ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದಾನೆ. ಹೀಗಾಗಿ ಟೊಮೆಟೊ ಬೆಲೆ ಸುದ್ದಿಯಲ್ಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಟೊಮೆಟೊ ಬಗ್ಗೆ ಮೀಮ್ಸ್ ಮತ್ತು ಜೋಕ್‌ಗಳಿಗೆ ಕೊರತೆಯಿಲ್ಲ. ಯಾರಾದರೂ ಟೊಮೆಟೊ ಖರೀದಿಸಿದರೆ ನೀವು ಶ್ರೀಮಂತ ಎಂದು ಕರೆದು ತಮಾಷೆ ಮಾಡುವಂತಾಗಿದೆ. ಟೊಮೆಟೊ ಮಾರಾಟಗಾರರ ಮೇಲೆ ಐಟಿ ದಾಳಿ, ಟೊಮೆಟೊ ಕಳ್ಳತನ ಎಂದು ನಾನಾ ರೀತಿಯ ಮೀಮ್ ಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಇತ್ತೀಚೆಗೆ ಅನಕಪಲ್ಲಿ ಜಿಲ್ಲೆಯಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ.

ಇದನ್ನೂ ಓದಿ: ವಿದ್ಯುತ್ ಸ್ಪರ್ಶದಿಂದ 10 ಮಂದಿ ಸಾವು : ಉತ್ತರಾಖಂಡದ ಚಮೋಲಿಯಲ್ಲಿ ಅವಘಡ

ಅನಕಾಪಲ್ಲಿ ಜಿಲ್ಲೆಯ ನೂಕಾಲಮ್ಮ ದೇವಸ್ಥಾನದಲ್ಲಿ ಭಕ್ತರೊಬ್ಬರು ಟೊಮೆಟೊದೊಂದಿಗೆ ತುಲಾಭಾರವನ್ನು ಅರ್ಪಿಸಿದರು. ದೇವಾಲಯದ ಆವರಣದಲ್ಲಿ ನಡೆದ ಈ ತುಲಾಭಾರ ವಿಶೇಷ ಆಕರ್ಷಣೆಯಾಗಿದ್ದು, ಸದ್ಯ ಕೆಜಿ ಟೊಮೆಟೊ ಬೆಲೆ 120 ರೂ.ಗಿಂತ ಕಡಿಮೆಯಿಲ್ಲ. ಸಾಮಾನ್ಯವಾಗಿ ಒಂದು ಕಿಲೋ ಟೊಮೆಟೊ ಬೆಲೆ ರೂ. 10 ಇರುತ್ತದೆ. ಟೊಮೆಟೊ ದುಬಾರಿ ತರಕಾರಿಯಾಗಿ ಮಾರ್ಪಟ್ಟಿದೆ. ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ಬಂದ ಭಕ್ತರು ತಮ್ಮ ಕೆಲಸಗಳನ್ನು ಬದಿಗೊತ್ತಿ ಈ ತುಲಾಭಾರವನ್ನು ಬೆರಗಾಗಿ ನೋಡುತ್ತಾ ನಿಂತಿದ್ದರು. ಇನ್ನು ಕೆಲವರು ತಮ್ಮ ಕೈಯಲ್ಲಿದ್ದ ಸೆಲ್‌ಫೋನ್‌ಗಳನ್ನು ಹಿಡಿದು ತಮ್ಮ ಮೊಬೈಲ್‌ ಕ್ಯಾಮೆರಾಗಳಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಅನಕಾಪಲ್ಲಿಯ ಮಲ್ಲ ಜಗ್ಗ ಅಪ್ಪಾರಾವ್ ಮತ್ತು ಮೋಹಿನಿ ದಂಪತಿಯ ಪುತ್ರಿ ಭವಿಷ್ಯ ತುಲಾಭಾರ ನೂಕಾಳಮ್ಮ ದೇವಸ್ಥಾನದಲ್ಲಿ ಜರುಗಿತು. 51 ಕೆಜಿ ಟೊಮೆಟೊದಿಂದ ತುಲಾಭಾರ ಮಾಡಲಾಯಿತು. ಬಳಿಕ ತೂಕದ ಬೆಲ್ಲ, ಸಕ್ಕರೆಯನ್ನೂ ನೀಡಿ ಪ್ರಾರ್ಥನೆ ನೆರವೇರಿಸಿದರು. ಇವುಗಳನ್ನು ದೇವಿಯ ನಿತ್ಯಾನ್ನದಾನಕ್ಕೆ ಬಳಸಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ದೃಶ್ಯವನ್ನು ರೆಕಾರ್ಡ್ ಮಾಡಿದ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರಿಂದ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  

ಇದನ್ನೂ ಓದಿ: Viral Video: ವರನ ಮುಖಕ್ಕೆ ಉಗುಳಿ, ಕಾಲಿನಿಂದ ಒದ್ದು ವೇದಿಕೆಯಿಂದ ತಳ್ಳಿದ ವಧು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News