ಸೂರ್ಯನಿಗಿಂತ 25 ಲಕ್ಷ ಪಟ್ಟು ಹೆಚ್ಚು ಪ್ರಕಾಶಮಾನವಾದ ದೈತ್ಯ ನಕ್ಷತ್ರ ಕುರುಹನ್ನು ಕೂಡ ಬಿಡದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆಯಂತೆ...!

ಯಾವುದೇ ಸುಳಿವನ್ನು ನೀಡದೆ ಮತ್ತು ಕುರುಹನ್ನು ಬಿಡದೆ ಈ ನಕ್ಷತ್ರ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. 

Updated: Jul 13, 2020 , 07:09 PM IST
ಸೂರ್ಯನಿಗಿಂತ 25 ಲಕ್ಷ ಪಟ್ಟು ಹೆಚ್ಚು ಪ್ರಕಾಶಮಾನವಾದ ದೈತ್ಯ ನಕ್ಷತ್ರ ಕುರುಹನ್ನು ಕೂಡ ಬಿಡದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆಯಂತೆ...!

ನವದೆಹಲಿ: ವಿಶ್ವಾದ್ಯಂತದ ವಿಜ್ಞಾನಿಗಳು ಕಣ್ಣಲ್ಲಿ ಕಣ್ಣಿಟ್ಟು ವಿಕ್ಷೀಸುತ್ತಿದ್ದ ಒಂದು ನಿಘೂಡ ನಕ್ಷತ್ರ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. ಈ ಕುರಿತು ವಿಜ್ಞಾನಿಗಳು ಹೇಳಿರುವ ಪ್ರಕಾರ, ಸೂರ್ಯನಿಗಿಂತ 2.5 ಮಿಲಿಯನ್ (25ಲಕ್ಷ) ಪಟ್ಟು ಹೆಚ್ಚು ಪ್ರಕಾಶಮಾನವಾಗಿದ್ದ ಈ ದೈತ್ಯಾಕಾರದ ನಕ್ಷತ್ರವು 2019ರಲ್ಲಿ ಯಾವುದೇ ಸುಳಿವು ನೀಡದೆ ಮತ್ತು ಯಾವುದೇ ರೀತಿಯ ಗುರುತನ್ನು ಬಿಡದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ ಎಂದು ಹೇಳಿದ್ದಾರೆ.

ರಾಯಲ್ ಅಸ್ಟ್ರೋನೋಮಿಕಲ್ ಸೊಸೈಟಿಯ ಮಾಸಿಕ ನೋಟಿಸ್ ನಲ್ಲಿ ಪ್ರಕಾಶಿತಗೊಂಡ ಒಂದು ಅಧ್ಯಯನದಲ್ಲಿ, ಖಗೋಳಶಾಸ್ತ್ರಜ್ಞರ ಒಂದು ತಂಡ ಈ ನಕ್ಷತ್ರ ಕಣ್ಮರೆಯಾಗಿರುವುದರ ಹಿಂದಿರುವ ಕಾರಣಗಳನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಟ್ರಿನಿಟಿ ಕಾಲೇಜ್ ಆಫ್ ಡಬಲೀನ್ ನ ಓರ್ವ ಖಗೋಳ ಶಾಸ್ತ್ರಜ್ಞ ಹಾಗೂ ನ್ಯೂ ಪೇಪರ್ ಆನ್ ದಿ ಸ್ಟಾರ್ ನ ಸಹ ಲೇಖಕರಾಗಿರುವ ಜೋಸ್ ಗ್ರೆಹ್ "ನಾವು ಸ್ಥಳೀಯ ಬ್ರಹ್ಮಾಂಡದ ವಿಶಾಲವಾದ ನಕ್ಷತ್ರಗಳಲ್ಲಿನ ಒಂದು ನಕ್ಷತ್ರವನ್ನು ಪತ್ತೆಹಚ್ಚಿರಬಹುದು. ಈ ನಕ್ಷತ್ರ ನಿಧಾನಕ್ಕೆ ತನ್ನ ಜೀವನದ ಅಂತಿಮ ಕಾಲ ಸಮೀಪಿಸುತ್ತಿತ್ತು. ಇದು ಒಂದು ವೇಳೆ ನಿಜವಾದರೆ, ಬ್ರಹ್ಮಾಂಡದಲ್ಲಿರುವ ಮತ್ತು ತನ್ನಷ್ಟಕ್ಕೆ ತಾನೇ ಕಣ್ಮರೆಯಾಗುವ ಇಂತಹ ಮಾನ್ಸ್ಟರ್ ನಕ್ಷತ್ರಗಳನ್ನು ಪತ್ತೆ ಹಚ್ಚುವ ಅಗತ್ಯತೆ ಇದೆ" ಎಂದಿದ್ದಾರೆ.

ಈ ನಕ್ಷತ್ರ ಕಣ್ಮರೆಯಾಗಿದ್ದಾದರು ಏಕೆ?
ನಕ್ಷತ್ರದ ಕಣ್ಮರೆ ಕುರಿತಾತ ಎಲ್ಲಾ ಕಾರಣಗಳನ್ನು ಸಂಶೋಧಕರು ಬರೆದಿದ್ದಾರೆ. ಸಂಶೋಧಕರ ಪ್ರಕಾರ, ಈ ನಕ್ಷತ್ರವು ಯಾವುದೇ ರೀತಿಯ ಸೂಪರ್ನೋವಾ ರಚಿಸದೆಯೇ ಕಪ್ಪು ಕುಳಿಯೊಳಗೆ ಹೋಗಿರಬಹುದು ಎನ್ನಲಾಗಿದೆ.

ಈ ನಕ್ಷತ್ರವು ಭೂಮಿಯಿಂದ 7.5 ಪ್ರಕಾಶವರ್ಷಗಳಷ್ಟು ದೂರದಲ್ಲಿತ್ತು. ಖಗೋಳಶಾಸ್ತ್ರಜ್ಞರ ಅನೇಕ ತಂಡಗಳು ಈ ದೈತ್ಯ ನಕ್ಷತ್ರವನ್ನು 2001 ರಿಂದ 2011 ರವರೆಗೆ ಅಧ್ಯಯನ ಮಾಡಿವೆ. ಆದರೆ 2019 ರಲ್ಲಿ, ಖಗೋಳಶಾಸ್ತ್ರಜ್ಞರು ಈ ನಕ್ಷತ್ರವನ್ನು ದೊಡ್ಡ ಗಾತ್ರದ ದೂರದರ್ಶಕದ ಮೂಲಕ ಅಧ್ಯಯನ ಮಾಡಲು ಬಯಸಿದ್ದಾರೆ. ಆದರೆ, ಈ ನಕ್ಷತ್ರ ಆಕಸ್ಮಿಕವಾಗಿ ಕಣ್ಮರೆಯಾಗಿದ್ದನ್ನು ಕಂಡು ವಿಜ್ಞಾನಿಗಳು ಆಶ್ಚರ್ಯಕ್ಕೆ ಒಳಗಾಗಿದ್ದಾರೆ.