ನವದೆಹಲಿ: ಬ್ರಿಕ್ಸ್ ರಾಷ್ಟ್ರಗಳಾದ ಭಾರತ,ರಷ್ಯಾ,ಚೀನಾ,ದಕ್ಷಿಣ ಆಫ್ರಿಕಾ ಈಗ ಕೊರೋನಾ ದಿಂದ ತತ್ತರಿಸಿರುವ ಆರ್ಥಿಕ ಸಂಕಷ್ಟವನ್ನು ನೀಗಿಸಲು 15 ಮಿಲಿಯನ್ ಡಾಲರ್ ಮೊತ್ತದ ವಿಶೇಷ ನಿಧಿ ಸ್ಥಾಪನೆಗೆ ಮುಂದಾಗಿವೆ.
ರಷ್ಯಾ ದೇಶದ ನೇತೃತ್ವದಲ್ಲಿ ನಡೆದ ವಿದೇಶಾಂಗ ಸಚಿವರ ವೀಡಿಯೋ ಕಾನ್ಸರೆನ್ಸ್ ನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.ಈ ಸಭೆಯಲ್ಲಿ ಆರೋಗ್ಯ ವಲಯ,ವ್ಯಾಪಾರ, ಹಾಗೂ ಆರ್ಥಿಕ ಸುಸ್ಥಿರತೆಯೂ ಕೊರೋನಾ ವಿರುದ್ಧದ ಹೋರಾಟದಲ್ಲಿನ ಸಾಮಾನ್ಯ ಅಂಶಗಳಾಗಿವೆ ಎನ್ನಲಾಗಿದೆ. ಬ್ರಿಕ್ಸ್ ಸ್ಥಾಪಿಸಿರುವ ನ್ಯೂ ಡೆವೆಲೆಪ್ಮೆಂಟ್ ಬ್ಯಾಂಕ್ ಈಗ ಸುಸ್ಥಿರ ಆರ್ಥಿಕ ಅಭಿವೃದ್ದಿ ಹಾಗೂ ಮೂಲಭೂತ ಸೌಕರ್ಯಗಳ ನಿರ್ವಹಣೆ ಹಣವನ್ನು ಸಂಗ್ರಹಿಸುವ ಉಸ್ತುವಾರಿಯನ್ನು ನೋಡಿಕೊಳ್ಳಲಿದೆ ಎನ್ನಲಾಗಿದೆ.
ಈ ಕುರಿತಾಗಿ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವ ಸರ್ಜೆಯ್ ಲ್ಯಾವ್ರೊವ್ ' ನಾವು ಬ್ರಿಕ್ಸ್ ರಾಷ್ಟ್ರಗಳ ಆರ್ಥಿಕ ನಿರ್ಮಾಣಕ್ಕೆ ಪೂರಕವಾಗಿ ವಿಶೇಷ ಸಾಲದಾತ ಯೋಜನೆಯೊಂದನ್ನು ರೂಪಿಸುತ್ತಿದ್ದೇವೆ, ಅದರ ಭಾಗವಾಗಿ ನಾವು ಇದಕ್ಕಾಗಿ ಸುಮಾರು 15 ಮಿಲಿಯನ್ ಡಾಲರ್ ಹಣವನ್ನು ಇದಕ್ಕಾಗಿ ಕೂಡಿಡಲಾಗುತ್ತದೆ' ಎಂದು ಅವರು ವೀಡಿಯೋ ಕಾನ್ಫರೆನ್ಸ್ ನಂತರ ತಿಳಿಸಿದರು.
ಈಗ ಬುಧುವಾರದಂದು ಬ್ರಿಕ್ಸ್ ನ ಆರ್ಥಿಕ ತಜ್ಞರು ಸಭೆ ಸೇರಿ ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸ್ಥಿತಿಗತಿ ಕುರಿತಾಗಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆಗೆ ಆರೋಗ್ಯ ವಲಯದ ತಜ್ಞರು ಇದೇ ರೀತಿ ಸಭೆಯನ್ನು ಮೇ 7 ರಂದು ನಡೆಸಲಿದ್ದಾರೆ ಎನ್ನಲಾಗಿದೆ