ಒಮಾನ್ ಕರಾವಳಿಯಲ್ಲಿ ಮಗುಚಿ ಬಿದ್ದ ತೈಲ ಟ್ಯಾಂಕರ್: 13 ಭಾರತೀಯರೂ ಸೇರಿದಂತೆ 16 ಮಂದಿ ನಾಪತ್ತೆ

Muscat: ಓಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮಗುಚಿ ಬಿದ್ದ ಪರಿಣಾಮ ಹಡಗಿನಲ್ಲಿದ್ದ 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 13 ಜನ ಭಾರತೀಯರು ಎಂದು ವರದಿಯಾಗಿದೆ.   

Written by - Yashaswini V | Last Updated : Jul 17, 2024, 09:13 AM IST
  • ಈ ಹಡಗು ಯೆಮೆನ್ ಕಡೆಗೆ ಹೋಗುತ್ತಿದ್ದಾಗ ಡುಕ್ಮ್ ಬಂದರಿನ ಬಳಿ ಮಗುಚಿ ಬಿದ್ದಿದೆ.
  • ರಾಸ್ ಮದ್ರಕಾದಿಂದ 25NM ಆಗ್ನೇಯಕ್ಕೆ ಹಡಗು ಮುಳುಗಿದೆ ಎಂದು ಮಾರಿಟೈಮ್ ಸೇಫ್ಟಿ ಸೆಂಟರ್ ಟ್ವೀಟ್ ಮಾಡಿದೆ.
  • 2007 ರಲ್ಲಿ ನಿರ್ಮಿಸಲಾದ ಈ ಹಡಗು 117 ಮೀಟರ್ ಉದ್ದದ ತೈಲ ಉತ್ಪನ್ನಗಳ ಟ್ಯಾಂಕರ್ ಆಗಿದೆ ಎಂದು LSEG ಯ ಶಿಪ್ಪಿಂಗ್ ಡೇಟಾ ತೋರಿಸಿದೆ.
ಒಮಾನ್ ಕರಾವಳಿಯಲ್ಲಿ ಮಗುಚಿ ಬಿದ್ದ ತೈಲ ಟ್ಯಾಂಕರ್: 13 ಭಾರತೀಯರೂ ಸೇರಿದಂತೆ 16 ಮಂದಿ ನಾಪತ್ತೆ  title=

Oil Tanker Capsizes Off Oman Coast: ಒಮಾನ್ ಕರಾವಳಿಯಲ್ಲಿ 117 ಮೀಟರ್ ಉದ್ದದ ತೈಲ ಟ್ಯಾಂಕರ್ ಮಗುಚಿ ಬಿದ್ದ ಪರಿಣಾಮ 16 ಸಿಬ್ಬಂದಿ ನಾಪತ್ತೆ (Crew Members Missing)ಯಾಗಿದ್ದಾರೆ. ಇವರಲ್ಲಿ 13 ಭಾರತೀಯ ಪ್ರಜೆಗಳು ಹಾಗೂ ಮೂರು ಮಂದಿ ಶ್ರೀಲಂಕಾ ನಾಗರೀಕರು ಎಂದು ದೇಶದ ಕಡಲ ಭದ್ರತಾ ಕೇಂದ್ರ ತಿಳಿಸಿದೆ. ಕಾಣೆಯಾದ ಸದಸ್ಯರನ್ನು ಪತ್ತೆಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿವೆ. ಆದರೆ ಇಲ್ಲಿಯವರೆಗೆ ಅವರಲ್ಲಿ ಯಾರೊಬ್ಬರ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. 

ಸೋಮವಾರ ಒಮಾನಿ ಬಂದರಿನ ಡುಕ್ಮ್ ಬಳಿ ರಾಸ್ ಮದ್ರಾಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲಿ ದೂರದಲ್ಲಿ ಇದ್ದಕ್ಕಿದ್ದಂತೆ ಹಡಗು ಮುಳುಗಿತು. ಈ ತೈಲ ಟ್ಯಾಂಕರ್ (Oil Tanker) ಹಡಗಿನ ಮೇಲೆ ಪೂರ್ವ ಆಫ್ರಿಕಾದ ಕೊಮೊರೊಸ್ ದೇಶದ ಧ್ವಜವನ್ನು ಹಾರಿಸಲಾಗಿತ್ತು ಎಂದು ಕಡಲ ಭದ್ರತಾ ಕೇಂದ್ರ ತಿಳಿಸಿದೆ. 

ಶಿಪ್ಪಿಂಗ್ ವೆಬ್‌ಸೈಟ್ marinetraffic.com ಪ್ರಕಾರ ತೈಲ ಟ್ಯಾಂಕರ್ ಯೆಮೆನ್ ಬಂದರು ನಗರವಾದ ಏಡೆನ್‌ಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ- ಮೂರನೇ ವಿಶ್ವಯುದ್ಧದ ಭೀತಿ: ರಷ್ಯಾ, ಉಕ್ರೇನ್, ಮತ್ತು ಯುಎಸ್ಎ ನಡುವಿನ ಸಂಬಂಧಗಳು

ಒಮಾನ್‌ನ ಕಡಲ ಭದ್ರತಾ ಕೇಂದ್ರದ ಪ್ರಕಾರ, ಕೊಮೊರೊಸ್ ದೇಶದ ಧ್ವಜ ಈ ಟ್ಯಾಂಕರ್ ಹಡಗಿನಲ್ಲಿತ್ತು. ಇದುವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ‘ಪ್ರೆಸ್ಟೀಜ್ ಫಾಲ್ಕನ್’ (Prestige Falcon) ಹೆಸರಿನ ಈ ತೈಲ ಟ್ಯಾಂಕರ್ ಹಡಗು ಒಮಾನಿ ಬಂದರಿನ ಬಳಿ ಸಮುದ್ರದಲ್ಲಿ ಮಗುಚಿ ಬಿದ್ದಿರುವುದನ್ನು ಕಾಣಬಹುದು ಎನ್ನಲಾಗಿದೆ. ಆದಾಗ್ಯೂ, ಹಡಗು ಸ್ಥಿರವಾಗಿದೆಯೇ ಅಥವಾ ತೈಲ ಅಥವಾ ತೈಲ ಉತ್ಪನ್ನಗಳು ಸಮುದ್ರಕ್ಕೆ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಕೇಂದ್ರವು ಖಚಿತಪಡಿಸಿಲ್ಲ.

ಈ ಬಗ್ಗೆ ವರದಿ ಮಾಡಿರುವ ಸುದ್ದಿ ಸಂಸ್ಥೆ ರಾಯಿಟರ್ಸ್‌, ತೈಲ ಟ್ಯಾಂಕರ್ ರಾತ್ರಿಯಿಂದ ನೀರಿನಲ್ಲಿ ಪಲ್ಟಿಯಾಗಿದೆ. ಈ ಹಡಗು ಸುಮಾರು 20 ವರ್ಷ ಹಳೆಯದು. ಇದನ್ನು 2007 ರಲ್ಲಿ ನಿರ್ಮಿಸಿರಬಹುದು ಎಂದು ಹೇಳಿದೆ. 

ಇದನ್ನೂ ಓದಿ- ಸ್ವಪಕ್ಷದವನಿಂದಲೇ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ! ಕೊಲೆಗೆ ಸಂಚು ರೂಪಿಸಿದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಯಾರು?

2007 ರಲ್ಲಿ ನಿರ್ಮಿಸಲಾದ ಈ ಹಡಗು 117 ಮೀಟರ್ ಉದ್ದದ ತೈಲ ಉತ್ಪನ್ನಗಳ ಟ್ಯಾಂಕರ್ ಆಗಿದೆ ಎಂದು LSEG ಯ ಶಿಪ್ಪಿಂಗ್ ಡೇಟಾದಿಂದ ಮಾಹಿತಿ ಲಭ್ಯವಾಗಿದೆ.  ಸಾಮಾನ್ಯವಾಗಿ ಅಂತಹ ಸಣ್ಣ ಟ್ಯಾಂಕರ್‌ಗಳನ್ನು ಸಣ್ಣ ಪ್ರಯಾಣಕ್ಕಾಗಿ ನಿಯೋಜಿಸಲಾಗುತ್ತದೆ.

ಡುಕ್ಮ್ ಬಂದರು ಒಮಾನ್‌ನ ನೈಋತ್ಯ ಕರಾವಳಿಯಲ್ಲಿದೆ, ಇದು ದೇಶದ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News