Pakistan: ಪಾಕಿಸ್ತಾನದ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಅದಕ್ಕೂ ಮುನ್ನವೇ ಹಣದುಬ್ಬರದಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾಕಿಸ್ತಾನದಲ್ಲಿ ಮೊಟ್ಟೆಯ ಬೆಲೆ ಜನರನ್ನು ಕಂಗಾಲಾಗಿಸಿದೆ. ವರದಿಯ ಪ್ರಕಾರ, ಭಾನುವಾರ, ಪಾಕಿಸ್ತಾನಿ ಪಂಜಾಬ್ ರಾಜ್ಯದ ರಾಜಧಾನಿ ಲಾಹೋರ್‌ನಲ್ಲಿ ಮೊಟ್ಟೆಯ ಬೆಲೆ ಪ್ರತಿ ಡಜನ್‌ಗೆ 400 ಪಾಕಿಸ್ತಾನಿ ರೂಪಾಯಿಗಳನ್ನು ತಲುಪಿದೆ ಎಂದು ಮೂಲಗಳು ತಿಳಿಸಿವೆ. ಇದು ಭಾರತೀಯ ಕರೆನ್ಸಿಯಲ್ಲಿ ಅಂದಾಜು 120 ರೂ.. ಸರ್ಕಾರದ ದರಪಟ್ಟಿ ಜಾರಿಗೊಳಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ..
ಪಾಕಿಸ್ತಾನದಲ್ಲಿ ಬಹುತೇಕ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲಿ ಈರುಳ್ಳಿ ಕೂಡ ಒಂದು. ಪ್ರತಿ ಕಿಲೋಗ್ರಾಂ ಈರುಳ್ಳಿ ಬೆಲೆಯನ್ನು 175 ಪಾಕಿಸ್ತಾನಿ ರೂಪಾಯಿಗಳಿಗೆ ಸರ್ಕಾರ ನಿಗದಿಪಡಿಸಿದೆ ಎಂದು ವರದಿ ಹೇಳಿದ್ದು.. ಆದರೆ ಇಲ್ಲಿ ಈರುಳ್ಳಿ ಕೆಜಿಗೆ 230 ರಿಂದ 250 ಪಾಕಿಸ್ತಾನಿ ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಒಂದು ಡಜನ್ ಮೊಟ್ಟೆಗಳ ಬೆಲೆ ಲಾಹೋರ್‌ನಲ್ಲಿ 400 ರೂ. ಆದರೆ ಕೋಳಿ ಬೆಲೆ ಕೆಜಿಗೆ 615 ಪಾಕಿಸ್ತಾನಿ ರೂಪಾಯಿ ತಲುಪಿದೆ...
ಇದನ್ನೂ ಓದಿ-ಸಂಕ್ರಾಂತಿ ವೇಳೆ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ: ಇದೇ ತಿಂಗಳು ವೇತನ ಪರಿಷ್ಕರಣೆ ಖಚಿತ !ಪಿಂಚಣಿ ದಾರರಿಗೂ ಲಾಭ !
ಲಾಭಕೋರತನವನ್ನು ನಿಲ್ಲಿಸಲು ಸೂಚನೆ:
ಕಳೆದ ತಿಂಗಳು, ಆರ್ಥಿಕ ಸಮನ್ವಯ ಸಮಿತಿಯು ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಲಾಭಕೋರತನವನ್ನು ತಡೆಯುವಂತೆ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ನಿಯಮಿತ ಸಮನ್ವಯವನ್ನು ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿತ್ತು... ಆದರೂ ಸಹ ಯಾವುದೇ ಪ್ರಯೋಜನವಾಗದೇ ಆರ್ಥಿಕ ಹೊರೆ ಹೆಚ್ಚಾಗುತ್ತಿದ್ದು, ಸದ್ಯ 63,399 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಪಾಕ್ ಮೂಲಗಳು ತಿಳಿಸಿವೆ..
ಪಾಕಿಸ್ತಾನ ಸಾಲದಹೊರೆ:
ವರದಿ ಪ್ರಕಾರ ಪಾಕಿಸ್ತಾನದ ಸಾಲವೂ ಹೆಚ್ಚಾಗಿದೆ. ಕಳೆದ ವರ್ಷದ ನವೆಂಬರ್ ಅಂತ್ಯದ ವೇಳೆಗೆ, 2023-24ರ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನದ ಮೇಲಿನ ಒಟ್ಟು ಸಾಲದ ಹೊರೆ 63,399 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಏರಿದೆ. PDM ಮತ್ತು ಉಸ್ತುವಾರಿ ಸರ್ಕಾರದ ಅವಧಿಯಲ್ಲಿ, ಪಾಕಿಸ್ತಾನದ ಒಟ್ಟು ಸಾಲವು 12.430 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗಿಂತ ಹೆಚ್ಚಾಗಿತ್ತು.. PKR 40.956 ಟ್ರಿಲಿಯನ್ ದೇಶೀಯ ಸಾಲ ಮತ್ತು PKR 22.43 ಟ್ರಿಲಿಯನ್.. ಅಂತಾರಾಷ್ಟ್ರೀಯ ಸಾಲ ಸೇರಿದಂತೆ ಒಟ್ಟು ಸಾಲದ ಹೊರೆ PKR 63.390 ಟ್ರಿಲಿಯನ್‌ಗೆ ಹೆಚ್ಚಿದೆ..
ಇದನ್ನೂ ಓದಿ-ಸಂಕ್ರಾಂತಿ ದಿನದಂದು ಚಿನ್ನದ ದರ ತಿಳಿಯಬೇಕೆ? ನಿಮ್ಮ ನಗರದ ಬೆಲೆ ಪರಶೀಲಿಸಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.