Bizarre Tradition: ಮಹಿಳೆಯರ ಪಾಲಿಗೆ ಅತ್ಯಂತ ಅಪಾಯಕಾರಿ ಈ ದೇಶ, ಕಳವಳ ವ್ಯಕ್ತಪಡಿಸಿದ UNICEF

Bizarre Tradition: ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿರುವ ಪಪುವಾ ನ್ಯೂಗಿನಿಯಾ ಮಹಿಳೆಯರಿಗೆ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ. ಇಲ್ಲಿ ಪುರುಷರು ಯಾವುದೇ ಮಹಿಳೆಯೊಂದಿಗೆ ಶಾರೀರಿಕ ಸಂಬಂಧ ಬೆಳೆಸಲು ಸ್ವತಂತ್ರರಾಗಿದ್ದಾರೆ. ಯುನಿಸೆಫ್‌ನಂತಹ ಸಂಘಟನೆಯೂ ಕೂಡ  ಈ ಸಂಪ್ರದಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

Last Updated : Dec 24, 2020, 10:07 AM IST
  • ಶಾರೀರಿಕ ಸಂಬಂಧ ಬೆಳೆಸುವ ವಿಚಿತ್ರ ಪರಂಪರೆ.
  • ಶೇ.70 ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗುತ್ತದೆ,
  • ಯುನಿಸೆಫ್ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
Bizarre Tradition: ಮಹಿಳೆಯರ ಪಾಲಿಗೆ ಅತ್ಯಂತ ಅಪಾಯಕಾರಿ ಈ ದೇಶ, ಕಳವಳ ವ್ಯಕ್ತಪಡಿಸಿದ UNICEF title=
Bizarre Tradition

ನವದೆಹಲಿ: Bizarre Tradition- ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಅನೇಕ ರೀತಿಯ ವಿಚಿತ್ರ ಸಂಪ್ರದಾಯಗಳು ಜಾರಿಯಲ್ಲಿದ್ದು, ಅವು ಇಂದಿನ ಕಾಲದಲ್ಲಿ ಮನುಕುಳವನ್ನೇ ಬೆಚ್ಚಿಬೀಳಿಸುತ್ತವೆ. ಇಂತಹ ವಿಚಿತ್ರ ಸಂಪ್ರದಾಯಗಳ ಬಗ್ಗೆ ಆಗಾಗ ಸುದ್ದಿ ಹೊರಬರುತ್ತಲೇ ಇರುತ್ತವೆ. ಸಮಾಜದಲ್ಲಿ ಋತುಚಕ್ರ ಮತ್ತು ಲೈಂಗಿಕತೆಯ ಬಗ್ಗೆ ಅನೇಕ ಅಪನಂಬಿಕೆಗಳು ಮತ್ತು ಮಿಥ್ ಗಳಿವೆ.  ಇಂತಹುದೇ ಒಂದು ಮೈನಡುಕ ಹುಟ್ಟಿಸುವ ವಿಚಿತ್ರ ಸಂಪ್ರದಾಯದ ಕುಳಿತು ತಿಳಿದುಕೊಳ್ಳೋಣ ಬನ್ನಿ.

ಇದನ್ನು ಓದಿ- ಈ ದೇಶದಲ್ಲಿ ಸ್ಥೂಲಕಾಯದ ಯುವತಿಯರಿಗೆ ಫುಲ್ ಡಿಮಾಂಡ್, ನೀಳಕಾಯದ ವಧು ಅಶುಭ ಅಂತೆ

ಶಾರೀರಿಕ ಸಂಬಂಧ ಬೆಳೆಸಲು ಸಂಪ್ರದಾಯ
ಸಮಾಜದಲ್ಲಿ ಋತುಚಕ್ರಕ್ಕೆ ಸಂಬಂಧಿಸಿದಂತೆ ಹಲವು ವಿಚಿತ್ರ ರೂಢಿಗಳು ಕೇಳಿಬರುತ್ತವೆ. ಹಲವೆಡೆ ಈ ಅವಧಿಯಲ್ಲಿ ಯುವತಿಯರ ಮೇಲೆ ಅತ್ಯಾಚಾರ ಎಸಗಲಾಗುತ್ತಿದ್ದರೆ, ಕೆಲ ಕಡೆ ಯುವತಿಯರನ್ನು ಅಸ್ಪೃಶ್ಯರಂತೆ ನೋಡಲಾಗುತ್ತದೆ. ಆದರೆ ವಿಶ್ವದ ಒಂದು ಭಾಗದಲ್ಲಿ ಶಾರೀರಿಕ ಸಂಬಂಧ ಬೆಸೆಯಲು ವಿಚಿತ್ರ ರೂಢಿಯೊಂದು ಇಂದಿಗೂ ಕೂಡ ಜಾರಿಯಲ್ಲಿದೆ. ಹೌದು ನಾವು ಹೇಳುತ್ತಿರುವುದು ಆಸ್ಟ್ರೇಲಿಯಾದ ಪಪುವಾ ನ್ಯೂ ಗಿನಿಯಾ ಬುಡಕಟ್ಟು ಜನಾಂಗದವರ ಬಗ್ಗೆ. ಇಲ್ಲಿ ಶಾರೀರಿಕ ಸಂಬಂಧಕ್ಕೆ ಸಂಬಂಧಿಸಿದಂತೆ ವಿಚಿತ್ರ ಪರಂಪರೆ (Bizarre Tradition) ರೂಢಿಯಲ್ಲಿದೆ.

ಇದನ್ನು ಓದಿ- Viral: ಕುಡಿದ ಅಮಲಿನಲ್ಲಿ ಜೀವಂತ ಹಾವು ನುಂಗಿ ವ್ಯಕ್ತಿ ಸಾವು!

ಶೇ.70 ರಷ್ಟು ಮಹಿಳೆಯರ ಮೇಲೆ ಅತ್ಯಾಚಾರ
ಪಪುವಾ ನ್ಯೂಗಿನಿಯಲ್ಲಿ, ಶೇಕಡಾ 70 ರಷ್ಟು ಮಹಿಳೆಯರು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ. ಈ ಬುಡಕಟ್ಟು ಜನಾಂಗದವರಲ್ಲಿ ಲೈಂಗಿಕತೆಯ ಬಗ್ಗೆ ವಿಭಿನ್ನ ರೀತಿಯ  ರೂಢಿ ಇಂದಿಗೂ ಕೂಡ ಜಾರಿಯಲ್ಲಿದೆ. ಪುರುಷರು ಬಯಸಿದರೆ, ಅವರು ಇಲ್ಲಿ ಎಲ್ಲಿಯಾದರೂ ಯಾರೊಂದಿಗೂ ಶಾರೀರಿಕ ಸಂಬಂಧ ಬೆಳೆಸುವ ಸ್ವಾತಂತ್ರ್ಯ ಹೊಂದಿದ್ದರೆ. ಇಲ್ಲಿ ಲೈಂಗಿಕತೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಇಲ್ಲಿ ಯಾವುದೇ ವಯಸ್ಸಿನ ವ್ಯಕ್ತಿಯು ಯಾವುದೇ ವಯಸ್ಸಿನ ಮಹಿಳೆಯೊಂದಿಗೆ ಸಂಬಂಧ ಬೆಳೆಸಬಹುದು.

ಇದನ್ನು ಓದಿ- OMG! ನಾಲಿಗೆಯಿಂದ ತನ್ನ ಹಣೆಯನ್ನೇ ಮುಟ್ಟಿಸೋ ವ್ಯಕ್ತಿ ಬಗ್ಗೆ ಗೊತ್ತಾ?

ಈ ಬುಡಕಟ್ಟು ಜನಾಂಗದಲ್ಲಿ  ಮಹಿಳೆಯರ ಮೇಲೆಯೇ ಸಂಪೂರ್ಣ ಜವಾಬ್ದಾರಿ ಇರುತ್ತದೆ. ಲೈಂಗಿಕತೆ ಅಥವಾ ಅತ್ಯಾಚಾರದಿಂದಾಗಿ ಮಹಿಳೆ ಗರ್ಭಿಣಿಯಾಗಿದ್ದರೆ, ಅವಳ ತಂದೆ ಅಥವಾ ಅತ್ಯಾಚಾರಿಗಳು ಅದಕ್ಕೆ ಹೊಣೆಗಾರರಲ್ಲ. ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಮಹಿಳೆಗೆ ಬಿಟ್ಟ ವಿಷಯ. ಸಾಮಾನ್ಯವಾಗಿ, ಮಹಿಳೆಯರ ಋತುಚಕ್ರದ ಅವಧಿಯಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರ ಮೇಲೆ ನಿಷೇಧವಿರುತ್ತದೆ. ಆದರೆ ಇಲ್ಲಿ ಅದು ಅನ್ವಯಿಸುವುದಿಲ್ಲ . ಇಲ್ಲಿ ಮಹಿಳೆಯ ಸ್ಥಾನ ಏನೇ ಇರಲಿ, ಪುರುಷನು ಆಕೆಯೊಂದಿಗೆ ಕ್ರೂರವಾಗಿ ಶಾರೀರಿಕ ಸಂಬಂಧ ಬೆಳೆಸಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News