ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿ ಸುಸ್ಥಿರವಾಗಿಲ್ಲ- ಏಂಜೆಲಾ ಮರ್ಕೆಲ್

ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ ಸುಸ್ಥಿರವಾಗಿಲ್ಲ, ಅದು ಬದಲಾಗಬೇಕಾಗಿದೆ ಎಂದು ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಶುಕ್ರವಾರ ಹೇಳಿದ್ದಾರೆ.

Updated: Nov 2, 2019 , 12:45 PM IST
ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿ ಸುಸ್ಥಿರವಾಗಿಲ್ಲ- ಏಂಜೆಲಾ ಮರ್ಕೆಲ್

ನವದೆಹಲಿ: ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ ಸುಸ್ಥಿರವಾಗಿಲ್ಲ, ಅದು ಬದಲಾಗಬೇಕಾಗಿದೆ ಎಂದು ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಶುಕ್ರವಾರ ಹೇಳಿದ್ದಾರೆ.

ಆದಾಗ್ಯೂ ಐಜಿಸಿ ಸಮಯದಲ್ಲಿ ಕಾಶ್ಮೀರ ಪರಿಸ್ಥಿತಿಯನ್ನು ಚರ್ಚಿಸಲಾಗಿಲ್ಲ ಎನ್ನಲಾಗಿದೆ.ಎಂಜೆಲಾ ಮರ್ಕೆಲ್ ತಮ್ಮ ನಿರ್ಬಂಧಿತ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಯೋಜನೆಗಳ ಬಗ್ಗೆ ಕೇಳಿರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಅಗಸ್ಟ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕಿದ್ದ 370 ನೇ ವಿಧಿ ಮೂಲಕ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಲವು ನಿರ್ಬಂಧಗಳನ್ನು ಹೇರಿತ್ತು, ಇದಕ್ಕೆ ಅಮೇರಿಕಾ ಸೇರಿದಂತೆ ಹಲವು ದೇಶಗಳು ಮಾನವ ಹಕ್ಕುಗಳ ವಿಚಾರವಾಗಿ ಕಳವಳವನ್ನು ವ್ಯಕ್ತಪಡಿಸಿವೆ ಈ ಹಿನ್ನಲೆಯಲ್ಲಿ ಈಗ ಎಂಜೆಲಾ ಮಾರ್ಕೆಲ್ ಅವರ ಹೇಳಿಕೆ ಬಂದಿದೆ.

ಜರ್ಮನ್ ಚಾನ್ಸಲರ್ ಮಾರ್ಕೆಲ್ ನಿಯೋಗ ಮಟ್ಟದ ಮಾತುಕತೆಯ ನಂತರ, ಉಭಯ ನಾಯಕರು ಪ್ರಧಾನ ಮಂತ್ರಿಯ ಅಧಿಕೃತ ನಿವಾಸದಲ್ಲಿ ನಿರ್ಬಂಧಿತ ಸಭೆಯನ್ನು ಆಯ್ದ ಮಂತ್ರಿಗಳು ಮತ್ತು ಎರಡೂ ಕಡೆಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಿದರು.

ಈ ಸಭೆಯಲ್ಲಿ ವಿದೇಶ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಭಾರತದ ಪರ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಭಾಗವಹಿಸಿದ್ದರು ಎನ್ನಲಾಗಿದೆ.