ಕಾಂಗ್ರೆಸ್ ಬಿಜೆಪಿಗಿಂತ ಭಿನ್ನ ಹೇಗೆ? ಇಲ್ಲಿದೆ ರಾಹುಲ್ ಗಾಂಧಿ ಖಡಕ್ ಉತ್ತರ !

    

Last Updated : May 9, 2018, 06:48 PM IST
ಕಾಂಗ್ರೆಸ್ ಬಿಜೆಪಿಗಿಂತ ಭಿನ್ನ ಹೇಗೆ? ಇಲ್ಲಿದೆ ರಾಹುಲ್ ಗಾಂಧಿ ಖಡಕ್ ಉತ್ತರ ! title=

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿ ಈಗ ಪ್ರಧಾನಿ ಮೋದಿ ಮತ್ತು ಬಿಜೆಪಿ ಮಾಡುತ್ತಿರುವ ಟೀಕೆಗೆ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಆ ಮೂಲಕ ತಮ್ಮ ಟ್ವಿಟ್ಟರ್ ಸಮರವನ್ನು ಇನ್ನು ಹೆಚ್ಚು ಹರಿತಗೊಳಿಸಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಬಿಜೆಪಿ ನಾಯಕ  ಯಡಿಯೂರಪ್ಪ ಅವಧಿಯಲ್ಲಿನ ರಾಜ್ಯದ ಅಭಿವೃದ್ದಿ ಮತ್ತು ಪ್ರಸಕ್ತ ಕಾಂಗ್ರೆಸ್ ನೇತೃತ್ವದಲ್ಲಿನ ಸಿದ್ದರಾಮಯ್ಯ ಸರ್ಕಾರದ ನಡುವಿನ ಅಭಿವೃದ್ದಿ ಪಥವನ್ನು ಅಂಕಿ ಸಮೇತ ವಿವರಣೆ ನೀಡಿದ್ದಾರೆ. ಈ ಅಂಕಿ ಅಂಶದಲ್ಲಿ ಪ್ರಮುಖವಾಗಿ ಸಿದ್ದರಾಮಯ್ಯನವರ 2013 ಮತ್ತು 2018 ರ ಅವಧಿಯಲ್ಲಿ ಆದ ಉದ್ಯೋಗ ಸೃಷ್ಟಿ,ರೈತರಿಗೆ ಸಾಲ, ನಮ್ಮ ಮೆಟ್ರೋ ಪೂರ್ಣಗೊಳಿಸಿರುವುದು,ರಸ್ತೆ ನಿರ್ಮಾಣ, ಬಂಡವಾಳ ಆಕರ್ಷಣೆಯ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

ರಾಹುಲ್ ಗಾಂಧಿ ನೀಡಿರುವ ಈ ಅಂಕಿ ಅಂಶಗಳಲ್ಲಿ ಈ ಹಿಂದಿನ ಬಿಜೆಪಿಯ ಯಡಿಯೂರಪ್ಪ ಸರ್ಕಾರಕ್ಕಿಂತ ಸಿದ್ದರಾಮಯ್ಯ ಸರ್ಕಾರದಲ್ಲಿ  ಕರ್ನಾಟಕವು ಎಲ್ಲ ಕ್ಷೇತ್ರಗಳಲ್ಲಿ ಗಣನಿಯವಾದ ಅಭಿವೃದ್ದಿ ಕಂಡಿರುವುದನ್ನು ಪ್ರಸ್ತಾಪಿಸಲಾಗಿದೆ. 

 

Trending News