ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರು ಮುಂಬರುವ ದಿನಗಳಲ್ಲಿ ಹಲವು ಪ್ರಮುಖ ಸುದ್ದಿಗಳನ್ನು ಪಡೆಯಲಿದ್ದಾರೆ. ಜುಲೈ 2023 ರಿಂದ ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಶೀಘ್ರದಲ್ಲೇ ಘೋಷಿಸಲಿದೆ. ಈ ಘೋಷಣೆ ನಂತರ ವೇತನದಲ್ಲಿ ದೊಡ್ಡ ಮಟ್ಟದ ಏರಿಕೆಯಾಗಲಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಡಿಎ ಹೆಚ್ಚಳದ ಬಗ್ಗೆ ಘೋಷಣೆಯಾಗುವ ನಿರೀಕ್ಷೆಯಿದೆ. ವೆಚ್ಚವನ್ನು ಅವಲಂಬಿಸಿ 3 ಪ್ರತಿಶತ ಅಥವಾ 4 ಪ್ರತಿಶತದಷ್ಟು ತುಟ್ಟಿಭತ್ಯೆ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತದೆ. ಎಐಸಿಪಿಐ ಸೂಚ್ಯಂಕದ ಕಳೆದ 6 ತಿಂಗಳ ದತ್ತಾಂಶದ ಮೌಲ್ಯಮಾಪನದ ಆಧಾರದ ಮೇಲೆ ತುಟ್ಟಿಭತ್ಯೆ ಈ ಬಾರಿ ಶೇ.4ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದ್ದರೂ, ಶೇ.3ರಷ್ಟು ಮಾತ್ರ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಶೇ.3ರಷ್ಟು ಏರಿಕೆಯಾದರೂ ನೌಕರರ ಭತ್ಯೆ ಕನಿಷ್ಠ ಶೇ.45ಕ್ಕೆ ಏರಿಕೆಯಾಗುವುದು ಖಚಿತ.
50 ರಷ್ಟು ತುಟ್ಟಿಭತ್ಯೆ :
ಇದೇ ವೇಳೆ ಶೇ 50ರಷ್ಟು ತುಟ್ಟಿಭತ್ಯೆ ಎನ್ನುವ ಸುದ್ದಿಯೂ ವ್ಯಾಪಕವಾಗಿದೆ. ಹಾಗಿದ್ದರೆ ಉದ್ಯೋಗಿಗಳು 50% ಡಿಎ ಯಾವಾಗ ಪಡೆಯುತ್ತಾರೆ? ಸ್ವಲ್ಪ ಹಿಂದಕ್ಕೆ ಹೋಗಿ ನೋಡಿದರೆ, ಮಾರ್ಚ್ 2023 ರಲ್ಲಿ, ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿತ್ತು. ಈ ಹೆಚ್ಚಳವು ಜನವರಿ 2023 ರಿಂದ ಜಾರಿಗೆ ಬರುತ್ತದೆ. ಅದೇ ರೀತಿ ಈ ಬಾರಿಯೂ ಅಂದರೆ ಜುಲೈ 2023ರಿಂದ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆಯಾಗಬಹುದು ಎಂದು ಕೂಡಾ ಮೂಲವೊಂದು ತಿಳಿಸಿದೆ. ಮುಂದಿನ ವರ್ಷದಲ್ಲಿ ಅಂದರೆ 2024ರ ಜನವರಿಯಲ್ಲಿ ಮತ್ತೆ ಡಿಎ ಶೇ.4ರಷ್ಟು ಹೆಚ್ಚಳವಾದರೆ ಆಗ ನೌಕರರ ಡಿಎ ಶೇ.50ಕ್ಕೆ ತಲುಪಲಿದೆ.
ಇದನ್ನೂ ಓದಿ : ಬ್ಯಾಂಕ್ ಲೋನ್ ಪಡೆದವರಿಗೆ ಸಿಹಿ ಸುದ್ದಿ ನೀಡಿದ RBI!EMI ಬಗ್ಗೆ ಹೊರಬಿತ್ತು ನಿರ್ಧಾರ
ವೇತನದಲ್ಲಿ ಆಗುವುದು ಭಾರೀ ಹೆಚ್ಚಳ :
ಏರುತ್ತಿರುವ ಹಣದುಬ್ಬರದ ಮಧ್ಯೆ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಶೇ.50 ತಲುಪಿದರೆ, ದೊಡ್ಡ ಮಟ್ಟದ ಪರಿಹಾರ ಸಿಕ್ಕಿದಂತೆ ಆಗುವುದು. ನೌಕರರ ಭತ್ಯೆಗಳ ಪ್ರಕಾರ, ಮುಂಬರುವ ದಿನಗಳಲ್ಲಿ ವೇತನ ಕೂಡಾ ಹೆಚ್ಚಳವಾಗಬಹುದು. ಮುಂದಿನ ಜನವರಿ 2024 ಮತ್ತೆ ಡಿಎ ಪರಿಷ್ಕರಿಸಲಾಗುವುದು. ಕಳೆದ ಕೆಲವು ಬಾರಿಯಂತೆ ಈ ಬಾರಿ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳವಾದರೆ, ನೌಕರರ ಒಟ್ಟು ತುಟ್ಟಿಭತ್ಯೆ ಶೇ.50ಕ್ಕೆ ತಲುಪಲಿದೆ. ಇದರಿಂದ ನೌಕರರ ವೇತನದಲ್ಲಿ ಕೂಡಾ ಭಾರೀ ಏರಿಕೆಯಾಗಲಿದೆ.
2016 ರ ಮೆಮೊರಾಂಡಮ್‌ನಲ್ಲಿ, ತುಟ್ಟಿಭತ್ಯೆ (ಡಿಎ) 50% ಅಂದರೆ ಮೂಲ ವೇತನದ 50% ತಲುಪಿದಾಗ ಅದನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ಹೇಳಲಾಗಿದೆ. ಅಂದರೆ ಡಿಎ ಶೂನ್ಯವಾದ ನಂತರ, ಮತ್ತೆ ಅದು ಶೇಕಡಾವಾರು 1, 2 ರಂತೆ ಪ್ರಾರಂಭವಾಗುತ್ತದೆ. ತುಟ್ಟಿಭತ್ಯೆಯು ಶೇಕಡಾ 50 ಕ್ಕೆ ತಲುಪಿದ ನಂತರ, ಅದನ್ನು ಮೂಲ ವೇತನಕ್ಕೆ ಲಿಂಕ್ ಮಾಡಲಾಗುತ್ತದೆ.
ಇದನ್ನೂ ಓದಿ : ಇಳಿಕೆಯಾಗುವುದು ಅಕ್ಕಿ ಗೋಧಿ ಬೆಲೆ ! 29 ರೂ.ಗೆ ಸಿಗುವುದು ಕೆ.ಜಿ ಅಕ್ಕಿ
ವೇತನದಲ್ಲಿ ಎಷ್ಟು ಆಗುವುದು ಹೆಚ್ಚಳ :
ಪ್ರಸ್ತುತ, ಪೇ-ಬ್ಯಾಂಡ್ ಲೆವೆಲ್-1ರ ಪ್ರಕಾರ ಸರ್ಕಾರಿ ನೌಕರರ ಮೂಲ ವೇತನ ರೂ. 18,000. ಇದು ಕನಿಷ್ಠ ಮೂಲ ವೇತನವಾಗಿದೆ. ಆದರೆ ಇದೇ ಲೆಕ್ಕಾಚಾರದಲ್ಲಿ ಶೇ.50 ತುಟ್ಟಿಭತ್ಯೆ ಲೆಕ್ಕ ಹಾಕಿ ನೋಡಿದರೆ ಅದು 9 ಸಾವಿರ ರೂ. ಆಗಿರುತ್ತದೆ. ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪಿದ ನಂತರ ಅದನ್ನು ಶೂನ್ಯಕ್ಕೆ ಇಳಿಸಿ ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಅಂದರೆ ರೂ.18,000 ವೇತನದೊಂದಿಗೆ 9,000 ರೂಪಾಯಿ ಸೇರಿಸಿ ಅದನ್ನು 27,000 ರೂ . ಮಾಡಲಾಗುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ