7th Pay Commission : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಹೊಸ ವೇತನ ಶ್ರೇಣಿ ಘೋಷಣೆ, ಇದೀಗ ಕೈ ಸೇರಲಿದೆ ಬಂಪರ್ ವೇತನ

ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷ ಹಲವು ಸವಲತ್ತುಗಳು ಸಿಕ್ಕಿವೆ. ಇದಾದ ಬಳಿಕ ಇದೀಗ ರಾಜ್ಯ ಸರ್ಕಾರಗಳೂ ತಮ್ಮ ನೌಕರರ ವೇತನವನ್ನು ಹೆಚ್ಚಿಸುತ್ತಿವೆ.

Written by - Ranjitha R K | Last Updated : Jan 3, 2022, 11:49 AM IST
  • ಉದ್ಯೋಗಿಗಳಿಗೆ ಹೊಸ ವರ್ಷದ ಉಡುಗೊರೆ
  • ಹೊಸ ವೇತನ ಶ್ರೇಣಿ ಪ್ರಕಟಿಸಿದ ಹಿಮಾಚಲ ಸರ್ಕಾರ
  • ನೌಕರರಿಗೆ ಉಡುಗೊರೆ ನೀಡಲು ಸಿದ್ಧತೆ ನಡೆಸಿದ ಕೇಂದ್ರ ಸರ್ಕಾರ
7th Pay Commission : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಹೊಸ ವೇತನ ಶ್ರೇಣಿ ಘೋಷಣೆ, ಇದೀಗ ಕೈ ಸೇರಲಿದೆ ಬಂಪರ್ ವೇತನ  title=
ಉದ್ಯೋಗಿಗಳಿಗೆ ಹೊಸ ವರ್ಷದ ಉಡುಗೊರೆ (file photo)

ನವದೆಹಲಿ : 7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷ ಹಲವು ಸವಲತ್ತುಗಳು ಸಿಕ್ಕಿವೆ. ಇದಾದ ಬಳಿಕ ಇದೀಗ ರಾಜ್ಯ ಸರ್ಕಾರಗಳೂ ತಮ್ಮ ನೌಕರರ ವೇತನವನ್ನು ಹೆಚ್ಚಿಸುತ್ತಿವೆ. ಈ ಅನುಕ್ರಮದಲ್ಲಿ, ಹಿಮಾಚಲ ಪ್ರದೇಶ ಸರ್ಕಾರವು ತನ್ನ ಉದ್ಯೋಗಿಗಳಿಗೆ 6 ನೇ ವೇತನ ಆಯೋಗದ (6th Pay Commission) ಅಡಿಯಲ್ಲಿ ಹೊಸ ವೇತನ ಶ್ರೇಣಿಯನ್ನು ಘೋಷಿಸಿದೆ. ಸರ್ಕಾರದ ಅಧಿಕೃತ ವಕ್ತಾರರು ಈ ಮಾಹಿತಿ ನೀಡಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಗುತ್ತಿಗೆ ನೌಕರರನ್ನು ಕಾಯಂಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ (State government) ಘೋಷಿಸಿದೆ.

ರಾಜ್ಯ ಸರಕಾರ ಘೋಷಣೆ :
ಇಲ್ಲಿಯವರೆಗೆ ಗುತ್ತಿಗೆ ನೌಕರರನ್ನು ಮೂರು ವರ್ಷಗಳಲ್ಲಿ ಕಾಯಂಗೊಳಿಸಿರುವುದು ಗಮನಾರ್ಹ. ಮುಖ್ಯಮಂತ್ರಿ ಜೈ ರಾಮ್ ಠಾಕೂರ್ (Jai Ram Takur) ಅವರು ಹಿಮಾಚಲ ಪ್ರದೇಶ ನಾನ್-ಗೆಜೆಟೆಡ್ ಎಂಪ್ಲಾಯಿಸ್ ಫೆಡರೇಶನ್‌ನ ಜಂಟಿ ಸಮನ್ವಯ ಸಮಿತಿ (JCC) ಉದ್ದೇಶಿಸಿ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿಗಳನ್ನು ಘೋಷಿಸಿದ್ದಾರೆ. ಇದು 1 ಜನವರಿ 2016 ರಿಂದ ಅನ್ವಯವಾಗಲಿದೆ. ಮಾಹಿತಿಯ ಪ್ರಕಾರ, ಪರಿಷ್ಕೃತ ವೇತನ ಶ್ರೇಣಿಯ ಪ್ರಕಾರ ಜನವರಿ 2022 ರ ವೇತನವನ್ನು ಫೆಬ್ರವರಿ 2022 ರಲ್ಲಿ ಪಾವತಿಸಲಾಗುವುದು.

ಇದನ್ನೂ ಓದಿ : Hero Electric Scooter: ಈ ತಿಂಗಳಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಹೀರೋ

ಪರಿಷ್ಕೃತ ಪಿಂಚಣಿಯ ಲಾಭ ಯಾವಾಗ ಸಿಗುತ್ತದೆ ? :
ರಾಜ್ಯ ಸರ್ಕಾರವು ತನ್ನ ಒಟ್ಟು ಬಜೆಟ್‌ನ ಸುಮಾರು 43% ರಷ್ಟು ನೌಕರರು ಮತ್ತು ಪಿಂಚಣಿದಾರರಿಗೆ ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ತಿಳಿಸಿದ್ದಾರೆ. ಆರನೇ ವೇತನ ಆಯೋಗ (6th Pay Commission) ಜಾರಿಯಾದ ನಂತರ ಇದು ಶೇ.50ಕ್ಕೆ ಏರಿಕೆಯಾಗಲಿದೆ. ಎಲ್ಲಾ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೂ ಜನವರಿ 1, 2016 ರಿಂದ ಪರಿಷ್ಕೃತ ಪಿಂಚಣಿ (Pension) ಮತ್ತು ಇತರ ಪಿಂಚಣಿ ಸೌಲಭ್ಯಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.  

ಕೇಂದ್ರ ಸರ್ಕಾರವೂ ನಡೆಸಿದೆ ಸಿದ್ಧತೆ :
ಇನ್ನೊಂದೆಡೆ ಕೇಂದ್ರ ಸರ್ಕಾರ ಕೂಡ ತನ್ನ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಹೊಸ ವರ್ಷದ ಆರಂಭದಲ್ಲಿ, ಉದ್ಯೋಗಿಗಳ ಮನೆ ಬಾಡಿಗೆ ಭತ್ಯೆ ಹೆಚ್ಚಿಸುವ ನಿರೀಕ್ಷೆಯಿದೆ. ಹೀಗಾದರೆ ಕೇಂದ್ರ ನೌಕರರ ವೇತನವೂ ಹೆಚ್ಚಾಗಲಿದೆ. ಉದ್ಯೋಗಿಗಳ HRA ಹೆಚ್ಚಿಸುವ ಬೇಡಿಕೆಯನ್ನು ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘ (IRTS) ಮತ್ತು ರಾಷ್ಟ್ರೀಯ ರೈಲ್ವೇಮೆನ್ ಫೆಡರೇಶನ್ (NFIR) ಸಹ ಪರಿಗಣಿಸುತ್ತಿದೆ. 

ಇದನ್ನೂ ಓದಿ : Pension Scheme : ವಿವಾಹಿತರಿಗೆ ಸರ್ಕಾರಿದಿಂದ ಪ್ರತಿ ತಿಂಗಳು ಸಿಗುತ್ತೆ ₹10,000 ಪಿಂಚಣಿ! ಹೇಗೆ ಇಲ್ಲಿದೆ ನೋಡಿ

ನಗರವಾರು HRA ಲಭ್ಯ : 
X, Y ಮತ್ತು Z ವರ್ಗದ ನಗರಗಳ ಪ್ರಕಾರ ಮನೆ ಬಾಡಿಗೆ ಭತ್ಯೆಯ (HRA) ವರ್ಗವನ್ನು ವಿಂಗಡಿಸಲಾಗಿದೆ.  ಅಂದರೆ, ಎಕ್ಸ್ ವರ್ಗದಲ್ಲಿ ಬರುವ ಉದ್ಯೋಗಿಗಳು ಈಗ ತಿಂಗಳಿಗೆ 5400 ರೂ.ಗಿಂತ ಹೆಚ್ಚು ಎಚ್‌ಆರ್‌ಎ ಪಡೆಯುತ್ತಾರೆ. ಇದರ ನಂತರ, ವೈ ವರ್ಗದ ನೌಕರರಿಗೆ ತಿಂಗಳಿಗೆ 3600 ರೂ. ಮತ್ತು ನಂತರ Z ವರ್ಗದ ವ್ಯಕ್ತಿಗೆ ತಿಂಗಳಿಗೆ 1800 ರೂ.  

50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು ಎಕ್ಸ್ ವರ್ಗದಲ್ಲಿ ಬರುತ್ತವೆ. ಈ ನಗರಗಳಲ್ಲಿನ ಕೇಂದ್ರ ಉದ್ಯೋಗಿಗಳಿಗೆ 27% HRA ಸಿಗುತ್ತದೆ. ಇದು Y ವರ್ಗದ ನಗರಗಳಲ್ಲಿ 18 ಪ್ರತಿಶತ ಮತ್ತು Z ವರ್ಗದಲ್ಲಿ 9 ಪ್ರತಿಶತ ಇರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News