ಇವಿ ಶೋರೂಂ ಅಗ್ನಿಅವಘಡ : ಹೊಸ ಬಟ್ಟೆ ಧರಿಸಿ ಬರ್ತ್‌ ಡೇ ಸಂಭ್ರಮಿಸಬೇಕಾಗಿದ್ದವಳು ಮಸಣದಲ್ಲಿ..

EV showroom fire bangaluru : ಆಕೆಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ, ಎಲ್ಲಾ ಚನ್ನಾಗಿ ಇದ್ದಿದ್ರೆ ಖುಷಿ ಖುಷಿಯಾಗಿ ಬರ್ತ್ ಡೇ ಆಚರಿಸಿಕೊಳ್ತಿದ್ಳು..ಆದ್ರೆ ಸಂಭ್ರಮದ ಮನೆಯಲ್ಲಿ ಇವತ್ತು ಸೂತಕ ಆವರಿಸಿತ್ತು. ಇವಿ ಶೋರೂಂನಲ್ಲಿ ಸಂಭವಿಸಿದ ಅಗ್ನಿ ಅವಘಡ  ಒಂದು ಕುಟುಂಬದ ಖುಷಿಯನ್ನೇ ಕಸಿದುಕೊಂಡಿದೆ.

Written by - Krishna N K | Last Updated : Nov 20, 2024, 03:54 PM IST
    • ಇವಿ ಶೋರೂಂ ನಲ್ಲಿ ಸಂಭವಿಸಿದ ಅಗ್ನಿ ಅವಘಡ
    • ಬರ್ತ್ ಡೇ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಶೋಕ
    • ಇವಿ ಶೋರೂಂನಲ್ಲಿ ಸುಟ್ಟು ಕರಕಲಾದಳು ಪ್ರಿಯಾ
ಇವಿ ಶೋರೂಂ ಅಗ್ನಿಅವಘಡ : ಹೊಸ ಬಟ್ಟೆ ಧರಿಸಿ ಬರ್ತ್‌ ಡೇ ಸಂಭ್ರಮಿಸಬೇಕಾಗಿದ್ದವಳು ಮಸಣದಲ್ಲಿ.. title=

ಬೆಂಗಳೂರು : ಮಗಳ ಅಗಲಿಕೆಯಿಂದ ದಿಕ್ಕೇ ತೋಚದಂತೆ ನಿಂತಿರುವ ತಂದೆ.ದುಖಃದ ಕಡಲಲ್ಲಿ ಮುಳುಗಿರುವ ಕುಟುಂಬ.ಹುಟ್ಟುಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಶೋಕ ಆವರಿಸಿದೆ. ಹೊಸ ಬಟ್ಟೆ ಧರಿಸಿ ಖುಷಿಯಲ್ಲಿ ಇರಬೇಕಾದವಳು ಮಸಣ ಸೇರಿದ್ದಾಳೆ. ಈ ಹೃದಯ ವಿದ್ರಾವಕ ಘಟನೆಗೆ ಕಾರಣವಾಗಿದ್ದು ಧಗ ಧಗಿಸ್ತಿರೊ ಇದೇ ಇವಿ ಶೋರೂಂ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ.

ಹೌದು.. ಈ ಫೋಟೊದಲ್ಲಿ ಕಾಣ್ತಿರೊ ಯುವತಿಯ ಹೆಸರು ಪ್ರಿಯಾ. ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಇವಿ ಸ್ಕೂಟರ್ ಶೋ ರೂಂ ನಲ್ಲಿ ಕೆಲಸ ಮಾಡ್ತಿದ್ಳು. ಆದರೆ  ನಿನ್ನೆ ಸಂಜೆ 5.30 ರ ಸುಮಾರಿಗೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಸುಟ್ಟು ಕರಕಲಾಗಿದ್ದಾಳೆ. 

ಇದನ್ನೂ ಓದಿ:ಬಳ್ಳಾರಿ ಜಿಲ್ಲೆಯಾಧ್ಯಂತ ಸುರಿದ ಅಕಾಲಿಕ ಮಳೆಗೆ ರೈತರು ಕಂಗಾಲು

ವಿಷಯ ತಿಳಿದು ಘಟನಾ ಸ್ಥಳಕ್ಕಾಗಮಿಸಿದ ಕುಟುಂಬಸ್ಥರು ಕಣ್ಣೀರು ಹಾಕಿದ್ರು. ಮತ್ತೊಂದು ವಿಚಾರ ಅಂದ್ರೆ ಇವತ್ತು ಅಂದ್ರೆ ನವಂಬರ್ 20 ರಂದು ಪ್ರಿಯಾಗೆ 26 ನೇ ಹುಟ್ಟು ಹಬ್ಬವಿತ್ತು. ಇವತ್ತು ಬರ್ತ್ ಡೇ ಆಚರಿಸಿಕೊಳ್ಳಬೇಕಿದ್ದವಳ ಒಂದು ದಿನ ಮುಂಚಿತವಾಗಿಯೇ ಸಾವಿನ ಮನೆ ಸೇರಿದ್ದಾಳೆ. ಮಗಳ ಹುಟ್ಟುಹಬ್ಬಕ್ಕಾಗಿ ತಂದೆ ಸೀರೆ ಖರೀದಿ ಮಾಡಿಟ್ಟಿದ್ರು..ಅಲ್ಲದೆ ಖರ್ಚಿಗೆ 1 ಸಾವಿರ ಹಣವನ್ನು ನೀಡಿದ್ರು. ಬಿಕಾಂ ಓದಿದ್ದ ಪ್ರಿಯಾ ಸಿಎ ಆಗುವ ಕನಸು ಕಂಡಿದ್ಳು..ಕನಸು ನನಸಾಗುವ ಮುನ್ನವೇ ಎಲ್ಲವು ಮಗಿದು ಹೋಗಿದೆ.

ಇನ್ನೂ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಜಾಜಿನಗರ ಠಾಣೆ ಪೊಲೀಸರು ದೂರುದಾರ ಪ್ರಿಯಾ ಸಹೋದರ ಪ್ರತಾಪ್ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದ್ರು. ಘಟನೆಗೆ ಮಾಲೀಕರ ನಿರ್ಲಕ್ಷ್ತವೇ ಕಾರಣ ಎನ್ನಲಾಗಿದ್ದು,ಪರಾರಿಯಾಗಿದ್ದ ಇವಿ ಶೋರೂಂ ಮಾಲೀಕ  ಪುನೀತ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅದೆನೇ ಇರ್ಲಿ ಬದುಕಿ ಬಾಳಬೇಕು ಅಂತಾ ನೂರಾರು ಕನಸು ಹೊತ್ತುಕೊಂಡಿದ್ದ ಪ್ರಿಯಾ, ಯಾರದ್ದೋ ನಿರ್ಲಕ್ಷ್ಯಕ್ಕೋ ಅಥವಾ ವಿಧಿಯಾಟಕ್ಕೋ ಸಿಲುಕಿ ಸಾವಿನ ಮನೆಸೇರಿದ್ದು ದುರಂತವೇ ಸರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News