7th Pay Commission : ಕೇಂದ್ರ ನೌಕರರ ಬಾಕಿ ಡಿಎ ಬಗ್ಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್..!

DA Hike : ನಿಮ್ಮ ಕುಟುಂಬದಲ್ಲಿ ಕೇಂದ್ರ ಉದ್ಯೋಗಿ ಇದ್ದರೆ ಅಥವಾ ನೀವೇ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ಈ ಶುಭ ಸುದ್ದಿಯು ಕೇಂದ್ರ ನೌಕರರ 18 ತಿಂಗಳ ಬಾಕಿ ಇರುವ ಡಿಎಗೆ ಸಂಬಂಧಿಸಿದ್ದಾಗಿದೆ.

Written by - Channabasava A Kashinakunti | Last Updated : Mar 3, 2023, 03:47 PM IST
  • ಡಿಎ ಬಾಕಿ ಬಗ್ಗೆ ಇನ್ನೂ ಘೋಷಣೆಯಾಗಿಲ್ಲ
  • ಪ್ರಸ್ತುತ ಉದ್ಯೋಗಿಗಳು ಪಡೆಯುತ್ತಿದ್ದಾರೆ ಶೇ.38 ರಷ್ಟು ಡಿಎ
  • ಶೇ 4ರಷ್ಟು ಡಿಎ ಹೆಚ್ಚಿಸುವ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ
7th Pay Commission : ಕೇಂದ್ರ ನೌಕರರ ಬಾಕಿ ಡಿಎ ಬಗ್ಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್..! title=

7th Pay Commission DA Hike : ನಿಮ್ಮ ಕುಟುಂಬದಲ್ಲಿ ಕೇಂದ್ರ ಉದ್ಯೋಗಿ ಇದ್ದರೆ ಅಥವಾ ನೀವೇ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ಈ ಶುಭ ಸುದ್ದಿಯು ಕೇಂದ್ರ ನೌಕರರ 18 ತಿಂಗಳ ಬಾಕಿ ಇರುವ ಡಿಎಗೆ ಸಂಬಂಧಿಸಿದ್ದಾಗಿದೆ. ವಾಸ್ತವವಾಗಿ, ಮಾರ್ಚ್ 1 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ನಂತರ, ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ಬಗ್ಗೆ ಯಾವುದೇ ಘೋಷಣೆ ಮಾಡಲಾಗಿಲ್ಲ. ಈ ಕುರಿತು ಸಭೆಯಲ್ಲಿ ಶೇ 4ರಷ್ಟು ಡಿಎ ಹೆಚ್ಚಿಸುವ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಪ್ರಧಾನಿ ಮೋದಿ ಮಾತ್ರ ಹೋಳಿಗೂ ಮುನ್ನ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಡಿಎ ಬಾಕಿ ಬಗ್ಗೆ ಇನ್ನೂ ಘೋಷಣೆಯಾಗಿಲ್ಲ

ಪ್ರಸ್ತುತ ಜನವರಿಯಿಂದ ಅನ್ವಯವಾಗುತ್ತಿರುವ ಡಿಎಯನ್ನು ಸರ್ಕಾರ ಸ್ವಲ್ಪ ಸಮಯದವರೆಗೆ ಮುಂದೂಡಬಹುದು ಎಂದು ಸಂಪುಟ ಸಭೆಗೆ ಸಂಬಂಧಿಸಿದ ಮೂಲಗಳು ಹೇಳುತ್ತಿವೆ. ಹಾಗಾಗಿ ಈ ಬಗ್ಗೆ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಸರಕಾರ ಈ ಬಾರಿ 18 ತಿಂಗಳ ಬಾಕಿ ಹಣ ಪಾವತಿ ಮಾಡಬಹುದೆಂಬ ನಿರೀಕ್ಷೆಯಲ್ಲಿ ನೌಕರರ ಸಂಘಟನೆಗಳಿವೆ. 18 ತಿಂಗಳ ಬಾಕಿ ವೇತನ ನೀಡುವಂತೆ ಕೇಂದ್ರ ನೌಕರರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಕರೋನಾ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಜನವರಿ 2020 ರಿಂದ ಜೂನ್ 2021 ರವರೆಗೆ ತುಟ್ಟಿಭತ್ಯೆ ನೀಡಲಾಗಿಲ್ಲ.

ಇದನ್ನೂ ಓದಿ : Today Gold Price : ಚಿನ್ನಾಭರಣ ಖರೀದಿಸಲು ಇಂದು ಉತ್ತಮ ಅವಕಾಶ : ಚಿನ್ನ - ಬೆಳ್ಳಿ ದರದಲ್ಲಿ ಭಾರಿ ಇಳಿಕೆ!

ಪ್ರಸ್ತುತ ಉದ್ಯೋಗಿಗಳು ಪಡೆಯುತ್ತಿದ್ದಾರೆ ಶೇ.38 ರಷ್ಟು ಡಿಎ 

ಕೇಂದ್ರ ನೌಕರರು ಮತ್ತು ಅವರ ಸಂಸ್ಥೆಗಳು ತುಟ್ಟಿಭತ್ಯೆಯ ಈ ಅವಧಿಯಲ್ಲಿ ಡಿಎಗೆ ಬೇಡಿಕೆ ಸಲ್ಲಿಸುತ್ತಿವೆ. ಈ ಹಿಂದೆ ಸರಕಾರವೂ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಪ್ರಸ್ತುತ ಉದ್ಯೋಗಿಗಳು ಶೇ. 38 ರಷ್ಟು ಡಿಎ ಆಧಾರದ ಮೇಲೆ ಹಣವನ್ನು ಪಡೆಯುತ್ತಾರೆ. ಜನವರಿಯಿಂದ ಶೇ.4ರಿಂದ ಶೇ.42ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಆದರೆ ಇನ್ನೂ ಘೋಷಣೆಯಾಗದ ಕಾರಣ ಹೋಳಿಗೂ ಮುನ್ನ ಸರ್ಕಾರ 18 ತಿಂಗಳ ಡಿಎ ಬಾಕಿ ಬಗ್ಗೆ ಶುಭ ಸುದ್ದಿ ನೀಡುವ ನಿರೀಕ್ಷೆಯೂ ಇದೆ.

ಇತ್ತೀಚೆಗಷ್ಟೇ ಡಿಎ ಬಾಕಿ ಕುರಿತು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಾತನಾಡಿ, ನೌಕರರ ಸಂಘಟನೆಗಳಿಂದ ಸತತ 18 ತಿಂಗಳ ಬಾಕಿ ವೇತನ ನೀಡಲು ಬೇಡಿಕೆ ಇಡಲಾಗುತ್ತಿದೆ ಎಂದು ಹೇಳಿದ್ದರು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ತುಟ್ಟಿಭತ್ಯೆಯ ಮೂರು ಕಂತುಗಳನ್ನು ಬಿಡುಗಡೆ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು. ಕೊರೊನೊ ಸಮಯದಲ್ಲಿ ವಿಧಿಸಲಾದ ಲಾಕ್‌ಡೌನ್‌ನಿಂದ ಸರ್ಕಾರವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : LPG ಸಿಲಿಂಡರ್‌ ಬಳಕೆದಾರರಿಗೆ ಬಿಗ್ ಶಾಕ್ : ಮೆಟ್ರೋ ನಗರಗಳಲ್ಲಿ ₹1000 ಗಡಿ ದಾಟಿದ ಗ್ಯಾಸ್ ಬೆಲೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News