ATM New Charges- ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಇನ್ನು ದುಬಾರಿ, ನೀವು ಎಷ್ಟು ಪಾವತಿಸಬೇಕಾಗುತ್ತೆ ತಿಳಿಯಿರಿ

ATM Cash Withdrawal: ನೀವು ಎಟಿಎಂನಿಂದ ಪದೇ ಪದೇ ಹಣವನ್ನು ಹಿಂತೆಗೆದುಕೊಂಡರೆ, ಈಗ ನೀವು ಅದಕ್ಕಾಗಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಎಟಿಎಂಗಳಿಂದ ಉಚಿತ ಮಿತಿಯ ನಂತರ ವಿಧಿಸಲಾಗುವ ವಹಿವಾಟಿನ ಶುಲ್ಕವನ್ನು  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹೆಚ್ಚಿಸಿದೆ.

Written by - Yashaswini V | Last Updated : Jun 11, 2021, 07:40 AM IST
  • ಎಟಿಎಂ ವಹಿವಾಟಿನ ಇಂಟರ್ಚೇಂಜ್ ಶುಲ್ಕ ರಚನೆಯನ್ನು ಕೊನೆಯದಾಗಿ ಆಗಸ್ಟ್ 2012 ರಲ್ಲಿ ಬದಲಾಯಿಸಲಾಗಿದೆ
  • ಗ್ರಾಹಕರು ಪಾವತಿಸಬೇಕಾದ ಶುಲ್ಕಗಳನ್ನು ಕೊನೆಯದಾಗಿ ಆಗಸ್ಟ್ 2014 ರಲ್ಲಿ ಪರಿಷ್ಕರಿಸಲಾಗಿದೆ
  • ಎರಡು ವರ್ಷಗಳ ಹಿಂದೆ, ಆರ್‌ಬಿಐ ಉಚಿತ ವಹಿವಾಟಿನ ಬಗ್ಗೆ ಸ್ಪಷ್ಟೀಕರಣವನ್ನು ನೀಡಿತ್ತು, ಇದರಲ್ಲಿ ಎಟಿಎಂನಲ್ಲಿ ಯಾವ ವಹಿವಾಟುಗಳು ಉಚಿತ ಮತ್ತು ಯಾವುದು ಅಲ್ಲ ಎಂದು ತಿಳಿಸಲಾಯಿತು
ATM New Charges- ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಇನ್ನು ದುಬಾರಿ, ನೀವು ಎಷ್ಟು ಪಾವತಿಸಬೇಕಾಗುತ್ತೆ ತಿಳಿಯಿರಿ title=
ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವುದು ಇನ್ಮುಂದೆ ದುಬಾರಿ

ನವದೆಹಲಿ:  ATM Cash Withdrawal- ನೀವು ಎಟಿಎಂನಿಂದ ಪದೇ ಪದೇ ಹಣವನ್ನು ವಿತ್ ಡ್ರಾ ಮಾಡುತ್ತಿದ್ದರೆ ಅದಕ್ಕಾಗಿ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ವಾಸ್ತವವಾಗಿ, ಎಟಿಎಂಗಳಿಂದ ಉಚಿತ ಮಿತಿಯ ನಂತರ ವಿಧಿಸಲಾಗುತ್ತಿದ್ದ ವಹಿವಾಟಿನ ಶುಲ್ಕವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಹೆಚ್ಚಿಸಿದೆ. ಬ್ಯಾಂಕುಗಳ ಮೇಲೆ ಹೆಚ್ಚುತ್ತಿರುವ ಹೊರೆಯ ಹಿನ್ನೆಲೆಯಲ್ಲಿ, ಎಟಿಎಂ ವಹಿವಾಟಿನ ಶುಲ್ಕವನ್ನು ಹೆಚ್ಚಿಸಲು ಆರ್‌ಬಿಐ ಅನುಮತಿ ನೀಡಿದ್ದು, ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ.

ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವುದು ದುಬಾರಿಯಾಗಿದೆ:
ಪ್ರಸ್ತುತ, ಗ್ರಾಹಕರಿಗೆ ಒಂದು ತಿಂಗಳಲ್ಲಿ ತಮ್ಮ ಬ್ಯಾಂಕಿನ ಎಟಿಎಂಗಳಿಂದ (ATM) 5 ಉಚಿತ ವಹಿವಾಟು ನಡೆಸಲು ಅವಕಾಶವಿದ್ದರೆ, ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕಿನ ಎಟಿಎಂಗಳಿಂದ 3 ವಹಿವಾಟುಗಳು ಮುಕ್ತವಾಗಿವೆ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಇತರ ಬ್ಯಾಂಕಿನ ಎಟಿಎಂಗಳಿಂದ ಹಣ ಹಿಂಪಡೆಯಲು ಮೊದಲ 5 ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಈ ಉಚಿತ ವಹಿವಾಟು ಮಿತಿಯು ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಒಳಗೊಂಡಿದೆ. ಈ ಮಿತಿಯ ನಂತರ, ಗ್ರಾಹಕರು ಎಟಿಎಂನಿಂದ ಯಾವುದೇ ವಹಿವಾಟು ನಡೆಸಿದರೆ, ಅವರು ಪ್ರತಿ ವಹಿವಾಟಿಗೆ 21 ರೂ. ಪಾವತಿಸಬೇಕಾಗುತ್ತದೆ, ಅದು ಇಲ್ಲಿಯವರೆಗೆ 20 ರೂ. ಆಗಿತ್ತು. ಆರ್‌ಬಿಐ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಈ ಶುಲ್ಕವು ಜನವರಿ 1, 2022 ರಿಂದ ಗ್ರಾಹಕರಿಗೆ ಅನ್ವಯವಾಗುತ್ತದೆ.

ಎಟಿಎಂ ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸಲು ಅನುಮತಿ:
ಇದಲ್ಲದೆ, ಎಟಿಎಂ ಸ್ಥಾಪನೆ ಮತ್ತು ನಿರ್ವಹಣೆಯ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಸುಮಾರು 9 ವರ್ಷಗಳ ನಂತರ ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸಲು ಆರ್‌ಬಿಐ (RBI) ಅನುಮತಿ ನೀಡಿದೆ. ಆರ್‌ಬಿಐ ಯಾವುದೇ ಹಣಕಾಸು ವಹಿವಾಟಿನ ಇಂಟರ್ಚೇಂಜ್ ಶುಲ್ಕವನ್ನು ಪ್ರತಿ ವಹಿವಾಟಿಗೆ 15 ರೂ.ನಿಂದ 17 ರೂ.ಗೆ, ಹಣಕಾಸಿನೇತರ ವಹಿವಾಟಿಗೆ 5 ರೂ.ಗಳಿಂದ 6 ರೂ.ಗೆ ಹೆಚ್ಚಿಸಿದೆ.

ಇದನ್ನೂ ಓದಿ - Debit-Credit ಕಾರ್ಡ್ ಇಲ್ಲದೆ ಎಟಿಎಂನಿಂದ ಹಣ ಹಿಂಪಡೆಯುವುದು ಹೇಗೆ?

ಈ ಹೊಸ ಶುಲ್ಕಗಳು ಆಗಸ್ಟ್ 1, 2021 ರಿಂದ ಅನ್ವಯವಾಗುತ್ತವೆ:
ಇಂಟರ್ಚೇಂಜ್ ಶುಲ್ಕ ಎಷ್ಟು?

ಯಾವುದೇ ಬ್ಯಾಂಕಿನ ಗ್ರಾಹಕರು ಮತ್ತೊಂದು ಬ್ಯಾಂಕಿನ ಎಟಿಎಂನಿಂದ ವಹಿವಾಟು ನಡೆಸಿದಾಗ, ಕಾರ್ಡ್ ನೀಡುವ ಬ್ಯಾಂಕ್  (Card issuing bank)  ಎಟಿಎಂ ಆಪರೇಟರ್‌ಗೆ ಶುಲ್ಕವನ್ನು ಪಾವತಿಸುತ್ತದೆ, ಇದನ್ನು ಇಂಟರ್ಚೇಂಜ್ ಶುಲ್ಕ ಎಂದು ಕರೆಯಲಾಗುತ್ತದೆ. ಪ್ರಸ್ತುತ, ಈ ಇಂಟರ್ಚೇಂಜ್ ಶುಲ್ಕವು ಹಣಕಾಸಿನ ವಹಿವಾಟಿಗೆ 15 ರೂ. ಮತ್ತು ಹಣಕಾಸಿನೇತರ ವಹಿವಾಟಿಗೆ 5 ರೂ. ಆಗಿದೆ. ಇದನ್ನು 17 ಮತ್ತು 6 ರೂ.ಗಳಿಗೆ ಹೆಚ್ಚಿಸಲಾಗಿದೆ. ವಾಸ್ತವವಾಗಿ, ಎಟಿಎಂ ನಿರ್ವಾಹಕರು ದೀರ್ಘಕಾಲದವರೆಗೆ ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದರು, ಆದರೆ ಬ್ಯಾಂಕುಗಳು ಇದನ್ನು ಒಪ್ಪಿರಲಿಲ್ಲ. ಈಗ ಇವುಗಳ ಶುಲ್ಕ ಹೆಚ್ಚಾಗಿದೆ. ಆದ್ದರಿಂದ ಇದರ ಹೊರೆಯು ಗ್ರಾಹಕರ ಮೇಲೆ ಬೀಳುತ್ತದೆ.

9 ವರ್ಷಗಳ ನಂತರ ಶುಲ್ಕ ಹೆಚ್ಚಳ:
ಎಟಿಎಂ ವಹಿವಾಟುಗಳಿಗೆ (ATM Transaction) ಇಂಟರ್ಚೇಂಜ್ ರಚನೆಯ ಮೇಲೆ ವಿಶೇಷ ಗಮನಹರಿಸಿ ಎಟಿಎಂ ಶುಲ್ಕಗಳ ಈ ಸಂಪೂರ್ಣ ವಿಷಯವನ್ನು ಪರಿಶೀಲಿಸಲು ಆರ್‌ಬಿಐ 2019 ರ ಜೂನ್‌ನಲ್ಲಿ ಸಮಿತಿಯನ್ನು ರಚಿಸಿದೆ. ಆರ್‌ಬಿಐ ಪ್ರಕಾರ, ಸಮಿತಿಯ ಶಿಫಾರಸುಗಳನ್ನು ವ್ಯಾಪಕವಾಗಿ ಪರಿಶೀಲಿಸಲಾಗಿದೆ. ಎಟಿಎಂ ವಹಿವಾಟಿನ ಇಂಟರ್ಚೇಂಜ್ ಶುಲ್ಕ ರಚನೆಯನ್ನು ಕೊನೆಯದಾಗಿ ಆಗಸ್ಟ್ 2012 ರಲ್ಲಿ ಬದಲಾಯಿಸಲಾಗಿದೆ ಎಂದು ಗಮನಿಸಲಾಗಿದೆ. ಆದರೆ ಗ್ರಾಹಕರು ಪಾವತಿಸಬೇಕಾದ ಶುಲ್ಕಗಳನ್ನು ಕೊನೆಯದಾಗಿ ಆಗಸ್ಟ್ 2014 ರಲ್ಲಿ ಪರಿಷ್ಕರಿಸಲಾಗಿದೆ. ಇದನ್ನು ಮಾಡಲಾಗಿದೆ . 

ಎರಡು ವರ್ಷಗಳ ಹಿಂದೆ, ಆರ್‌ಬಿಐ ಉಚಿತ ವಹಿವಾಟಿನ ಬಗ್ಗೆ ಸ್ಪಷ್ಟೀಕರಣವನ್ನು ನೀಡಿತ್ತು. ಇದರಲ್ಲಿ ಎಟಿಎಂನಲ್ಲಿ ಯಾವ ವಹಿವಾಟುಗಳು ಉಚಿತ ಮತ್ತು ಯಾವುದು ಉಚಿತವಲ್ಲ ಎಂದು ತಿಳಿಸಲಾಯಿತು.

ಇದನ್ನೂ ಓದಿ - SBI ಕಾಂಟಾಕ್ಟ್ ಲೆಸ್ ಸೇವೆ ಆರಂಭ, ಕೇವಲ ಒಂದು ಕರೆಯಿಂದ ಸಾಧ್ಯವಾಗುತ್ತೆ ಈ ಕೆಲಸ

ಇದನ್ನು ವಹಿವಾಟು ಎಂದು ಪರಿಗಣಿಸಲಾಗುವುದಿಲ್ಲ- (ಇತರ ಬ್ಯಾಂಕಿನ ಎಟಿಎಂ)
>> ಎಟಿಎಂ ದೋಷಪೂರಿತವಾಗಿದ್ದರೆ ವ್ಯವಹಾರವನ್ನು ಪರಿಗಣಿಸಲಾಗುವುದಿಲ್ಲ
>> ನಗದು ಇಲ್ಲದಿದ್ದರೆ ವಹಿವಾಟನ್ನು ಎಣಿಸಲಾಗುವುದಿಲ್ಲ
>> ತಪ್ಪಾದ ಪಿನ್ ಅನ್ನು ನಮೂದಿಸುವುದನ್ನು ಸಹ ವ್ಯವಹಾರದಲ್ಲಿ ಪರಿಗಣಿಸಲಾಗುವುದಿಲ್ಲ.

ಉಚಿತ ವಹಿವಾಟು ಮಿತಿ  (ನೀವು ಅದೇ ಬ್ಯಾಂಕಿನ ಎಟಿಎಂ ಕಾರ್ಡ್ ಬಳಸಿದರೆ) :
* ಬಾಕಿ ಪರಿಶೀಲಿಸುವುದನ್ನು ಉಚಿತ ವಹಿವಾಟು ಮಿತಿಯಲ್ಲಿ ಎಣಿಸುವುದಿಲ್ಲ
* ನಿಧಿ ವರ್ಗಾವಣೆ, ತೆರಿಗೆ ಪಾವತಿ, ಉಚಿತ ವಹಿವಾಟು ಮಿತಿಯಲ್ಲಿಲ್ಲ
* ಎಟಿಎಂನಿಂದ ಚೆಕ್ ಬುಕ್ಗಾಗಿ ಅರ್ಜಿ ಸಲ್ಲಿಸುವುದು ಸಹ ಉಚಿತ ಮಿತಿಯಲ್ಲಿರುವುದಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News