Nitin Gadkari : 90ರ ದಶಕ ನೆನಪಾಗುವಷ್ಟು ಅಗ್ಗವಾಗಲಿದೆ ಪೆಟ್ರೋಲ್ ಬೆಲೆ!

ಶೇ.100 ರಷ್ಟು ಶುದ್ಧ ಇಂಧನ ಮೂಲಗಳಿಂದ ಸಾರ್ವಜನಿಕ ಸಾರಿಗೆಯನ್ನು ನಡೆಸುವ ಯೋಜನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಪೆಟ್ರೋಲ್‌ನಲ್ಲಿ ಶೇ. 20 ರಷ್ಟು ಎಥೆನಾಲ್ ಅನ್ನು ಬೆರೆಸಲಾಗುತ್ತದೆ, ಇದು ಮಿಶ್ರಿತ ಇಂಧನವನ್ನು ಮಾಡುತ್ತದೆ ಮತ್ತು ಇದು ಸಾಮಾನ್ಯ ಪೆಟ್ರೋಲ್‌ಗೆ ಹೋಲಿಸಿದರೆ ಅರ್ಧದಷ್ಟು ಬೆಲೆಯಲ್ಲಿ ಲಭ್ಯವಿದೆ.

Written by - Channabasava A Kashinakunti | Last Updated : Mar 13, 2022, 08:37 AM IST
  • Flex Fuel ವಾಹನಗಳು ಶೀಘ್ರದಲ್ಲೇ ಬರಲಿವೆ
  • ಈ ಮಾಹಿತಿ ನೀಡಿದ ನಿತಿನ್ ಗಡ್ಕರಿ
  • ಎಥೆನಾಲ್ ಪೆಟ್ರೋಲ್ ಗಿಂತ ಅಗ್ಗವಾಗಿದೆ Flex Fuel
 Nitin Gadkari : 90ರ ದಶಕ ನೆನಪಾಗುವಷ್ಟು ಅಗ್ಗವಾಗಲಿದೆ ಪೆಟ್ರೋಲ್ ಬೆಲೆ! title=

ನವದೆಹಲಿ : ಮುಂದಿನ ಆರು ತಿಂಗಳೊಳಗೆ Flex Fuel ವಾಹನಗಳ ತಯಾರಿಕೆ ಆರಂಭಿಸುವುದಾಗಿ ಆಟೋಮೊಬೈಲ್ ಕಂಪನಿಗಳ ಉನ್ನತ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ. 

ವಿಡಿಯೋ ಕಾನ್ಫರೆನ್ಸ್ ಮೂಲಕ 'ಇಟಿ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆ'ಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ  ಗಡ್ಕರಿ(Nitin Gadkari), ಶೇ.100 ರಷ್ಟು ಶುದ್ಧ ಇಂಧನ ಮೂಲಗಳಿಂದ ಸಾರ್ವಜನಿಕ ಸಾರಿಗೆಯನ್ನು ನಡೆಸುವ ಯೋಜನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಪೆಟ್ರೋಲ್‌ನಲ್ಲಿ ಶೇ. 20 ರಷ್ಟು ಎಥೆನಾಲ್ ಅನ್ನು ಬೆರೆಸಲಾಗುತ್ತದೆ, ಇದು ಮಿಶ್ರಿತ ಇಂಧನವನ್ನು ಮಾಡುತ್ತದೆ ಮತ್ತು ಇದು ಸಾಮಾನ್ಯ ಪೆಟ್ರೋಲ್‌ಗೆ ಹೋಲಿಸಿದರೆ ಅರ್ಧದಷ್ಟು ಬೆಲೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ : ಪ್ಯಾನ್ ಕಾರ್ಡ್ ಬಳಕೆದಾರರಿಗೆ ಪ್ರಮುಖ ಮಾಹಿತಿ; ಈ ತಪ್ಪಿಗೆ 10 ಸಾವಿರ ದಂಡ..!

ವಾಹನಗಳು 100% ಎಥೆನಾಲ್‌ನಲ್ಲಿ ಚಲಿಸುತ್ತವೆ

"ಈ ವಾರ, ನಾನು ಎಲ್ಲಾ ಪ್ರಮುಖ ಆಟೋಮೊಬೈಲ್ ಕಂಪನಿಗಳ SIAM ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದೇನೆ. ಅವರು ಒಂದಕ್ಕಿಂತ ಹೆಚ್ಚು ಇಂಧನದಿಂದ ಚಲಿಸುವ ವಾಹನಗಳಿಗೆ ಫ್ಲೆಕ್ಸ್-ಇಂಧನ ಎಂಜಿನ್‌ಗಳನ್ನು(Flex Fuel Engine) ತಯಾರಿಸಲು ಪ್ರಾರಂಭಿಸುವುದಾಗಿ ಭರವಸೆ ನೀಡಿದರು. " ಕೇಂದ್ರ ಸಚಿವ ಗಡ್ಕರಿ ಅವರ ಪ್ರಕಾರ, ಶೀಘ್ರದಲ್ಲೇ ಭಾರತದಲ್ಲಿ ಹೆಚ್ಚಿನ ವಾಹನಗಳು ಶೇ.100 ರಷ್ಟು ಎಥೆನಾಲ್ ನಲ್ಲಿ ಚಲಿಸುತ್ತವೆ. ಗ್ರೀನ್ ಹೈಡ್ರೋಜನ್ ಮತ್ತು ಇತರ ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಮಿಶ್ರಣದಿಂದ ತಯಾರಿಸಿದ ಪರ್ಯಾಯ ಇಂಧನ

ಫ್ಲೆಕ್ಸ್-ಇಂಧನ(Flex Fuel)ವು ಗ್ಯಾಸೋಲಿನ್ ಮತ್ತು ಮೆಥನಾಲ್ ಅಥವಾ ಎಥೆನಾಲ್ ಮಿಶ್ರಣದಿಂದ ತಯಾರಾದ ಪರ್ಯಾಯ ಇಂಧನವಾಗಿದೆ. ಟಿವಿಎಸ್ ಮೋಟಾರ್ ಮತ್ತು ಬಜಾಜ್ ಆಟೋ ಕಂಪನಿಗಳು ಈಗಾಗಲೇ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಫ್ಲೆಕ್ಸ್ ಇಂಧನ ಎಂಜಿನ್‌ಗಳನ್ನು ತಯಾರಿಸಲು ಪ್ರಾರಂಭಿಸಿವೆ ಎಂದು ಅವರು ಹೇಳಿದರು. ಇಷ್ಟೇ ಅಲ್ಲ, ಸಾರ್ವಜನಿಕ ಸಾರಿಗೆಯನ್ನು ಶೇ.100 ರಷ್ಟು ಶುದ್ಧ ಇಂಧನ ಮೂಲಗಳಾಗಿ ಪರಿವರ್ತಿಸಲು ಸರ್ಕಾರವು ಯೋಜನೆಯನ್ನು ರೂಪಿಸುತ್ತಿದೆ ಎಂದು ಕೇಂದ್ರ ಸಚಿವರು ಸಮ್ಮೇಳನದಲ್ಲಿ ಹೇಳಿದರು. ಪ್ರಸ್ತುತ, ಮಹಾರಾಷ್ಟ್ರದ ಹಲವೆಡೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಲಭ್ಯವಿದ್ದು, ಅದರ ಬೆಲೆ ಲೀಟರ್‌ಗೆ 70 ರೂ.ಗಿಂತ ಕಡಿಮೆ ಎಂದು ಹೇಳಿಕೊಳ್ಳಲಾಗಿದೆ.

ಇದನ್ನೂ ಓದಿ : Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News