Indian Railways: ರೈಲಿನಲ್ಲಿ ಟಿಕೆಟ್ ಬುಕ್ ಮಾಡುವಾಗ ಕನ್ಫರ್ಮ್ ಲೋವರ್ ಬರ್ತ್ ಸಿಗುತ್ತದೆ! IRCTC ಸೂಚಿಸಿರುವ ಈ ವಿಧಾನ ಅನುಸರಿಸಿ

Indian Railways: ಭಾರತೀಯ ರೈಲು ಇಲಾಖೆ ಹಿರಿಯ ನಾಗರಿಕರಿಗೆ ಅನೇಕ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತಿದೆ. ಹೀಗಿರುವಾಗ ಇದೀಗ ಟಿಕೆಟ್ ಬುಕಿಂಗ್ ಮಾಡುವಾಗ ನಿಮಗೆ ಕನ್ಫರ್ಮ್ ಲೋವರ್ ಬರ್ತ್ ಸಿಗಲಿದೆ. ಹೇಗೆ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Mar 12, 2022, 06:13 PM IST
  • ಹಿರಿಯ ನಾಗರಿಕರಿಗೆ ಸಿಗುತ್ತದೆ ಕನ್ಫರ್ಮ್ ಲೋವರ್ ಬರ್ತ್.
  • ಕನ್ಫರ್ಮ್ ಲೋವರ್ ಬರ್ತ್ ಪಡೆಯುವುದು ಹೇಗೆ ಎಂಬುದನ್ನು IRCTC ಹೇಳಿದೆ.
  • ಯಾತ್ರಿಯೋಬ್ಬರ ದೂರಿನ ಬಗ್ಗೆ ಸ್ಪಷ್ಟನೆ ನೀಡಿದ IRCTC
Indian Railways: ರೈಲಿನಲ್ಲಿ ಟಿಕೆಟ್ ಬುಕ್ ಮಾಡುವಾಗ ಕನ್ಫರ್ಮ್ ಲೋವರ್ ಬರ್ತ್ ಸಿಗುತ್ತದೆ! IRCTC ಸೂಚಿಸಿರುವ ಈ ವಿಧಾನ ಅನುಸರಿಸಿ title=
Indian Railways (File Photo)

ನವದೆಹಲಿ: Indian Railways Update - ಭಾರತೀಯ ರೈಲ್ವೇ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಹಲವು ಸೇವೆಗಳನ್ನು ಒದಗಿಸುತ್ತಲೇ ಇರುತ್ತದೆ. ರೈಲಿನಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರಿಗೆ ಕೆಳಗಿನ ಬರ್ತ್‌ಗೆ ಆದ್ಯತೆ ನೀಡಲಾಗುತ್ತದೆ. ಆದರೆ ಪದೇ ಪದೇ ವಿನಂತಿಸಿದರೂ (Online Ticket booking), ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಸಿಗುವುದಿಲ್ಲ. ಇದರಿಂದ ಅವರು ಪ್ರಯಾಣಿಸಲು ಕಷ್ಟವಾಗುತ್ತಿದೆ. ಆದರೆ ಇದೀಗ ಭಾರತೀಯ ರೈಲ್ವೇಯು (IRCTC) ನೀವು ಕನ್ಫರ್ಮ್ ಲೋವರ್ ಬರ್ತ್(Confirm Railway Ticket) ಅನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ಮಾಹಿತಿ ನೀಡಿದೆ. 

ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಸಿಗಲಿದೆ
IRCTC Ticket Booking - ಇತ್ತೀಚೆಗೆ, ಭಾರತೀಯ ರೈಲ್ವೆಗೆ ಪ್ರಯಾಣಿಕರೊಬ್ಬರು ಟ್ವಿಟರ್‌ನಲ್ಲಿ ಈ ಕುರಿತು ಪ್ರಶ್ನೆಯೊಂದನ್ನು ಕೇಳಿ, ಈ ರೀತಿ ಯಾಕಿದೆ ಮತ್ತು ಅದನ್ನು ಸರಿಪಡಿಸಬೇಕು ಎಂದು ಕೇಳಿದ್ದರು.  ರೆಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟ್ಯಾಗ್ ಮಾಡಿ ಪ್ರಶ್ನೆಯನ್ನು ಕೇಳಿದ್ದ ಯಾತ್ರಿ , ಸೀಟು ಹಂಚಿಕೆ ಮಾಡುವ ಹಿಂದೆ ಯಾವ ತರ್ಕವಿದೆ? ನಾನು ಮೂವರು ಹಿರಿಯ ನಾಗರಿಕರಿಗೆ ಲೋವರ್ ಬರ್ತ್ (Lower Berth Book) ಆದ್ಯತೆಯ ಟಿಕೆಟ್‌ಗಳನ್ನು ಬುಕ್ ಮಾಡಿದ್ದೆ. ಆಗ  102 ಬರ್ತ್‌ಗಳು ಖಾಲಿ ಇದ್ದವು. ಇದರ ಹೊರತಾಗಿಯೂ ಅವರಿಗೆ  ಮಿಡಲ್ ಬರ್ತ್, ಮೇಲಿನ ಬರ್ತ್ ಮತ್ತು  ಸೈಡ್ ಲೋವರ್ ಬರ್ತ್ ನೀಡಲಾಗಿದೆ. ನೀವು  ಇದನ್ನು ಸರಿಪಡಿಸಬೇಕು ಎಂದಿದ್ದರು.

ಇದನ್ನೂ ಓದಿ-SBI ಖಾತೆದಾರರಿಗೆ ಅದ್ಭುತ ಉಡುಗೊರೆ ನೀಡಿದ ಬ್ಯಾಂಕ್!

IRCTC ನೀಡಿದ ಉತ್ತರ ಇಲ್ಲಿದೆ
ಯಾತ್ರಿಯ ಈ ಪ್ರಶ್ನೆಗೆ IRCTC ತನ್ನ ಟ್ವಿಟ್ಟರ್ ಖಾತೆಯಲ್ಲಿ ಉತ್ತರ ನೀಡಿದೆ. IRCTC ನೀಡಿರುವ ಹೇಳಿಕೆಯ ಪ್ರಕಾರ, ಸರ್, ಲೋವರ್ ಬರ್ತ್‌ಗಳು/ಹಿರಿಯ ನಾಗರಿಕರ ಕೋಟಾದ ಬರ್ತ್‌ಗಳು 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ, 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳಾ ಪ್ರಯಾಣಿಕರಿಗೆ ಆದ್ಯತೆಯ ಬರ್ತ್‌ಗಳಾಗಿವೆ ಮತ್ತು ಅವರು ಒಬ್ಬರೇ ಅಥವಾ ಇಬ್ಬರು ಪ್ರಯಾಣಿಕರಾಗಿ (ಒಂದೇ ಟಿಕೆಟ್‌ನಲ್ಲಿ ಪ್ರಯಾಣಿಸುವ ನಿಯಮಗಳು) ಅಡಿಯಲ್ಲಿ) ಯಾತ್ರೆ ನಡೆಸುತ್ತಿರಬೇಕು. ಇಬ್ಬರಿಗಿಂತ ಹೆಚ್ಚು ಹಿರಿಯ ನಾಗರಿಕರಿದ್ದರೆ ಅಥವಾ ಒಬ್ಬರು ನಾಗರಿಕರಿದ್ದು, ಇನ್ನೊಬ್ಬರು ಹಿರಿಯ ನಾಗರಿಕರಲ್ಲದಿದ್ದರೆ, ವ್ಯವಸ್ಥೆಯು ಅದನ್ನು ಪರಿಗಣಿಸುವುದಿಲ್ಲ ಎಂದು IRCTC ಹೇಳಿದೆ.

ಇದನ್ನೂ ಓದಿ-IPL 2022.:RCB ಗೆ ನಾಯಕನಾಗಿ ಈ ಆಟಗಾರ ನೇಮಕ

ಹಿರಿಯ ನಾಗರಿಕರಿಗೆ ನೀಡಲಾಗಿದ ರಿಯಾಯಿತಿಗಳನ್ನು ಹಿಂಪಡೆಯಲಾಗಿತ್ತು
ಕರೋನವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ ಅನಿವಾರ್ಯವಲ್ಲದ ಪ್ರಯಾಣಗಳನ್ನು ತಡೆಗಟ್ಟಲು ಭಾರತೀಯ ರೈಲ್ವೆ ಕಳೆದ ವರ್ಷ ಹಿರಿಯ ನಾಗರಿಕರು ಸೇರಿದಂತೆ ಹಲವಾರು ವರ್ಗದ ಜನರಿಗೆ ರಿಯಾಯಿತಿ ಟಿಕೆಟ್‌ಗಳನ್ನು (Concessional Tickets) ಸ್ಥಗಿತಗೊಳಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಈ ವರ್ಗದಲ್ಲಿ ಕೋವಿಡ್-19 ವೈರಸ್‌ ಹರಡುವ ಮತ್ತು ಸಾವಿನ ಅಪಾಯವು ಜಾಸ್ತಿ ಇರುವುವರಿಂದ ಹಿರಿಯ ನಾಗರಿಕರಿಗೆ ನೀಡಲಾಗುವ ರಿಯಾಯಿತಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಹೇಳಿತ್ತು.

ಇದನ್ನೂ ಓದಿ-ಇಲ್ಲಿ ಹೋಳಿ ಹಬ್ಬದ ಪ್ರಯುಕ್ತ ಅಳಿಯನಿಗೆ ಕತ್ತೆಯ ಸವಾರಿ ಮಾಡಿಸಲಾಗುತ್ತದೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News