Ration Card : ಬಿಪಿಎಲ್ ಕಾರ್ಡುದಾರರ ಗಮನಕ್ಕೆ : ನಿಮಗಾಗಿ ಕೇಂದ್ರದಿಂದ ಹೊಸ ನಿಯಮ ಜಾರಿ!

ಪಡಿತರ ಚೀಟಿ ಹೊಂದಿರುವ ಕಾರಣ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಾರೆ. ಹೀಗಾಗಿ ಇದೀಗ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗೆ ಸಭೆ ನಡೆಸಿ ಅವರಿಗೆ ಲಗಾಮು ಹಾಕಲು ಮುಂದಾಗಿದೆ.

Written by - Channabasava A Kashinakunti | Last Updated : Aug 20, 2022, 05:00 PM IST
  • ಪಡಿತರ ಚೀಟಿದಾರರು ಎಲ್ಲಾ ಯೋಜನೆಗಳ ಪ್ರಯೋಜನ
  • ಸರ್ಕಾರದ ಹಲವು ಯೋಜನೆಗಳಿಂದ ವಂಚಿತರಾಗುತ್ತಾರೆ
  • ಅನರ್ಹರು ಪಟ್ಟಿಯಿಂದ ಹೊರಗುಳಿಯುತ್ತಾರೆ
Ration Card : ಬಿಪಿಎಲ್ ಕಾರ್ಡುದಾರರ ಗಮನಕ್ಕೆ : ನಿಮಗಾಗಿ ಕೇಂದ್ರದಿಂದ ಹೊಸ ನಿಯಮ ಜಾರಿ! title=

BPl Card Member : ಕೇಂದ್ರ ಸರ್ಕಾರ-ರಾಜ್ಯ ಸರ್ಕಾರವು ಪಡಿತರ ಚೀಟಿದಾರರನ್ನು ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ನೀಡಲು ಅರ್ಹರೆಂದು ಪರಿಗಣಿಸುತ್ತದೆ. ಹೀಗಾಗಿ ಅನೇಕ ಜನ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ, ಇವರು ಆರ್ಥಿಕವಾಗಿ ಸಮೃದ್ಧರಾಗಿದ್ದಾರೆ, ಬಡತನ ರೇಖೆಯಲ್ಲಿ ಬರುವುದಿಲ್ಲ. ಆದರೆ ಇವರು ಪಡಿತರ ಚೀಟಿ ಹೊಂದಿರುವ ಕಾರಣ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಾರೆ. ಹೀಗಾಗಿ ಇದೀಗ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗೆ ಸಭೆ ನಡೆಸಿ ಅವರಿಗೆ ಲಗಾಮು ಹಾಕಲು ಮುಂದಾಗಿದೆ.

ಈಗ ಅರ್ಹರಿಗೆ ಮಾತ್ರ ಸಿಗಲಿದೆ ಲಾಭ 

ಸರ್ಕಾರ ಬಡತನ ರೇಖೆಯ ಮಾನದಂಡಗಳನ್ನು ಬದಲಾಯಿಸಲು ಹೊರಟಿದೆ. ಈ ಮೂಲಕ ಈಗ ಬಡತನ ರೇಖೆ ಪಟ್ಟಿಯಿಂದ ಹಲವರನ್ನು ಹೊರತರುವ ಸಾಧ್ಯತೆ ಇದೆ. ಶೀಘ್ರದಲ್ಲೇ, ಹೊಸ ಅರ್ಹತಾ ಮಾನದಂಡಗಳನ್ನು ನೀಡುವ ಮೂಲಕ, ಮೋಸದ ಮಾರ್ಗಗಳ ಲಾಭ ಪಡೆಯುವವರನ್ನು ಸರ್ಕಾರವು ನಿಯಂತ್ರಿಸಬಹುದು. ಪ್ರಸ್ತುತ, 80 ಕೋಟಿ ಜನ ಭಾರತೀಯ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. ಹೊಸ ಅರ್ಹತಾ ಮಾನದಂಡಗಳು ಬಂದ ನಂತರ ಈ ಸಂಖ್ಯೆಯು ಬಹಳಷ್ಟು ಬದಲಾಗುತ್ತದೆ.

ಇದನ್ನೂ ಓದಿ : EPFO Latest Update: ಪಿಎಫ್ ಚಂದಾದಾರರಿಗೊಂದು ಮಹತ್ವದ ಅಪ್ಡೇಟ್ ಪ್ರಕಟ, ಕೇಂದ್ರ ಸಚಿವರು ಸಂಸತ್ತಿನಲ್ಲಿ ಹೇಳಿದ್ದೇನು?

ಸರ್ಕಾರದ ಹಲವು ಯೋಜನೆಗಳಿಂದ ವಂಚಿತರಾಗುತ್ತಾರೆ

ಕೇಂದ್ರ ಸರ್ಕಾರ-ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳ ಪ್ರಯೋಜನಗಳನ್ನು ನೀಡಲು ಬಡತನ ರೇಖೆಯನ್ನು ಆಧಾರವಾಗಿಸುತ್ತದೆ. ಹೀಗಿರುವಾಗ ಈ ಪಟ್ಟಿ ಬದಲಾದ ನಂತರ ಈ ನಕಲಿ ಬಡವರಿಗೆ ಸರ್ಕಾರದ ನೂರಾರು ಯೋಜನೆಗಳ ಲಾಭ ಸಿಗುವುದಿಲ್ಲ. ಈಗ ಆರ್ಥಿಕವಾಗಿ ಸಮೃದ್ಧವಾಗಿರುವ ಜನರಿಗೆ ದಾರಿ ತೋರಿಸುವ ಇಂಗಿತವನ್ನು ಸರ್ಕಾರ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ಪ್ರಕಾರ, 80 ಕೋಟಿ ಭಾರತೀಯರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (NFSA) ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಅನರ್ಹರು ಪಟ್ಟಿಯಿಂದ ಹೊರಗುಳಿಯುತ್ತಾರೆ

ಹೊಸ ಮಾನದಂಡಗಳನ್ನು ಜಾರಿಗೊಳಿಸಿದ ನಂತರ ಅರ್ಹ ಫಲಾನುಭವಿಗಳನ್ನು ಸರ್ಕಾರ ಶೀಘ್ರದಲ್ಲೇ ಬಹಿರಂಗಪಡಿಸಬಹುದು. ಅನರ್ಹರೆಂದು ಕಂಡು ಬರುವ ಪಡಿತರ ಚೀಟಿದಾರರ ಗತಿಯೇನು? ಈ ಬಗ್ಗೆ ಇನ್ನೂ ಯಾವುದೇ ನವೀಕರಣವಿಲ್ಲ. ಹೊಸ ಮಾನದಂಡಗಳ ಅನುಷ್ಠಾನದೊಂದಿಗೆ, ಆ ಜನರಿಗೆ ಕೆಲವು ಮಾಹಿತಿಯೂ ಇರಬಹುದು.

ಇದನ್ನೂ ಓದಿ : Top Selling Bikes: ಇವೆ ನೋಡಿ ದೇಶದಲ್ಲಿ ಅತ್ಯಧಿಕ ಮಾರಾಟಗೊಳ್ಳುವ ಬೈಕ್ ಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News