ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಸಜ್ಜಾಗಿದೆ. ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೈರಮಂಗಲದಿಂದ ಕೆಂಗೇರಿಯವರೆಗೆ ಪಾದಯಾತ್ರೆ ನಡೆಯಲಿದ್ದು, ಬಿಜೆಪಿ ನಾಯಕರು ಬೆಂಬಲ ನೀಡಲಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..
Kannada News LIVE Today : ರಾಜ್ಯ ರಾಜಕೀಯದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ವಿಚಾರ ಸಂಚಲನ ಸೃಷ್ಟಿಸುತ್ತಿದೆ. ಇದರ ನಡುವೆ ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಸದನದಲ್ಲಿ ಚರ್ಚೆ ನಡೆಸಲು ವಿಪಕ್ಷ ಬಿಜೆಪಿ ತಯಾರಿ ನಡೆಸಿದೆ. ಅಷ್ಟೇ ಅಲ್ಲದೆ, ಆಗಸ್ಟ್ 14ರಂದು ರಾಜೀನಾಮೆ ನೀಡಬೇಕಿದ್ದ ಹೊರಟ್ಟಿಯವರು ಇಂದೇ ನೀಡಿದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.. ಈ ಸುದ್ದಿ ಸೇರಿದಂತೆ ರಾಜ್ಯದ ಹಲವು ಪ್ರಚಲಿತ ವಿದ್ಯಮಾನಗಳ ಸುದ್ದಿಗಳಿಗಾಗಿ Zee Kannada News ವೆಬ್ ಪುಟವನ್ನು ನೋಡುತ್ತೀರಿ..
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಸವರಾಜ್ ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿದರು.
ಎಲ್ಲ ಜಲಾಶಯಗಳು ಖಾಲಿ ಖಾಲಿ ಆಗಿವೆ. ಇವರ ಶಾಸಕರು ಎಲ್ಲ ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಇದ್ದಾರೆ. ಇದೀಗ ಬಳ್ಳಾರಿಯ 5 ಎಂಎಲ್ಎಗಳು ನಬದೆಹಲಿಯಲ್ಲಿದ್ದಾರೆ.
ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದರೂ ಕಾಂಗ್ರೆಸ್ ಸರ್ಕಾರ ಬರ ಘೋಷಣೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಗಡಿ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ವಿಪಕ್ಷ ನಾಯಕ ಆರ್. ಅಶೋಕ್, ಎಸ್ಐಆರ್ ಪರ ಬ್ಯಾಟಿಂಗ್ ಮಾಡಿದ್ರೆ, ಕೇವಲ ಎಸ್ಐಆರ್ ಬಗ್ಗೆ ಮಾತನಾಡಲು ನಮ್ಮ ಜಿಲ್ಲೆಗೆ ಬಂದಿದ್ದೀರಾ? ರೈತರ ಬವಣೆ ಬಗ್ಗೆ ನಿಮಗೂ ಯಾವುದೇ ಚಿಂತೆ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಆರ್ಎಸ್ನಲ್ಲಿ ಕೇವಲ 6 TMC ನೀರು ಉಳಿದಿದೆ ಎಂದು ಹೇಳಿದ ವಿಪಕ್ಷ ನಾಯಕ ಆರ್. ಅಶೋಕ್, ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಬರ ಪರಿಸ್ಥಿತಿ, SIR ಅಕ್ರಮ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರೋ ಅಡ್ಡ ಮತದಾನ ಮಾಡಿ ಕಾಂಗ್ರೆಸ್ಗೆ ಗೆಲುವನ್ನು ಕೊಟ್ಟಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಬಿಜೆಪಿ ಅಭ್ಯರ್ಥಿಗೆ ಮೋಸ ಮಾಡಿದ್ದಾರೆ. ಈ ಸಂಬಂಧ ನಮಗೆ ಸುಳಿವು ಸಿಕ್ಕಿದೆ. ಯಾರು ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂದು ಇನ್ನು ನಮಗೆ ಡೌಟ್ ಇದೆ. ಇನ್ನೂ ಖಚಿತ ಆಗಿಲ್ಲ.
ವಿಧಾನಮಂಡಲ ಅಧಿವೇಶನಕ್ಕೆ ನಾಳೆ ತೆರೆ ಬೀಳಲಿದೆ.. ಇಲ್ಲಿಯವರೆಗೆ ಸದನದಲ್ಲಿ ಕೆಲವು ವಿಷಯ ಗಳ ಬಗ್ಗೆ ಗಂಭೀರ ಚರ್ಚೆಯೇನೋ ಆಯ್ತು. ಆದ್ರೆ ಅಷ್ಟೇನು ಸ್ವಾರಸ್ಯವೂ ಇರ್ಲಿಲ್ಲ, ಜನರ ಗಮನವನ್ನೂ ಸೆಳೆಯಲಿಲ್ಲ. ಆದ್ರೆ ಇವತ್ತಿನ ವಿಧಾನಸಭೆ ಕಲಾಪ ಮಾತ್ರ ಹಲವು ಸ್ವಾರಸ್ಯಕರ ಸನ್ನಿವೇಶಗಳಿಗೆ ಸಾಕ್ಷಿಯಾಯ್ತು. ಅದ್ರಲ್ಲೂ ಬಜೆಟ್ ಮೇಲಿನ ಸಿಎಂ ಉತ್ತರ ಎಲ್ಲರ ಗಮನವನ್ನ ಸೆಳೀತು. ಇಲ್ಲಿಯವರೆಗೆ ಬೋರಾಗಿಯೇ ಕಂಡಿದ್ದ ಸದನದಲ್ಲಿ ಇವತ್ತು ಲವಲವಿಕೆ ಹೆಚ್ಚಾಗಿ ಕಾಣ್ತು..
ಸರ್ಕಾರಿ ಗೌರವಕ್ಕೆ ತಗುಲಿದ ವೆಚ್ಚವನ್ನು ಪಾವತಿಸುವಂತೆ ಬಿಲ್ ಕಳುಹಿಸಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಮಟ್ಟಕ್ಕೆ ದಿವಾಳಿಯಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಆರ್ ಅಶೋಕಕಿಡಿಕಾರಿದ್ದಾರೆ.