BSNL Prepaid Recharge Plans & Offers: BSNL ತನ್ನ ಬಳಕೆದಾರರಿಗೆ ಅನೇಕ ಅಗ್ಗದ ಯೋಜನೆಗಳನ್ನು ನೀಡುತ್ತಿದೆ. ಸರ್ಕಾರಿ ಟೆಲಿಕಾಂ ಕಂಪನಿಯು ತನ್ನ ಯೋಜನೆಯಿಂದ ಖಾಸಗಿ ಕಂಪನಿಗಳಾದ ಏರ್‌ಟೆಲ್, ಜಿಯೋ, VIಗಳಿಗೆ ಶಾಕ್ ನೀಡಿದೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಬಳಕೆದಾರರಿಗೆ 250 ರೂ.ಗಿಂತಲೂ ಕಡಿಮೆ ಬೆಲೆಗೆ ಅನೇಕ ಅಗ್ಗದ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ ಬಳಕೆದಾರರು ಅನಿಯಮಿತ ಕರೆ, ಡೇಟಾ ಮತ್ತು ಉಚಿತ SMSನ ಪ್ರಯೋಜನವನ್ನು ಪಡೆಯುತ್ತಾರೆ. ಕಂಪನಿಯು ತನ್ನ ಅಗ್ಗದ ಯೋಜನೆಗಳಲ್ಲಿ ತನ್ನ ಬಳಕೆದಾರರಿಗೆ ದೀರ್ಘಾವಧಿಯ ವ್ಯಾಲಿಡಿಟಿಯನ್ನು ನೀಡುತ್ತಿದೆ.
BSNLನ 249 ರೂ. ಯೋಜನೆ
BSNL 249 ರೂ.ನ ಅದ್ಭುತ ಯೋಜನೆಯೊಂದನ್ನು ಹೊಂದಿದೆ. ಇದರಲ್ಲಿ ಒಟ್ಟು 45 ದಿನಗಳ ವ್ಯಾಲಿಡಿಟಿಯನ್ನು ಬಳಕೆದಾರರಿಗೆ ನೀಡಲಾಗುತ್ತಿದೆ. ಭಾರತ್ ಸಂಚಾರ ನಿಗಮದ ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 2GB ಹೈ ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ. ಡೇಟಾ ಖಾಲಿಯಾದ ನಂತರವೂ, ಬಳಕೆದಾರರು ಈ ಯೋಜನೆಯಲ್ಲಿ 40kbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಡೇಟಾವನ್ನು ಪಡೆಯುತ್ತಾರೆ. ಬಳಕೆದಾರರು ದೇಶದಲ್ಲಿ ಎಲ್ಲಿಯಾದರೂ ಕರೆ ಮಾಡಲು ಅನಿಯಮಿತ ಉಚಿತ ಕರೆ ಮತ್ತು ರೋಮಿಂಗ್‌ನ ಪ್ರಯೋಜನವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ ಬಳಕೆದಾರರಿಗೆ ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳ ಪ್ರಯೋಜನವನ್ನೂ ನೀಡಲಾಗುತ್ತಿದೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ: ಸೆನ್ಸೆಕ್ಸ್ 1,272 ಮತ್ತು ನಿಫ್ಟಿ 368 ಅಂಕಗಳ ಕುಸಿತ; ಹೂಡಿಕೆದಾರರಿಗೆ 3 ಲಕ್ಷ ಕೋಟಿ ನಷ್ಟ!
BSNLನ ಈ ರೀಚಾರ್ಜ್ ಯೋಜನೆಯು FRC ಅಂದರೆ ಮೊದಲ ರೀಚಾರ್ಜ್ ಯೋಜನೆಯಾಗಿದೆ. ಅಂದರೆ ಇದು ವಿಶೇಷವಾಗಿ ಹೊಸ ಬಳಕೆದಾರರಿಗೆ. ನೀವು ನಿಮ್ಮ ಸಂಖ್ಯೆಯನ್ನು BSNLಗೆ ಪೋರ್ಟ್ ಮಾಡಲು ಬಯಸಿದರೆ, ಈ ಯೋಜನೆಯನ್ನು ಆಯ್ಕೆ ಮಾಡಬಹುದು. ಇದಲ್ಲದೆ BSNL ಸಾಮಾನ್ಯ ಬಳಕೆದಾರರಿಗೆ 250 ರೂ.ಗಿಂತ ಕಡಿಮೆ ರೀಚಾರ್ಜ್ ಯೋಜನೆಯನ್ನು ಸಹ ನೀಡುತ್ತಿದೆ. BSNLನ ಈ ರೀಚಾರ್ಜ್ ಯೋಜನೆಯು 229 ರೂ.ಗಳಿಗೆ ಬರುತ್ತದೆ.
229 ರೂ. ಯೋಜನೆ
229 ರೂ.ಗಳ ಈ ರೀಚಾರ್ಜ್ ಯೋಜನೆಯು TRAI ಮಾರ್ಗಸೂಚಿಗಳ ಪ್ರಕಾರ 1 ತಿಂಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ಉಚಿತ ಕರೆ, ಉಚಿತ ರೋಮಿಂಗ್ ಮತ್ತು ದೈನಂದಿನ 100 ಉಚಿತ SMS ಪ್ರಯೋಜನವನ್ನು ಪಡೆಯುತ್ತಾರೆ. ಸರ್ಕಾರಿ ಟೆಲಿಕಾಂ ಕಂಪನಿಯ ಈ ರೀಚಾರ್ಜ್ ಯೋಜನೆಯು ಪ್ರತಿದಿನ 2GB ಡೇಟಾದ ಪ್ರಯೋಜನದೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ, ಬಳಕೆದಾರರು ಒಟ್ಟು 60GB ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ. ದೈನಂದಿನ ಡೇಟಾ ಖಾಲಿಯಾದ ನಂತರವೂ, ಬಳಕೆದಾರರು ಈ ಯೋಜನೆಯಲ್ಲಿ 40kbps ವೇಗದಲ್ಲಿ ಅನಿಯಮಿತ ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ.
ಇದನ್ನೂ ಓದಿ: 8 ಸಾವಿರಕ್ಕೆ 6 ಕೆಜಿ fully automatic ವಾಷಿಂಗ್ ಮಷಿನ್.. ಎಲ್ಲಿ ಹೇಗೆ ಖರೀದಿಸಬೇಕೆಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.