ರೈಲು ನಿಲ್ದಾಣದಲ್ಲಿ ಬರೀ 100 ರೂಪಾಯಿಗೆ ಸಿಗುತ್ತದೆ ಐಶಾರಾಮಿ ರೂಂ ! ಬಹುತೇಕ ಮಂದಿಗೆ ತಿಳಿದಿರದ ಮಾಹಿತಿ ಇದು !

IRCTC Retiring Room Booking : ಈ ಸೇವೆಯ ಅಡಿಯಲ್ಲಿ  ಪ್ರಯಾಣಿಕರಿಗೆ ನಿಲ್ದಾಣದಲ್ಲಿಯೇ ತಂಗಲು ರೈಲ್ವೇ ಸೌಲಭ್ಯ ಕಲ್ಪಿಸಿದೆ. ಈ ಸೌಲಭ್ಯವು ಭಾರತೀಯ ರೈಲ್ವೆಯ ಅನೇಕ ನಿಲ್ದಾಣಗಳಲ್ಲಿ ಲಭ್ಯವಿದೆ.

Written by - Ranjitha R K | Last Updated : Dec 20, 2024, 02:38 PM IST
  • ಹಲವು ಬಾರಿ ಬೇರೆ ಊರಿನ ರೈಲು ನಿಲ್ದಾಣ ತಲುಪಿದ ನಂತರ ರೂಮಿಗಾಗಿ ಅಲೆದಾಡುತ್ತಲೇ ಇರಬೇಕಾಗುತ್ತದೆ.
  • ಬಜೆಟ್ ಗೆ ತಕ್ಕಂತೆ ರೂಂ ಸಿಗದೇ ಹೋಗಬಹುದು.
  • ಇತ್ತೀಚೆಗಷ್ಟೇ ರೈಲ್ವೇ ಹೊಸ ಸೇವೆಯನ್ನು ಆರಂಭಿಸಿದೆ.
ರೈಲು ನಿಲ್ದಾಣದಲ್ಲಿ ಬರೀ 100 ರೂಪಾಯಿಗೆ ಸಿಗುತ್ತದೆ ಐಶಾರಾಮಿ ರೂಂ ! ಬಹುತೇಕ ಮಂದಿಗೆ ತಿಳಿದಿರದ ಮಾಹಿತಿ ಇದು !  title=

IRCTC Retiring Room Booking :ನೀವು ಸಹ ಆಗಾಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಹಲವು ಬಾರಿ ಬೇರೆ ಊರಿನ ರೈಲು ನಿಲ್ದಾಣ ತಲುಪಿದ ನಂತರ ರೂಮಿಗಾಗಿ ಅಲೆದಾಡುತ್ತಲೇ ಇರಬೇಕಾಗುತ್ತದೆ. ಆದರೆ ಬಜೆಟ್ ಗೆ  ತಕ್ಕಂತೆ ರೂಂ ಸಿಗದೇ ಹೋಗಬಹುದು. ‌ಆ ಸಂದರ್ಭದಲ್ಲಿ ರೈಲ್ವೆ ಆರಂಭಿಸಿದ ಸೌಲಭ್ಯವನ್ನು ನೀವು ಪ್ರಯತ್ನಿಸಬಹುದು. ಇತ್ತೀಚೆಗಷ್ಟೇ ರೈಲ್ವೇ ಹೊಸ ಸೇವೆಯನ್ನು ಆರಂಭಿಸಿದೆ. ಈ ಸೇವೆಯ ಅಡಿಯಲ್ಲಿ  ಪ್ರಯಾಣಿಕರಿಗೆ ನಿಲ್ದಾಣದಲ್ಲಿಯೇ ತಂಗಲು ರೈಲ್ವೇ ಸೌಲಭ್ಯ ಕಲ್ಪಿಸಿದೆ. ಈ ಸೌಲಭ್ಯವು ಭಾರತೀಯ ರೈಲ್ವೆಯ ಅನೇಕ ನಿಲ್ದಾಣಗಳಲ್ಲಿ ಲಭ್ಯವಿದೆ.

ಹೋಟೆಲ್‌ನಂತಹ ಕೊಠಡಿ:ಬಾಡಿಗೆಯೂ ಕಡಿಮೆ : 
ರೈಲ್ವೆಯ ಈ ಸೌಲಭ್ಯದ ಬಗ್ಗೆ ಬಹುತೇಕ ಮಂದಿಗೆ ಮಾಹಿತಿ ಇರುವುದಿಲ್ಲ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ, ರೈಲ್ವೆಯ 304 ಹಾಸಿಗೆಗಳ  ರಿಟಾಯರಿಂಗ್ ರೂಂ ಅನ್ನು  ಉದ್ಘಾಟಿಸಿದ್ದಾರೆ. ಅನೇಕ ಪ್ರಯಾಣಿಕರು ನಿಲ್ದಾಣದ ಸುತ್ತಲೂ ಹೋಟೆಲ್‌ಗಳನ್ನು ಹುಡುಕುತ್ತಾರೆ. ಆದರೆ ಅದರ ದರಗಳು ಅಧಿಕವಾಗಿರುತ್ತವೆ. ಅದರ ಬದಲು ನಿಲ್ದಾಣದಲ್ಲಿಯೇ ಕಡಿಮೆ ಬಾಡಿಗೆ ಪಾವತಿಸಿ ಐಷಾರಾಮಿ ಕೋಣೆಯನ್ನು ಪಡೆಯಬಹುದು. ಈ ಕೊಠಡಿಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಹೋಟೆಲ್‌ಗಳಂತೆಯೇ ಇರುತ್ತವೆ. ನಿಲ್ದಾಣದಲ್ಲಿಯೇ ಲಭ್ಯವಿರುವ IRCTC ಕೊಠಡಿಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

ಇದನ್ನೂ ಓದಿ : ಸಂಪೂರ್ಣ ಲಾಸ್ ಆಗಿ ದೇಶವನ್ನೇ ಬಿಟ್ಟು ಓಡಿರುವ ವಿಜಯ್ ಮಲ್ಯ ಐಶಾರಾಮಿ ಬಂಗಲೆ ನೋಡಿದ್ದೀರಾ ? ಅಂಬಾನಿ, ಅದಾನಿಯ ಅರಮನೆಗಳಿಗೂ ನೀಡುತ್ತಿದೆ ಟಕ್ಕರ್

ದರವು 100 ರಿಂದ 700 ರೂಗಳವರೆಗೆ ಇರುತ್ತದೆ : 
ರೈಲ್ವೆ ಆರಂಭಿಸಿದ ಈ ಸೇವೆಯ ಪರಿಣಾಮವಾಗಿ ನಿಲ್ದಾಣದಿಂದ ಹೋಟೆಲ್‌ಗೆ ಹೋಗಿ ಕೋಣೆಗೆ ಸಾಕಷ್ಟು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. IRCTC ಯ ಈ ಕೊಠಡಿಗಳು ಸಂಪೂರ್ಣವಾಗಿ AC ಮತ್ತು ಹೋಟೆಲ್ ಕೊಠಡಿಗಳಂತೆ ಇವೆ. ಈ ಕೋಣೆಗಳಲ್ಲಿ ಎಲ್ಲಾ ರೀತಿಯ ಅಗತ್ಯ ಸೌಕರ್ಯಗಳು ಇವೆ. ರಾತ್ರಿ ತಂಗಲು ಈ ಕೊಠಡಿಗಳ ಬಾಡಿಗೆ 100 ರಿಂದ 700 ರೂ.ವರೆಗೆ ಇರುತ್ತದೆ. ಈ ಕೊಠಡಿಗಳನ್ನು ಹೇಗೆ ಬುಕ್ ಮಾಡಬಹುದು ನೋಡೋಣ. 

ರೂಮ್ ಬುಕ್ ಮಾಡುವುದು ಹೇಗೆ? :
> ಮೊದಲನೆಯದಾಗಿ ನೀವು IRCTC ಖಾತೆಯನ್ನು ತೆರೆಯಬೇಕು.
> ಈ ಲಾಗಿನ್ ನಂತರ ಮೈ ಬುಕಿಂಗ್ ಆಯ್ಕೆಗೆ ಹೋಗಿ.
> ಇಲ್ಲಿ ಟಿಕೆಟ್ ಬುಕಿಂಗ್ ಕೆಳಗೆ 'ರಿಟೈರಿಂಗ್ ರೂಮ್' ಆಯ್ಕೆ ಕಾಣಿಸುತ್ತದೆ. 
> ಇಲ್ಲಿ ಕ್ಲಿಕ್ ಮಾಡಿದ ನಂತರ ನೀವು ಕೊಠಡಿಯನ್ನು ಕಾಯ್ದಿರಿಸುವ ಆಯ್ಕೆ ಇರುತ್ತದೆ. 
> ಇಲ್ಲಿ ವೈಯಕ್ತಿಕ ಮತ್ತು ಪ್ರಯಾಣ ಸಂಬಂಧಿತ ಮಾಹಿತಿಯನ್ನು ನಮೂದಿಸಬೇಕು.
> ಪಾವತಿ ಮಾಡಿದ ನಂತರ ಕೊಠಡಿಯನ್ನು ಬುಕ್ ಮಾಡಲಾಗುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News