Union Budget 2024: ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಉದ್ಯೋಗಿಗಳಿಗೆ ʼ3 ದಿನ ವಾರದ ರಜೆʼ ಘೋಷಣೆ..!?

3-day week off : ಮಧ್ಯಂತರ ಬಜೆಟ್‌ನಲ್ಲಿ ಎಲ್ಲಾ ಸೆಕ್ಟರ್‌ನ ಉದ್ಯೋಗಿಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 3 ದಿನಗಳ ವಾರದ ರಜೆ ನೀತಿಯನ್ನು ಘೋಷಿಸಲಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಾಗಿದ್ರೆ ಈ ಸುದ್ದಿ ನಿಜವೇ..? ಬನ್ನಿ ತಿಳಿಯೋಣ..

Written by - Krishna N K | Last Updated : Feb 1, 2024, 11:41 AM IST
  • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 3 ದಿನಗಳ ವಾರದ ರಜೆ ನೀತಿಯನ್ನು ಘೋಷಿಸಲಿದ್ದಾರೆ.
  • ಜುಲೈ 1 ರಿಂದ, ಕಂಪನಿಗಳು ಕೆಲಸದ ಸಮಯವನ್ನು 12 ಗಂಟೆಗಳವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.
  • ಉದ್ಯೋಗಿಗಳು 4 ದಿನಗಳವರೆಗೆ ದಿನಕ್ಕೆ 10-12 ಗಂಟೆಗಳ ಕಾಲ ಕೆಲಸ ಮಾಡಬೇಕಾಗಬಹುದು.
Union Budget 2024: ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಉದ್ಯೋಗಿಗಳಿಗೆ ʼ3 ದಿನ ವಾರದ ರಜೆʼ ಘೋಷಣೆ..!? title=

Budget 2024 Live Update: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024 ರ ಮಧ್ಯಂತರ ಬಜೆಟ್ ಮಂಡನೆಗೆ ಮುನ್ನ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಪೋಸ್ಟ್  ಒಂದು ಸಖತ್‌ ವೈರಲ್‌ ಆಗುತ್ತಿದೆ. ವಿತ್ತ ಸಚಿವೆ ಉದ್ಯೋಗಿಗಳಿಗೆ ವಾರಕ್ಕೆ ಮೂರು ದಿನ ರಜೆ ನೀತಿಯನ್ನು ಘೋಷಿಸಲಿದ್ದಾರೆ ಎಂದು ಈ ಪೋಸ್ಟ್‌ ಮೂಲಕ ಸುದ್ದಿ ಹಬ್ಬಿಸಲಾಗಿತ್ತು. 

ಜುಲೈ 1 ರಿಂದ, ಕಂಪನಿಗಳು ಕೆಲಸದ ಸಮಯವನ್ನು 12 ಗಂಟೆಗಳವರೆಗೆ ಹೆಚ್ಚಿಸುವ ಸಾಧ್ಯತೆ ಇದೆ. ಉದ್ಯೋಗಿಗಳು 4 ದಿನಗಳವರೆಗೆ ದಿನಕ್ಕೆ 10-12 ಗಂಟೆಗಳ ಕಾಲ ಕೆಲಸ ಮಾಡಬೇಕಾಗಬಹುದು ಎಂದು ಪೋಸ್ಟ್ ನಲ್ಲಿ ಹೇಳಲಾಗಿತ್ತು. ಅಲ್ಲದೆ, ಈ ಹೊಸ ನಿಯಮವನ್ನು ಘೋಷಿಸಿದ ನಂತರ ಕಂಪನಿಗಳು 3 ದಿನಗಳ ರಜೆ ನೀಡುವ ಸಾಧ್ಯದೆ ಇದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿತ್ತು.

ಇದನ್ನೂ ಓದಿ: ಕೈಯ್ಯಲ್ಲಿ ಕೆಂಪು ಟ್ಯಾಬ್ಲೆಟ್, ನೀಲಿ  ಸೀರೆ.. ಹೇಗಿತ್ತು ಗೊತ್ತಾ ಬಜೆಟ್ ಮಂಡಿಸಲು ಬಂದ ಹಣಕಾಸು ಸಚಿವರ ಲುಕ್ ?   

ಕೇಂದ್ರ ಹಣಕಾಸು ಸಚಿವರು 3 ದಿನಗಳ ವಾರದ ರಜೆ ನೀತಿಯನ್ನು ಪ್ರಕಟಿಸಲಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದಂತೆ ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ. ನಕಲಿ ಸಂದೇಶವನ್ನು ಭೇದಿಸಿರುವ PIB ಫ್ಯಾಕ್ಟ್ ಚೆಕ್ ಮಾಡಿ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿದೆ.

PIB ಮೂಲಕ ಸಂದೇಶಗಳನ್ನು ಸತ್ಯ-ಪರಿಶೀಲನೆ ಮಾಡುವುದು ಹೇಗೆ : ಇಂತಹ ಯಾವುದೇ ಅನುಮಾನಾಸ್ಪದ ಸಂದೇಶ ಬಂದರೆ, ನೀವು ಯಾವಾಗಲೂ ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬಹುದು. ಅದಕ್ಕಾಗಿ ನೀವು  https://factcheck.pib.gov.in ಗೆ ಸಂದೇಶವನ್ನು ಕಳುಹಿಸಬೇಕು. ಇಲ್ಲವೆ ಸತ್ಯ ಪರಿಶೀಲನೆಗಾಗಿ +918799711259 ಗೆ WhatsApp ಸಂದೇಶವನ್ನು ಕಳುಹಿಸಬಹುದು.  pibfactcheck@gmail.com ಗೆ ಮೇಲ್‌ ಸಹ ಮಾಡಬಹುದು. ಸತ್ಯ ತಪಾಸಣೆಯ ಮಾಹಿತಿಯು https://pib.gov.in ನಲ್ಲಿಯೂ ಲಭ್ಯವಿರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News