Subsidised Chana Dal : ಮುಗಿಲೆತ್ತರಕ್ಕೆ ಏರಿದ ಟೊಮೇಟೊ ಬೆಲೆಯಿಂದ ಜನ ಸಾಮಾನ್ಯರಿಗೆ ಪರಿಹಾರ ನೀಡಿದ ಬೆನ್ನಲ್ಲೇ ಇದೀಗ ಕಡಿಮೆ ಬೆಲೆಗೆ ಬೇಳೆಕಾಳುಗಳನ್ನೂ ಜನ ಸಾಮಾನ್ಯರಿಗೆ ನೀಡಲು ಸರ್ಕಾರ ಮುಂದಾಗಿದೆ. ಹೌದು, ಬೆಲೆ ಏರಿಕೆ ಬಿಸಿಯಿಂದ ಜನರಿಗೆ ಪರಿಹಾರ ನೀಡಲು ಸರ್ಕಾರ ವಿಭಿನ್ನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಡಿಮೆ ದರದಲ್ಲಿ ಬೇಳೆಕಾಳುಗಳನ್ನು ಒದಗಿಸಲು 'ಭಾರತ್ ದಾಲ್' ಬ್ರಾಂಡ್‌ನ ಅಡಿಯಲ್ಲಿ ಪ್ರತಿ ಕೆಜಿಗೆ 60 ರೂ.ಯಂತೆ ಕಡಲೆಬೇಳೆ ಮಾರಾಟ ಮಾಡುವುದಾಗಿ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ದೆಹಲಿ-ಎನ್‌ಸಿಆರ್‌ನಲ್ಲಿರುವ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ (NAFED ನ ಚಿಲ್ಲರೆ ಮಳಿಗೆಗಳ ಮೂಲಕ ಕಡಲೆ ಬೇಳೆಯನ್ನು ಮಾರಾಟ ಮಾಡಲಾಗುತ್ತಿದೆ.
ಸಫಲ್ ನ ಚಿಲ್ಲರೆ ಅಂಗಡಿಯಲ್ಲಿ ಬೇಳೆಕಾಳು ಲಭ್ಯ :
ಈ ಅಗ್ಗದ ಬೆಲೆಯ ಬೇಳೆಕಾಳು ಎನ್‌ಸಿಸಿಎಫ್, ಕೇಂದ್ರೀಯ ಭಂಡಾರ್ ಮತ್ತು ಮದರ್ ಡೈರಿಯ ಸಫಲ್ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಅಧಿಕೃತ ಹೇಳಿಕೆಯ ಪ್ರಕಾರ, ಭಾರತ್ ದಾಲ್ ಬ್ರಾಂಡ್ ಹೆಸರಿನಲ್ಲಿ ಒಂದು ಕೆಜಿ ಪ್ಯಾಕ್‌ಗೆ 60 ರೂ. ದರದಲ್ಲಿ ಮಾರಾಟ ಮಾಡಲು ಪ್ರಾರಂಭಿಸಲಾಗಿದೆ. ಇದಲ್ಲದೇ 30 ಕೆಜಿಯ ಪ್ಯಾಕ್‌ಗೆ ಸಬ್ಸಿಡಿ ದರದಲ್ಲಿ ಕೆ.ಜಿಗೆ 55 ರೂ.ಯಂತೆ ಬೇಳೆ ಮಾರಾಟ ಮಾಡಲಾಗುವುದು. ‘ಭಾರತ್ ದಾಲ್ ಮೂಲಕ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಬೇಳೆಕಾಳು ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ : Bank Holidays in July 2023: ಮುಂದಿನ 14 ದಿನಗಳ ಪೈಕಿ 7 ದಿನ ಬ್ಯಾಂಕುಗಳಿಗೆ ರಜೆ
NAFEDನಿಂದ ಬೇಳೆ ಕಾಳುಗಳ ಮಿಲ್ಲಿಂಗ್ ಮತ್ತು ಪ್ಯಾಕೇಜಿಂಗ್ ಅನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ NCCF, ಕೇಂದ್ರೀಯ ಭಂಡಾರ್ ಮತ್ತು ಸಫಲ್‌ನ ಚಿಲ್ಲರೆ ಮಳಿಗೆಗಳು ಮತ್ತು ಮಾರಾಟ ಕೇಂದ್ರಗಳ ಮೂಲಕ ಮಾಡಲಾಗುತ್ತದೆ. ಈ ವ್ಯವಸ್ಥೆ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಅವರ ಕಲ್ಯಾಣ ಯೋಜನೆಗಳಿಗೆ, ಗ್ರಾಹಕ ಸಹಕಾರಿ ಅಂಗಡಿಗಳ ಮೂಲಕ ವಿತರಿಸಲು ಲಭ್ಯವಾಗುವಂತೆ ಮಾಡಲಾಗಿದೆ.
ಹೇಳಿಕೆಯ ಪ್ರಕಾರ, ಭಾರತದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಾಗಿದೆ. ಇದನ್ನು ದೇಶದಲ್ಲಿ ಅನೇಕ ರೂಪಗಳಲ್ಲಿ ಸೇವಿಸಲಾಗುತ್ತದೆ. ಇವುಗಳಲ್ಲಿ ಫೈಬರ್, ಕಬ್ಬಿಣ, ಪೊಟ್ಯಾಸಿಯಮ್, ವಿಟಮಿನ್ ಬಿ, ಸೆಲೆನಿಯಮ್ ಬೀಟಾ ಕ್ಯಾರೋಟಿನ್ ಮತ್ತು ಕೋಲೀನ್‌ನಲ್ಲಿ ಸಮೃದ್ಧವಾಗಿದೆ. ಇದು ರಕ್ತಹೀನತೆ, ರಕ್ತದಲ್ಲಿನ ಸಕ್ಕರೆ, ಮೂಳೆ ಆರೋಗ್ಯ ಇತ್ಯಾದಿಗಳನ್ನು ನಿಯಂತ್ರಿಸಲು ಮತ್ತು ಮಾನಸಿಕ ಆರೋಗ್ಯಕ್ಕೆ ಮಾನವ ದೇಹಕ್ಕೆ ಅವಶ್ಯಕವಾಗಿದೆ.
ಇದನ್ನೂ ಓದಿ : Arecanut Price: ₹57 ಸಾವಿರ ಗಡಿ ದಾಟಿದ ಅಡಿಕೆ ದರ, ರೈತರ ಮೊಗದಲ್ಲಿ ಮಂದಹಾಸ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.